ಸ್ವಾಮಿ ನಿರ್ಭಯಾನಂದ ಸ್ವಾಮಿಜಿಯವರಿಂದ ಎಸ್.ಜಿ.ಟಿ ವಿದ್ಯಾರ್ಧಿಗಳಿಗೆ ವ್ಯಕ್ತಿ ವಿಕಸನ ಉಪನ್ಯಾಸ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.22: ‘ನಹಿ ಜ್ಞಾನೇನ ಸದೃಶಂ’ ಎಂದರೆ ಜ್ಞಾನಕ್ಕೆ ಸಮನಾದ ಎಲ್ಲ ಕಾಲಕ್ಕು ಸಲ್ಲುವ ಅಮೂಲ್ಯ ವಸ್ತು ಮತ್ತೊಂದಿಲ್ಲ ಎಂದು ಗದಗಿನ ವಿವೇಕಾನಂದ ಕೇಂದ್ರದ ಅಧ್ಯಕ್ಷರಾದ ಶ್ರೀ ನಿರ್ಭಯಾನಂದ ಸ್ವಾಮಿಜಿಯವರು ಅಭಿಪ್ರಾಯಪಟ್ಟರು.
ಅವರು ನಗರದ ರಾಮಕೃಷ್ಣ ವಿವೇಕಾನಂದ  ಕೇಂದ್ರದಲ್ಲಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ವ್ಯಕ್ತಿಯಲ್ಲಿ ಪರಿವರ್ತನೆ ಬಂದು ತನ್ನ ಗುರಿಯ ಕಡೆಗೆ ಸಾದನೆ ಪ್ರಾರಂಭಿಸಿದ  ದಿನವೇ ಅವನ ನಿಜವಾದ ಪುರ್ನಜನ್ಮ ದಿನ. ರತ್ನಾಕರ ಕೊಲೆಗಾರನಾಗಿದ್ದರು ನಾರದರಿಂದ ಉಪದೇಶ ಪಡೆದು ದ್ಯಾನ ಅಥವ ತಪಸ್ಸನ್ನು ಹತ್ತು ವರ್ಷಗಳ ಕಾಲ ಮಾಡಿ ವಾಲ್ಮೀಕಿಯಾದನು. ಎರಡನೇ ಮಹಾಯುದ್ದದ ನಂತರ ಅತ್ಯಂತ ದಡ್ಡನಾಗಿದ್ದ ಇಸ್ರೇಲ್‍ನ ಜಿವ್ಸ್ ಜನಾಂಗದ ಐನ್‍ಸ್ಟೀನ್ ದಡ್ಡನೆಂಬ ಅಪಮಾನಗಳಿಗೆ ಬೆಂದು ಜ್ಞಾನವನ್ನು ಪಡೆಯಬೇಕೆಂಬ ಹಟಹೊಂದಿ ಎರಡು ನೋಬಲ್ ಬಹುಮಾನಗಳನ್ನು ಪಡೆಯುವಷ್ಟು ಎತ್ತರವನ್ನು ಸಾದಿಸಿದ. ದೇವರು ಪ್ರತಿಯೊಬ್ಬರಿಗು ಅಂತಹ ಮೆದುಳನ್ನು ಹಾಗು ಸಮಯವನ್ನು ದಯಪಾಲಿಸಿದ್ದಾನೆ. ಇವೆರಡನ್ನು ಯಾರು ಜಾಗುರಕತೆಯಿಂದ ಬಳಸುತ್ತಾರೋ ಅವರ ಬದುಕು ಸಾರ್ಥಕ. ವಿವೇಕಾನಂದರು ನಿನ್ನ ಉದ್ದಾರದ ಶಕ್ತಿ ನೀನೇ, ಶಕ್ತಿಯೇ ಜೀವನ-ದೌರ್ಬಲ್ಯವೇ ಮರಣ, ನಿನ್ನ ಶಕ್ತಿ ಕಂಡುಕೊಂಡಾಗ ದುಷ್ಟ ತನ ಹೋಗುತ್ತದೆ ಒಳ್ಳೆತನ ಉಳಿಯುತ್ತದೆ. ವೇದಗಳಲ್ಲಿ ಹೇಳಿದಂತೆ ಪ್ರಥಮವಾಗಿ ಉಗಮಿಸಬೇಕಾದ ಬೆಂಕಿ ನಿನ್ನಲ್ಲಿಯೇ ಇದೆ ಎಂದು ತಿಳಿಸಿದೆ.
ಕಾಲಿಲ್ಲದವಳು ಸೋಲು ಒಪ್ಪಿಕೊಳ್ಳದೇ ಒಲಂಪಿಕ್ಸ್‍ನಲ್ಲಿ ಓಡಿ ನಾಲ್ಕು ಚಿನ್ನ ಪಡೆದಿದ್ದಾಳೆ, ರವಿ ಚೆನ್ನಣ್ಣನವರು ಕಡು ಬಡತನ ಮತ್ತು ಕನ್ನಡ ಮೀಡಿಯಂ ವಿದ್ಯಾರ್ಥಿಯಾದರು ಸಾದನೆಯಿಂದ ಶ್ರೇಷ್ಟವಾದ ಪೋಲೀಸ್ ಅಧಿಕಾರಿಯಾಗಿ ರಾಜ್ಯಕ್ಕೆ ಬೇಕಾಗಿದ್ದಾರೆ. ಹೀಗೆ ಅನೇಕ ಉದಾಹರಣೆಗಳನ್ನು ನೀಡಿ ವಿದ್ಯಾರ್ಥಿಗಳ ಮನ ಪರಿವರ್ತನೆಯಾಗುವಂತೆ ಮಾಡಿ ವಿದ್ಯಾರ್ಥಿಗಳನ್ನು ಆಕರ್ಷಿಸಿದರು. ಎಸ್.ಜಿ.ಟಿ ಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಆಶ್ರಮದ ಕಾರ್ಯದಿರ್ಶಿಗಳಾದ ಜಗನ್ನಾಥ್‍ ಹಾಗು ಎಸ್.ಜಿ.ಟಿ ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರಕಾಶ್ ಸಾರಂಗಮಠ ಶ್ರೀಗಳಿಗೆ ಸನ್ಮಾನಿಸಿದರು. ಪ್ರಭು ಕಪ್ಪಗಲ್, ಅಡವಿ ಸ್ವಾಮಿಯವರು, ಗ್ರಾಮೀಣ ಬ್ಯಾಂಕ್ ಸಿದ್ದೇಶ್‍, ಶ್ರೀನಿವಾಸ್‍, ಉಡೇದ ಪ್ರಭು, ಉಪನ್ಯಾಸಕರು,  ವಿದ್ಯಾರ್ಥಿಗಳು ಮತ್ತು ಅನೇಕ ಗಣ್ಯರು ಭಾಗವಹಿಸಿದ್ದರು.