ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಆಚರಣೆ

ಕಲಬುರಗಿ,ಜ 12: ನಗರದ ರಾಜಾಪುರ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿಂದು ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವವನ್ನು ಹಮ್ಮಿಕೊಳ್ಳಲಾಯಿತು.
ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಮಿ ವಿಭಾಕರಾನಂದಜಿ ಮಹಾರಾಜ್,ಮಹೇಶ್ವರಾನಂಜಿ ಮಹಾರಾಜ್,ಸ್ವಾಮಿ ಚೈತನ್ಯಾನಂದಜಿ ಮಹಾರಾಜ್ ಅವರು ಸಾನಿಧ್ಯ ವಹಿಸಿದ್ದರು.
ನಗರ ಪೊಲೀಸ್ ಆಯುಕ್ತ ಚೇತನ್ ಆರ್,ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ, ಸಾಂಸ್ಕøತಿಕ ಚಿಂತಕ ಮಹಾದೇವಯ್ಯ ಕರದಳ್ಳಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಅವರು ಉಪಸ್ಥಿತರಿದ್ದರು.ನಗರದ ಮಿನಿವಿಧಾನಸೌಧದಿಂದ ರಾಮಕೃಷ್ಣ ವಿವೇಕಾನಂದ ಆಶ್ರಮದವರೆಗೆ ಸ್ವಾಮಿ ವಿವೇಕಾನಂದರ ಭವ್ಯ ಮೆರವಣಿಗೆ ಜರುಗಿತು.ಬಾಲಕ,ಬಾಲಕಿಯರು ಸ್ವಾಮಿ ವಿವೇಕಾನಂದರ ಉಡುಗೆಯಲ್ಲಿ ಕಂಗೊಳಿಸಿದರು.