ಸ್ವಾಮಿ ವಿವೇಕಾನಂದ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕುಃ ಆರ್.ಎಸ್. ಪಟ್ಟಣಶೆಟ್ಟಿ

ವಿಜಯಪುರ, ಮಾ.19-ಇಂದಿನ ಯುವಕರು ಅಂಗೈಯಲ್ಲಿಯೇ ಜಗತ್ತು ಎನ್ನುವ ಹಾಗೆ ಪ್ರೀತಿ, ವಿಶ್ವಾಸ, ರಕ್ತ ಸಂಬಂಧ, ಗೆಳೆತನ ಬಾಂಧವ್ಯಗಳನ್ನು ಬದಿಗೆ ಸರಿಸಿ ಮೊಬೈಲ ಸಂಸ್ಕøತಿಗೆ ಮಾರು ಹೋಗಿ ನಮ್ಮ ಸಂಸ್ಕøತಿಯನ್ನು ಮರೆಯುತ್ತಿದ್ದಾರೆ ಸಾಹಿತಿಗಳಾದ ಆರ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ತಿಕೋಟಾ ಪಟ್ಟಣದಲ್ಲಿಂದು ಭಾರತ ಯುವವೇದಿಕೆ ಚಾರಿಟೇಬಲ್ ಫೌಂಡೇಶನ್ ವಿಜಯಪುರ ತಿಕೋಟಾ ತಾಲೂಕು ಘಟಕದ ವತಿಯಿಂದ ಮನ ಮನತು ವಿವೇಕ ಅಭಿಯಾನ ಹಾಗೂ ರಾಷ್ಟ್ರ ಜಾಗೃತಿ ಪುಸ್ತಕ ವಿತರಣೆ ಕಾರ್ಯಕ್ರಮ ಪಟ್ಟಣದ ಎ.ಬಿ. ಜತ್ತಿ ಪದವಿಪೂರ್ವ ಕಾಲೇಜಿನಲ್ಲಿ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಿನದ 24 ಘಂಟೆ ಎಲ್ಲಾ ನ್ಯೂಸ್ ಚಲನ್‍ಗಳಲ್ಲಿ ಬ್ರೇಕಿಂಗ್ ನ್ಯೂಸ್ ಸೊಗಿನಲ್ಲಿ ಸಂದೇಶಗಳಿಂದ ಹಾಗೂ ಮನೆಮುರುಕ ಧಾರವಾಹಿಗಳು ಕಥೆ ಹೊಂದಿರದ ಚಲನಚಿತ್ರಗಳು ವ್ಯಕ್ತಿ ಮತ್ತು ವ್ಯಕ್ತಿತ್ವಗಳಿಲ್ಲದ ಟಿವಿ ಕಾರ್ಯಕ್ರಮಗಳಿಗೆ ದಾಸರಾಗಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಮೈಗೂಡಿಸಿಕೊಡಿಕೊಂಡು ವಿವೇಕವನ್ನು ಬೆಳೆಸಿಕೊಳ್ಳಬೇಕು. ಭಾರತ ವಿಶ್ವಗುರು ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಅರ್ಜುನಗೌಡ ದೇವಕ್ಕಿ ಮಾತನಾಡಿ ನಮ್ಮ ಯುವಕರು ಬಸವಾದಿ ಶಿವಶರಣರ ಕಾಯಕತತ್ವ ಮೈಗೂಡಿಸಿಕೊಳ್ಳಬೇಕೆಂದು ಮತ್ತು ಯುವಶಕ್ತಿಯ ರಾಷ್ಟ್ರಶಕ್ತಿ ಎಂದು ನಂಬಿದ ಭಾರತ ದೇಶಕ್ಕೆ ಒಳ್ಳೆಯ ವಿಚಾರಗಳನ್ನು ಹೊಂದಿದ ಯುವಕರು ಮುಂದುಬರಬೇಕು ಎಂದರು.
ಆರ್.ಬಿ. ಪಾಟೀಲ ಮಾತನಾಡಿ ಇಂದಿನ ಯುವಕರು ಸಮಾಜಸೇವಾ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಮತ್ತು ವಿವೇಕಾನಂದ ಆದರ್ಶಗಳು ಸರ್ವಕಾಲಿಕವಾಗಿವೆ. ಇಂದಿನ ಯುವಕರು ಶಕ್ತಿವಂತರಾಗಿ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಈ ಸಂದರ್ಭದಲ್ಲಿ ತಿಕೋಟಾ ಪೋಲಿಸ ಠಾಣೆಯ ಸಬ್‍ಇನ್ಸಪೆಕ್ಟರರಾದ ಶ್ರೀಮತಿ ಎಸ್.ಕೆ. ಲಂಗೋಟಿ, ಎಎಸ್‍ಐ ಎಂ.ಎಂ. ಗುಂಜಗಿ, ಭಾರತ ಯುವ ವೇದಿಕೆ ಅಧ್ಯಕ್ಷ ಸುನೀಲ ಜೈನಾಪೂರ, ತಿಕೋಟಾ ಅಧ್ಯಕ್ಷ ಬೀರು ಗಾಡವೆ, ಶಶಿ ಸಂಗಣ್ಣವರ, ಉಮೇಶ ಗುಡಿಸಲುಮನಿ, ಅರುಣ ರಾಠೋಡ, ಪ್ರಕಾಶ ರಾಠೋಡ, ಕಿರಣ ರಾಠೋಡ, ಉಪನ್ಯಾಸಕರಾದ ಎಮ್.ಬಿ. ಮಠಪತಿ, ಸುರೇಶ ರಾಠೋಡ ಉಪಸ್ಥಿತರಿದ್ದರು.
ಪ್ರೊ. ಅಮರೇಶ ಸಾಲಕ್ಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.