ಸ್ವಾಮಿ ವಿವೇಕಾನಂದರು ಈ ದೇಶ ಕಂಡ ಮಹಾನ್ ತತ್ವಜ್ಞಾನಿ – ರಾಜಗುರು

ರಾಯಚೂರು.ಜ.೧೫-ಭಾರತ ಸೇವಾದಳ ಜಿಲ್ಲಾ ಸಮಿತಿ ರೈತರು ನೆಹರು ಯುವ ಕೇಂದ್ರ ಯುವ ಸಬಲೀಕರಣ ಇಲಾಖೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಚಾಮುಂಡೇಶ್ವರಿ ಮಹಿಳಾ ಮಂಡಳಿ ರಾಯಚೂರು ಭಾರತೀಯ ಸೇವಾದಳ ಜೇಗರಕಲ್ ಶಾಖೆ ಇವರುಗಳ ಸಹಯೋಗದಲ್ಲಿ ಸರ್ಕಾರಿ ಪ್ರೌಢಶಾಲೆ ಜೇಗರಕಲ್ ನಲ್ಲಿ ಸ್ವಾಮಿ ವಿವೇಕಾನಂದರ ೧೫೯ ನೇ ಜಯಂತಿ ಆಚರಿಸಲಾಯಿತು.
ರುದ್ರಮುನಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಉದ್ಘಾಟನೆ ನೆರವೇರಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಬಾಲ್ಯದಲ್ಲಿ ಬಹಳ ತುಂಟತನ ಮಾಡುತ್ತಿದ್ದನು ನಂತರ ತಮ್ಮ ಇಪ್ಪತ್ತೈದನೆ ವರ್ಷದಲ್ಲಿ ಆಧ್ಯಾತ್ಮಿಕದ ಕಡೆ ಒಲವು ತೋರಿಸಿ ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯನಾಗಿ ರಾಮಕೃಷ್ಣ ಮಿಷನ್ ಸ್ಥಾಪನೆ ಮಾಡುತ್ತಾನೆ.
ನಂತರ ಅಮೇರಿಕದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿದು ವಿಶ್ವದಲ್ಲೇ ಭಾರತದ ಕೀರ್ತಿಯನ್ನು ಬೆಳಗುವಂತೆ ಮಾಡಿದ ವೀರ ಸನ್ಯಾಸಿ ಮಹಾಪುರುಷ. ಶ್ರೇಷ್ಠ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು ಎಂದು ತಿಳಿಸಿದರು.
ನಂತರ ಜಿ.ಎಸ್.ಹಿರೇಮಠ ರವರು ಮಾತನಾಡುತ್ತಾ ಸೇವಾದಳದ ವಿದ್ಯಾರ್ಥಿಗಳು ಪ್ರಾಮಾಣಿಕತೆ ನಿಷ್ಠೆ ಮೈಗೂಡಿಸಿಕೊಳ್ಳಬೇಕು ಜೀವನದಲ್ಲಿ ೧ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ತಿಳಿಸಿದರು. ಸ್ವಾಮಿ ವಿವೇಕಾನಂದರು ಮೌಡ್ಯಗಳನ್ನು ವಿರೋಧಿಸಿ ಪ್ರತಿಯೊಬ್ಬರಲ್ಲಿ ಜಾಗೃತಿಯನ್ನು ಮೂಡಿಸಿದರು. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸೇವೆ ಮನೋಭಾವ ಮೂಡಿಸಿಕೊಳ್ಳಲು ತಿಳಿಸಿದರು.
ಹಸೀನಾ ಬಾನು ಮುಖ್ಯೋಪಾಧ್ಯಾಯರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ನಮ್ಮ ಶಾಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ವಿದ್ಯಾರ್ಥಿಗಳು ಮಹಾನ್ ನಾಯಕರುಗಳ ದೇಶಪ್ರೇಮಿಗಳ ತತ್ತ್ವ ಆದರ್ಶಗಳನ್ನು ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಶಾಲೆಗೆ ಪಾಲಕರಿಗೆ ಗ್ರಾಮಕ್ಕೆ ಕೀರ್ತಿ ತರಬೇಕೆಂದು ತಿಳಿಸಿದರು.
ನರಹರಿ ದೇವರು ದೈಹಿಕ ಶಿಕ್ಷಣ ಶಿಕ್ಷಕರು ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಭಾಷಣದಲ್ಲಿ ಹಾಗು ಚಿತ್ರ ಕಲೆ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರಿ ಸೋನಿ ಉಮರಿ ಗಂಗಮ್ಮ ಕುಮಾರಿ ಲಕ್ಷ್ಮಿ ಮಹಾಲಕ್ಷ್ಮಿ ಕುಮಾರ್ ಮನೋಜ್ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಎಂ.ಗಿರಿಯಪ್ಪ ದಿನ್ನಿ ಕಾರ್ಯಕ್ರಮ ನಿರೂಪಿಸಿದರುಕೊನೆಯಲ್ಲಿ ರಮಣ ವಯರ್ ಶಿಕ್ಷಕರು ವಂದನಾರ್ಪಣೆ ಮಾಡಿದರು. ವೇದಿಕೆಯ ಮೇಲೆ ಶೋಭಾ ಉಪಾಸಿ ರೂಪಾದೇವಿ ಜೋತ್ಸ್ನಾ, ದೇವಿ ವಿಜಯಲಕ್ಷ್ಮಿ, ಸಮಾಜ ಶಿಕ್ಷಕರು ವಿಜಯಲಕ್ಷ್ಮಿ, ಸಂಗೀತ ಶಿಕ್ಷಕರು, ಪ್ರಸನ್ನ ದೇವಿ, ಪದ್ಮಾವತಿ ರಾಮಣ್ಣ ಉಪಸ್ಥಿತರಿದ್ದರು.