ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ಸರ್ವಕಾಲಿಕ

ಹರಿಹರ.ಜ.11; ಆಧ್ಯಾತ್ಮದ ತಳಹದಿ ಮೇಲೆ ದೇಶದ ಸಂಸ್ಕೃತಿ ಎತ್ತಿ ಹಿಡಿದು ಯುವಕರಿಗೆ ಸ್ಫೂರ್ತಿದಾಯಕವಾದ  ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ಸರ್ವಕಾಲಿಕ ಎಂದು ಮಾಜಿ ಶಾಸಕ ಬಿಪಿ ಹರೀಶ್ ಹೇಳಿದರು ನಾಳೆ ನಡೆಯಲಿರುವ ಸ್ವಾಮಿ ವಿವೇಕಾನಂದರ ಜನ್ಮ ದಿನದ ಆಚರಣೆಯ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಹರಿಹರ ಇವರ ಆಶ್ರಯದಲ್ಲಿ ಏಕತಾ ನಡಿಗೆ ವಿವೇಕ್ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ವಿದ್ಯಾರ್ಥಿಗಳು ಯುವಕರು ಮುಖ್ಯವಾಗಿ  ಸಮಯಪ್ರಜ್ಞೆ ಕಲಿಯಬೇಕು ಸಹ ಸತತ ಅಭ್ಯಾಸ ಇಲ್ಲದಿದ್ದರೆ  ಯಶಸ್ಸು ಸಾಧ್ಯವಿಲ್ಲ ಇಚ್ಛಾಶಕ್ತಿ, ಕ್ರಿಯಾ ಶಕ್ತಿಗಳನ್ನು ಜೀವನದಲ್ಲಿ ಕಾರ್ಯರೂಪಕ್ಕೆ ತಂದವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ . ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಉನ್ನತ ಅಂಶಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ವಿದ್ಯಾರ್ಥಿಗಳು ಯುವಕರು ಮನಸ್ಸುಗಳನ್ನು ಹತೋಟಿಯಲ್ಲಿಟ್ಟುಕೊಂಡು ಏಕಾಗ್ರತೆ ಬೆಳೆಸಿಕೊಳ್ಳಬೇಕು ಆಗ ಮಾತ್ರ ಸಾಧನೆಯತ್ತ ದೃಷ್ಟಿ ಹರಿಸಬಹುದು ಎಂದು ಹೇಳಿದರು ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರು ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ ಅವರು ಇಡೀ ದೇಶವನ್ನೇ ಕಾಲ್ನಡಿಗೆಯಲ್ಲಿ ನಡೆದು ಈ ದೇಶವನ್ನು ಸರಿಯಾಗಿ ಅಧ್ಯಯನ ಮಾಡಿದ್ದಾರೆ ಭಾರತ ದೇಶದ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಯುವದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಯುವ ಜನಾಂಗ ಮತ್ತು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ ಹಾಗೂ ಸ್ಪಷ್ಟ ಉದ್ದೇಶವನ್ನಿಟ್ಟುಕೊಂಡು ಸ್ವಾಮಿ ವಿವೇಕಾನಂದರ ಮಹತ್ತರವಾದ ಉಪದೇಶಗಳು ನಮ್ಮ ಪಾಲಿಗೆ ದಾರಿ ದೀಪಗಳಾಗಿವೆ ಅವರ ತತ್ವ ಆದರ್ಶ ಮೈಗೂಡಿಸಿಕೊಂಡು ನಮ್ಮ ಭಾರತೀಯ ದೇಶದ ಸಂಸ್ಕೃತಿ ಪರಂಪರೆ ಉಳಿಸುವ ಕಾರ್ಯಕ್ಕೆ ಯುವಪಡೆ ಮುಂದಾಗಬೇಕೆಂದು ಕರೆ ನೀಡಿದರು ವಿವೇಕಾನಂದರ ನಡಿಗೆ ಕಾರ್ಯಕ್ರಮವು ನಗರದ ಮಹಾತ್ಮ ಗಾಂಧಿ ಮೈದಾನದಿಂದ ಆರಂಭವಾಗಿ ಹರಪನಹಳ್ಳಿ ರಸ್ತೆ, ಪಿಬಿ ರಸ್ತೆ ,ಹರಿಹರೇಶ್ವರ ದೇವಸ್ಥಾನದ ರಸ್ತೆ, ಗಾಂಧಿನಗರ, ಮಹಾತ್ಮಗಾಂಧಿ, ರಾಣಿ ಚನ್ನಮ್ಮ ವೃತ್ತ ರಾಜ ಬೀದಿಗಳಲ್ಲಿ ಸಂಚರಿಸಿ ವಿವೇಕಾನಂದರ ವಾಣಿ ಘೋಷಣೆಗಳನ್ನು ಕೂಗುತ್ತಾ ವಿವೇಕ್ ನಡಿಗೆ ಕಾರ್ಯಕ್ರಮವನ್ನು ನಡೆಸಿದರು ಈ ಸಂದರ್ಭದಲ್ಲಿ ನಗರಸಭಾ ಸದಸ್ಯರುಗಳಾದ ಎನ್ ರಜನಿಕಾಂತ್ . ವಿಜಯಕುಮಾರ್. ಹನುಮಂತಪ್ಪ ಆಟೋ .ನೀತಾ ಮೆಹರವಾಡೆ .ಅಶ್ವಿನಿ ಕೃಷ್ಣ .ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್ .ದೂಡಾ ಸದಸ್ಯ ರಾಜು ರೊಖಡೆ .ವಕೀಲ ಅನಂದ ಕುಮಾರ್ .ರಾಘವೇಂದ್ರ, ಮಾರುತಿ ಶೆಟ್ಟಿ .ಮಂಜುನಾಯ್ಕ .ತುಳಜಪ್ಪ ಭೂತೆ .ರವಿ ರಾಯ್ಕರ್ .ಸಂತೋಷ ಗುಡಿಮನಿ .ರವಿ ರಾಜ್ .ಕಿರಣ್ . ಜಿ ಎಂ ಪ್ರಶಾಂತ್ ಕುಮಾರ್ .ಶಾಂತಕುಮಾರ್ ಇಂದಿರಾನಗರ.ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಕುಮಾರ್ .ಬಾತಿ ಚಂದ್ರಶೇಖರ್ .ರವಿ ರಾಜ್ ಗುರು . ಮಹಿಳಾ ಮೋರ್ಚಾ ಅಧ್ಯಕ್ಷೆ ಸಂತೋಷಿ ಮೋಹಿತೆ .ರೂಪ ಶಶಿಕಾಂತ್ .ರೂಪಾ ಕಾಟ್ವೆ . ನಗರಸಭೆಯ ಮಾಜಿ ಉಪಾಧ್ಯಕ್ಷೆ ಅಂಬುಜಾ ಬಾಯಿ .ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು,ಕಾರ್ಯಕರ್ತರು, ಅಭಿಮಾನಿಗಳು, ವಿವೇಕ್ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು