ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆ

ಸಿಂದಗಿ;ಜ.13: ಅಮೇರಿಕಾದ ಚಿಕ್ಯಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದಿಂದ ಪ್ರತಿನಿಧಿಸಿ ಭಾರತದ ಅಂತರ ಆಧ್ಯಾತ್ಮಶಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸಿಡಿಲ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ನಟಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪ ಯುವ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಅಸಂಘಟಿತ ಕಾರ್ಮಿಕರ ಜಿಲ್ಲಾ ಸಂಚಾಲಕ ಮುತ್ತು ಶಾಬಾದಿ ಹೇಳಿದರು.
ಪಟ್ಟಣದ ಜ್ಞಾನಭಾರತಿ ಪ್ರೌಢಶಾಲೆಯಲ್ಲಿ ನಟಸಾರ್ವಭೌಮ ಹಂದಿಗನೂರು ಸಿದ್ರಾಮಪ್ಪ ಯುವ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆಯನ್ನು ಶಾಲೆಯ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಆಚರಿಸಿ ಮಾತನಾಡಿ, ಅವರ ಆದರ್ಶಗಳನ್ನು ನಾವೆಲ್ಲರು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿ ಶ್ರೀ ಸತೀಶ್ ಹಿರೇಮಠ ವಹಿಸಿದ್ದರು
ಈ ಸಂದರ್ಬದಲ್ಲಿ ವಿವೇಕಾನಂದರ ಜೀವನ ಚರಿತ್ರೆಯ ಹೊತ್ತಿಗೆ “ಯುವಕರಿಗೆ ಕರೆ” ಎಂಬ 150 ಪುಸ್ತಕಗಳನ್ನು ಉಚಿತವಾಗಿ ಮುತ್ತು ಶಾಬಾದಿ ವಿದ್ಯಾರ್ಥಿಗಳಿಗೆ ವಿತರಿಸಿದರು.
ಎಬಿವ್ಹಿಪಿ ಪ್ರಮುಖ ಮಲ್ಲು ಪೂಜಾರಿ ಅವರು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿ, ಕರೋನಾ ಬಗ್ಗೆ ತಿಳಿಸಿ ವಿವೇಕಾನಂದ ಆದರ್ಶವನ್ನು ತಿಳಿಸಿ ಎಲ್ಲರಿಗೂ ವಿತರಿಸಿ ಅಂತರವನ್ನು ಆಯ್ದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಡಾ. ಪ್ರಕಾಶ್ ಮೂಡಲಗಿ, ಶಿಕ್ಷಕರಾದ ಮಾಳು ಹೊಸೂರ್. ಬಸವರಾಜ ಶಿರಲ್ಕರ್. ಬುಳಪ್ಪ ಡಿ .ಮನೋಹರ್ ರುಗಿ .ರವಿ ತಳವಾರ. ಸುನಿಲ್ ನಾಗಾವಿ. ಪ್ರಶಾಂತ್ ಪೂಜಾರಿ. ಚಂದ್ರಕಾಂತ್ ಬಿರಾದಾರ್. ಹನುಮಂತ ತಳವಾರ್, ಪ್ರೇಮ ನಾಯಕ್. ಶಿಲ್ಪಾ ಪ್ರಕಾಶ್. ರಶ್ಮಿ ನಾಯಕ್. ಸಾವಿತ್ರಿ ಮೋದಿ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ವೃಂದ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು
ಮುಖ್ಯೋಪಾದ್ಯಯ ಜಗದೀಶ್ ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎ. ರಾಥೋಡ್ ನಿರೂಪಿಸಿದರು.