ಸ್ವಾಮಿ ವಿವೇಕಾನಂದರು ಜಗತ್ತು ಕಂಡ ಶ್ರೇಷ್ಟ ಸಂತಃ ಡಾ.ಕಾಗಲಕರೆಡ್ಡಿ

ವಿಜಯಪುರ, ಜ.13-ಆಧ್ಯಾತ್ಮ ಚಿಂತಕ, ತತ್ವಜ್ಞಾನಿ, ತಪಸ್ವಿ, ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಹೊರಹೊಮ್ಮಿ ಜಗತ್ತಿಗೆ ಭಾರತದ ಕೊಡುಗೆಯನ್ನು ತೋರಿಸಿದ ಜಗತ್ತು ಕಂಡ ಶ್ರೇಷ್ಟ ಸಂತ ನಮ್ಮೆಲ್ಲರ ಆದರ್ಶಪ್ರಾಯ ಸ್ವಾಮಿ ವಿವೇಕಾನಂದರು ಎಂದು ಡಾ.ಕಾಗಲಕರೆಡ್ಡಿ ಹೇಳಿದರು.
ನಗರ ಅಖಿಲ ಭಾರತದ ವೀರಶೈವ ಲಿಂಗಾಯತ ಮಹಾಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಜನ್ಮದಿನ ಮತ್ತು ರಾಷ್ಟ್ರೀಯ ಯುವದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಇಂದಿನ ಯುವಕರಿಗೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷರಾದ ರಾಘವ ಅಣ್ಣಿಗೇರಿ ಅವರು ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಅದಮ್ಯಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲಾಗುತ್ತದೆ ಎಂದ ಹೇಳಿದರು.
ಭಾರತ ಯುವ ವೇದಿಕೆಯ ಉಪಾಧ್ಯಕ್ಷರಾದ ಮಹಾಂತೇಶ ಹಿರೇಮಠ ಸ್ವಾಮಿ ವಿವೇಕಾನಂದರು ಪ್ರಕರ ಮಾತುಗಳಿಂದ ವಿಶ್ವವನ್ನೇ ಬೆರಗುಗೊಳಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದರು ಎಂದರು.
ಆರ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ಕ್ರಾಂತಿಕಾರಿಗಳಿಗೆ ವಿಜ್ಞಾನಿಗಳಿಗೆ ಉದ್ಯಮಿಗಳಿಗೆ ರಾಜರಿಗೆ, ಸಂತರಿಗೆ ಹೀಗೆ ಎಲ್ಲಾ ಆಯಾಮಗಳ ಎಲ್ಲಾ ವರ್ಗಗಳ ಜನರಿಗು ಅವರು ಪ್ರೇರಣೆ ನೀಡಿದ್ದಾರೆ. ಆ ಆಯಾಮಗಳಲ್ಲಿ ಸ್ವಾಮಿ ವಿವೇಕಾನಂದರನ್ನು ನೋಡುವುದು ಸೂಕ್ತ.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಯುವಪ್ರಶಸ್ತಿ ಪುರಸ್ಕøತ ಸಂತೋಷಕುಮಾರ ಎಸ್. ನಿಗಡಿ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಕೊಳ್ಳಬೇಕೆಂದು ಹೇಳಿದರು.
ಅತಿಥಿಗಳಾಗಿ ಕ್ಫಿ. ಕಿರಣ ಓಸ್ವಾಲ, ಭಾರತ ಯುವ ವೇದಿಕೆಯ ಅಧ್ಯಕ್ಷರಾದ ಮಹಾದೇವಿ ತಳಕೇರಿ, ವೀರಶೈವ ಲಿಂಗಾಯತ ಬಾದರಬಂಡಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸುನೀಲ ರಾ. ಜೈನಾಪುರ, ಕಾರ್ತಿಕ ಸಾಳುಂಕೆ, ವರುಣ, ಜಗದೀಶ ದೇಸಾಯಿ, ಸಂಜೀವ ಹೂಗಾರ, ರವಿ ಸಿಂಹಾಸನ, ಪ್ರಕಾಶ ರಾಠೋಡ, ಅರುಣ ರಾಠೋಡ, ಕಿರಣ ಪವಾರ, ಸಚಿನ ಪವಾರ, ಬಾಳು ಪವಾರ, ದತ್ತಾ ವಾಲಿ, ವಿರೇಶ ಗಣಾಚಾರಿ, ಆನಂದ ಅತಾಲಟ್ಟಿ, ವಿನೋದ ಭಜಂತ್ರಿ, ಶಿವಾನಂದ ಕೋಳಿ, ಸಂದೀಪ ರಾಠೋಡ, ಉಮೇಶ ಗುಡಸಲಮನಿ, ಜಗದೀಶ ಹಿರೇಮಠ, ಫಯಾಜ ಬಾರವಾಲೆ, ದರ್ಶನ ಕಲಕೇರಿ, ಸಂಗಮೇಶ ಹಿರೇಮಠ, ಸತೀಶ ಲಮಾಣಿ, ವಿನೋದ ಪತ್ತಾರ, ಪ್ರಾರ್ಥನಾ ಗೀತೆಯನ್ನು ಶಂಕರ ಕೆಂದೂಳ್ಳಿ, ನಿರೂಪಣೆಯನ್ನು ಬೀರು ಗಾಡವೆ, ವಂದನಾರ್ಪಣೆಯನ್ನು ಸತೀಶ ನಾಗಠಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.