ಸ್ವಾಮಿ ವಿವೇಕನಂದ ಜಯಂತಿ: ವಾಷಿ೯ಕ ಕ್ರೀಡಾಕೂಟ

ರಾಯಚೂರು,ಜ.೧೩- ನಗರದ ಬಸವಶ್ರೀ ಶಾಲೆಯಲ್ಲಿ ಸ್ವಾಮಿ ವಿವೇಕನಂದ ಜಯಂತಿಯ ಅಂಗವಾಗಿ ಶಾಲಾ ವಾಷಿ೯ಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.
ಈ ಕಾಯ೯ಕ್ರಮದ ಉದ್ಘಾಟಕರಾಗಿ ಯುವಜನ ಕ್ರೀಡಾ ಇಲಾಖೆಯ ಅಧಿಕಾರಿಗಳಾದ ಈರೇಶ ನಾಯಕ ಅವರು ಸ್ವಾಮಿ ವಿವೇಕನಂದರ ಭಾವಚಿತ್ರಕ್ಕೆ ಮಾಲಾಪಾ೯ಣೆ ಮಾಡುವುದರ ಮೂಲಕ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಾ, ಮಕ್ಕಳಿಗೆ ಬೇಕಾದ ಮೂರು ಮುಖ್ಯ ಅಂಶಗಳು ಊಟ, ಆಟ, ಪಾಠ, ಪಾಲಕರು, ಶಿಕ್ಷಕರು ಹಾಗೂ ಅಧಿಕಾರಿಗಳು ಈ ಅಂಶಗಳನ್ನೊಳಗೊಂಡತೆ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಾಗಿ ಶ್ರಮಿಸಬೇಕು ಎಂದರು.
ಅವರು ಇಂದು ಮುಂದುವರೆದು ಮಾತಾನಾಡುತ್ತ ಬಸವಶ್ರೀ ಶಾಲೆಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಹಮ್ಮಿಕೊಂಡಿದ್ದ ಶಾಲಾ ವಾಷಿ೯ಕ ಕ್ರೀಡಾಕೂಟ ನಿಜಕ್ಕೂ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ವಿಜಯಕುಮಾರ ಪಾಟೀಲ ಶಾವಂತಗೇರ ಚೇರ್ಮನ್ ರೆಡ್ ಕ್ರಾಸ್ ಸೊಸೈಟಿ ಬೆಂಗಳೂರು ಇವರು ಕ್ರೀಡಾ ಧ್ವಜವನ್ನು ಹಾರಿಸಿದರು.
ಎನ್.ಹೆಚ್.ಭಾಷಾ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಸುಗುಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ. ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕರಾದ ಲಲಿತಾ ಎಂ. ಹಾಗೂ ಸಚ್ಚಿನ್ ಮಾಲಿ ಪಾಟೀಲ್ ಉಪಸ್ಥಿತರಿದ್ದರು. ನಂದಿತಾ ಕಾಯ೯ಕ್ರಮವನ್ನು ನಿರೂಪಿಸಿದಳು. ಗಾಯತ್ರಿ ಸ್ವಾಗತಿಸಿ, ವಂದಿಸಿದಳು.