ಸ್ವಾಮಿ ವಿವೇಕಾನಂದರು ದೇಶದ ಕೀರ್ತಿ ಹೆಚ್ಚಿಸಿದ್ದರು: ಅಭಿಯೋಜಕಿ ಎನ್.ಮೀನಾಕ್ಷಿ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಜ.13; ಸ್ವಾಮಿ ವಿವೇಕಾನಂದರು ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದರು ಹಾಗೂ ದೇಶದ ಯುವ ಸಮೂಹಕ್ಕೆ ಸ್ಪೂರ್ತಿದಾಯಕರಾಗಿದ್ದು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕಿ ಎನ್.ಮೀನಾಕ್ಷಿ ಹೇಳಿದರು.ಪಟ್ಟಣದ ಹೆಚ್.ಪಿ.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಹಾಗೂ ಹೆಚ್.ಪಿ. ಎಸ್. ಪದವಿ ಪೂರ್ವ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ಯುವ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಗೀಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.ದೇಶದ ಸಂಪತ್ತು ಯುವ ಶಕ್ತಿಯಾಗಿದ್ದು, ಯುವ ಶಕ್ತಿ ಬಲಿಷ್ಟವಾಗಲು ಸ್ವಾಮಿ ವಿವೇಕಾನಂದರ ನುಡಿಗಳು ತುಂಬಾ ಅವಶ್ಯವಾಗಿವೆ. ಒತ್ತಡದ ಬದುಕಿನಲ್ಲಿ ಜ್ಞಾನ ವಿದ್ಯೆ ಬುದ್ದಿ, ಶುಚಿತ್ತ, ಶ್ರದ್ದೆ, ಗುರಿ, ತುಂಬಾ ಮುಖ್ಯವಾಗಿದ್ದು, ಅವರೊಂದಿಗೆ ದೇಶದ ಸಂವಿಧಾನ ನಮ್ಮ ಹಕ್ಕು ಕರ್ತವ್ಯಗಳನ್ನು ಅರಿತುಕೊಂಡು ನಡೆಯಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೇಲ್ ಮಾತನಾಡಿ, ದೇಶದಲ್ಲಿ ವೃದ್ದರು ಮತ್ತು ಮಕ್ಕಳು ಒಂದೇ ಆಗಿದ್ದು, ಸ್ವಾಮಿ ವಿವೇಕಾನಂದರ ತತ್ವಾದರ್ಶ ನುಡಿಗಳನ್ನು ಅರಿತು ಯುವ ಶಕ್ತಿ ದೇಶಕ್ಕೆ ಮಾದರಿಯಾಗಬೇಕು ಎಂಬುವುದನ್ನು ಚಿಂತಿಸುವ ಮೂಲಕ ದೇಶದ ಅಭಿವೃದ್ದಿಗೆ ಶ್ರಮಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿರು.ಹೆಚ್.ಪಿ.ಎಸ್. ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಬೆನಕನಕೊಂಡ, ವಕೀಲ ಎಂ. ಮೃತ್ಯುಂಜಯ ರಾಷ್ಟಿçÃಯ ಯುವ ದಿನಾಚರಣೆ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ವಕೀಲ ಸಂಘದ ಉಪಾಧ್ಯಕ್ಷ ಸಿ.ಪೀರ್ ಅಹಮ್ಮದ್, ಕಾರ್ಯದರ್ಶಿ ಜಿ.ಎಸ್.ಎಂ. ಕೊಟ್ರಯ್ಯ, ಸಹಾಯಕ ಸರ್ಕಾರಿ ಅಬಿಯೋಜಕಿ ನಿರ್ಮಲ. ಡಿ, ಉಪನ್ಯಾಸಕರಾದ ರವೀಂದ್ರ, ವೆಂಕಟೇಶ್, ಮಾಳ್ಗಿ ಮಂಜುನಾಥ್, ಅರುಣ್ ಕುಮಾರ್, ಶಂಕರ್, ವಕೀಲರುಗಳಾದ ನಳೀನಿ, ಎನ್. ಸಿದ್ದೇಶ್, ಬಿ.ತಿಪ್ಪೇಶ್, ತಾಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂಧಿಗಳಾದ ಕೋಟ್ರೇಶ್, ಬಸವರಾಜ್ ಸೇರಿದಂತೆ ಇತರರು ಇದ್ದರು.