ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಲಕ್ಷ್ಮೇಶ್ವರ,ಜ.13: ಭಾರತದ ಸಂಸ್ಕøತಿ, ಸಂಪ್ರದಾಯ, ಮೌಲ್ಯ-ಚಿಂತನೆಗಳ ಬಗೆಗೆ ಭಾರತವಷ್ಟೇ ಅಲ್ಲದೇ ವಿಶ್ವಕ್ಕೆ ಸದಭಿಪ್ರಾಯ,ಗೌರವ, ಅಭಿಮಾನ ಹಾಗೂ ಆಸಕ್ತಿ ಹೊಂದುವಂತೆ ಮಾಡಿದ ಶ್ರೇಯಸ್ಸು ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಒಡೆಯರ ಮಲ್ಲಾಪುರ ಮುರಾರ್ಜಿ ವಸತಿ ಶಾಲೆಯ ಪ್ರಾಚಾರ್ಯೆ ಡಿ.ಸಿ ನರೇಗಲ್ ಹೇಳಿದರು. ಒಡೆಯರ ಮಲ್ಲಾಪುರ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ವಿದ್ಯಾರ್ಥಿಗಳು, ಯುವ ಜನತೆಯೇ ದೇಶದ ಸಂಪತ್ತಾಗಿದ್ದು ಬಹುತೇಕ ಯುವಕರನ್ನೇ ಹೊಂದಿದ ದೇಶದಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಶಿಸ್ತು, ಆದರ್ಶ, ತತ್ವ, ಚಿಂತನೆಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಮಹೋನ್ನತ ಚಿಂತನೆ, ವಿಚಾರಧಾರೆಗಳನ್ನು ಮಕ್ಕಳು ಅಳವಡಿಸಿಕೊಳ್ಳಬೇಕು. ಎಲ್ಲರಲ್ಲೂ ನಮ್ಮ ದೇಶದ ಬಗ್ಗೆ ಅಭಿಮಾನ, ಸ್ವಾಭಿಮಾನ ಹೊಂದಬೇಕು. ಬಹುತೇಕ ಯುವಕರನ್ನೇ ಹೊಂದಿರುವ ದೇಶ ನಮ್ಮದಾಗಿದ್ದು ಈ ವರ್ಷ “ವಿಕಸಿತ ಯುವ ವಿಕಸಿತ ಭಾರತ’ ಎಂಬ ಧೈಯವಾಕ್ಯದೊಂದಿಗೆ ದೇಶದೆಲ್ಲೆಡೆ ಯುವ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಶಿಕ್ಷಕರಾದ ಎಂ.ಆಯ್.ಡಂಬಳ, ಎಸ್.ಎನ್.ನದಾಫ್, ರೂಪಾ ಮನ್ನಂಗಿ, ಸುನೀಲ ತಳ್ಳಳ್ಳಿ, ಎಸ್.ಎ ಮುಲ್ಲಾ, ಪ್ರವೀಣ ಗಾಯಕರ, ಎಸ್.ಎ. ಬೆಟಗೇರಿ, ಸಿ.ಎಸ್. ನಾವಿ, ವಿ.ಎಸ್. ರಾಠೋಡ, ಎಂ.ಪಿ ಹಮಸಾಗರ, ಎಂ.ಎಂ ಆದಿ, ಸಾವಿತ್ರಿ ಬೂದಿಹಾಳ, ಲಕ್ಷ್ಮೀ ಶಿರಹಟ್ಟ ಸೇರಿ ವಿದ್ಯಾರ್ಥಿಗಳು ಇದ್ದರು.