ಸ್ವಾಮಿಸ್ಟ್ಯಾನ್ ಬಂಧನ ವಿರೋಧಿಸಿ ಪ್ರತಿಭಟನೆ

ಕಲಬುರಗಿ ನ 3: ಸಾಮಾಜಿಕ ಹೋರಾಟಗಾರ ರೆವರೆಂಡ್ sಸ್ವಾಮಿ ಸ್ಟ್ಯಾನ್ ಬಂಧನ ವಿರೋಧಿಸಿ ಇಂದು ಕರ್ನಾಟಕ ಯುನೈಡೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆ ವತಿಯಿಂದ ಮೌನ ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.s
ಸ್ವಾಮಿ ಸ್ಟ್ಯಾನ್ ಅವರು ಜಾರ್ಖಂಡ್ ರಾಜ್ಯದಲ್ಲಿ ಆದಿವಾಸಿಗಳ ,ಬಡವರ ಕಾರ್ಮಿಕರ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಿದ್ದಾರೆ.ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ 83 ವರ್ಷದ ಇಳಿ ವಯಸ್ಸಿನ ಅವರ ಬಂಧನ ಅಧಿಕಾರದ ದುರುಪಯೋಗ ಮತ್ತು ದೌರ್ಜನ್ಯವಾಗಿದೆ.ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಬರ್ಟ ಮಿರಾಂಡ್,ಸಿಮಿಯೋನ್ ಸ್ಯಾಮ್ಯುಯೆಲ್ ಸೇರಿದಂತೆ ಇತರರು ಪಾಲ್ಗೊಂಡರು