ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಭಾರತದ ಸಾಂಸ್ಕøತಿಕ ರಾಯಭಾರಿ

ಕಲಬುರಗಿ,ಜ.13:” ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಭಾರತದ ಸಾಂಸ್ಕøತಿಕ ರಾಯಭಾರಿಯಾಗಿದ್ದರು. ಅವರು ಪ್ರಾಚೀನ ಭಾರತೀಯ ಮೌಲ್ಯಗಳು ಮತ್ತು ಆಧ್ಯಾತ್ಮಿಕತೆಯನ್ನು ಪೂರ್ವಾತ್ಯಕ್ಕೆ ಮತ್ತು ಪಾಶ್ಚಿಮಾತ್ಯಕ್ಕೆ ಕೊಂಡೊಯ್ದರು” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರಾದ ಶ್ರೀ ಕೋಟ ಸಾಯಿಕೃಷ್ಣ ಹೇಳಿದರು.
ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ “ಸ್ವಾಮಿ ವಿವೇಕಾನಂದರು ಯುವಕರನ್ನು ಪ್ರೇರೇಪಿಸಿದ್ದಾರೆ ಮತ್ತು ಅವರ ಭಾಷಣಗಳು ಯುವಕರÀ ಕನಸುಗಳನ್ನು ನನಸಾಗುವಂತೆ ಮಾಡಿವೆÉ. ಶಿಕ್ಷಣವೆಂದರೇನು ಎಂದು ಜಗತ್ತಿಗೆ ತಿಳಿಯದಿದ್ದಾಗ ಭಾರತ ಜಗತ್ತಿಗೆ ಜ್ಞಾನವನ್ನು ನೀಡಿದೆ. ಭಾರತೀಯ ಜ್ಞಾನ ವ್ಯವಸ್ಥೆಯು ಪ್ರಪಂಚದ ಕಲ್ಯಾಣಕ್ಕೆ ಕೊಡುಗೆ ನೀಡಿದೆ. ಯುವಕರು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಬಹುದೆಂದು ಅವರು ಯುವಕರನ್ನು ಹೆಚ್ಚು ಪ್ರೆರೆಪಿಸಿದರು”.

ಸ್ವಾಮಿ ವಿವೇಕಾನಂದರ ಇತರ ಕೊಡುಗೆಗಳ ಕುರಿತು ಮಾತನಾಡಿದ ಅವರು, “ಶಿಕ್ಷಣ, ನಿಸ್ವಾರ್ಥ ಸಮಾಜ ಸೇವೆ, ವೈಜ್ಞಾನಿಕ ಆಧ್ಯಾತ್ಮಿಕತೆ ಮತ್ತು ರಾಷ್ಟ್ರೀಯತೆಗೆ ಅವರ ಕೊಡುಗೆ ಬಹಳ ಪ್ರಮುಖವಾಗಿದೆ. ಅವರ ಪ್ರಕಾರ ಶಿಕ್ಷಣವು ಮನುಷ್ಯನನ್ನು ರೂಪಿಸುವ ಮತ್ತು ವ್ಯಕ್ತಿತ್ವ ನಿರ್ಮಾಣಮಾಡುವಂತಿರಬೇಕು. ಅವರು ನಿμÁ್ಕಮ ಕರ್ಮ ಮತ್ತು ನಿಶ್ವಾರ್ಥ ಸೇವೆಗೆ ಒತ್ತು ನೀಡಿದ್ದಾರೆ. ಅವರು ಕುರುಡು ನಂಬಿಕೆ ಮತ್ತು ಆಚರಣೆಯನ್ನು ಟೀಕಿಸಿದ್ದಾರೆ. ಅವರು ಧರ್ಮದ ಗಡ್ಡು ಸಿದ್ಧಾಂತಗಳನ್ನು ಪ್ರಶ್ನಿಸಿದ್ದಾರೆ. ದೇಶದ ಹಿಂದುಳಿದಿರುವಿಕೆ, ವಂಚಿತ ವರ್ಗದ ಸ್ಥಿತಿ ಮತ್ತು ಸಾಮಾಜಿಕ ವಿಭಜನೆಯ ಬಗ್ಗೆ ಅವರು ತೀವ್ರವಾಗಿ ಚಿಂತಿತರಾಗಿದ್ದರು. ಬಲಿಷ್ಠ ಪ್ರಜೆಗಳಿರುವ ಬಲಿಷ್ಠ ರಾಷ್ಟ್ರಕ್ಕಾಗಿ ಅವರು ಪ್ರತಿಪಾದಿಸಿದ್ದಾರೆ. ಆದ್ದರಿಂದ ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಿಯುಕೆ ಕುಲಸಚಿವ ಪೆÇ್ರ.ಬಸವರಾಜ ಡೋಣೂರ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ “ಸ್ವಾಮಿ ವಿವೇಕಾನಂದÀರು ಆಧುನಿಕ ಆಧ್ಯಾತ್ಮಿಕ ಚಿಂತಕರಾಗಿದ್ದಾರೆ. ಜನರು ಅವರ ಬಗ್ಗೆ ಮತ್ತು ಅವರ ಆದರ್ಶಗಳ ಬಗ್ಗೆ ಇವತ್ತಿಗೂ ಆಸಕ್ತಿ ಕಳೆದುಕೊಂಡಿಲ್ಲ. ಅವರು ನಮಗೆ ದೊಡ್ಡ ಮತ್ತು ಶ್ರೇಷ್ಠ ಮಾದರಿಯ ವ್ಯಕ್ತಿಯಾಗಿದ್ದಾರೆ. ಬಲಿಷ್ಠ ರಾಷ್ಟ್ರವನ್ನು ಕಟ್ಟಲು ಅವರು ನಮಗೆ ಪ್ರೇರಣೆ ನೀಡಿದ್ದಾರೆ. ಭಾರತ ಅತ್ಯಂತ ಶ್ರೀಮಂತ ದೇಶವಾಗಿದ್ದು, ದೇಶದ ಶ್ರೀಮಂತಿಕೆಯನ್ನು ಅರಿಯದೆ ನಾವು ಬಡವರಾಗಿದ್ದೇವೆ. ವೈವಿಧ್ಯತೆಯಲ್ಲಿ ಏಕತೆ ರಾಷ್ಟ್ರದ ದೊಡ್ಡ ಶಕ್ತಿ, ನಾವು ಅದನ್ನು ರಕ್ಷಿಸಬೇಕು ಮತ್ತು ಬಳಸಿಕೊಳ್ಳಬೇಕು.” ಎಂದು ಹೇಳಿದರು
ಇದಕ್ಕೂ ಮುನ್ನ ರಾಷ್ಟ್ರಿಯ ಸೇವಾ ಯೊಜನೆಯ ಸಂಯೋಜಕ ಶ್ರೀ. ಶಿವಂ ಮಿಶ್ರಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ರವಿಕಿರಣ್ ನಾಕೋಡ್, ಕುಮಾರಿ ಪ್ರೀತಿ ಮತ್ತು ವಿದ್ಯಾಶ್ರೀ ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು. ಡಾ.ಕುಮಾರ್ ಮಂಗಲಂ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಡೀನ್‍ರು, ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.