ಸ್ವಾಭಿಮಾನಿ ಮತದಾರರಿಂದ ಕಾಂಗ್ರೆಸ್ ಗೆಲವು ಬಾದರ್ಲಿ

ಸಿಂಧನೂರು.ಮೇ.೩-ಬಿಜೆಪಿ ಮುಖಂಡರು ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಕಷ್ಟು ಹಣ ಹಂಚ್ಚಿದರುಸಹ ಮಸ್ಕಿ ಕ್ಷೇತ್ರದ
ಮತದಾರರು ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದು ಇದರಿಂದ ಬಿಜೆಪಿ ಮುಖಂಡರುಗಳು ಭ್ರಮ
ನೀರಸನ ಗೊಂಡಿದ್ದಾರೆ ಎಂದು ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಬಸನಗೌಡ ಬಾದರ್ಲಿ ಹೇಳಿದರು.
ನಗರದ ಯುವ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಶಿರ ಹಾಗೂ ಆರ್.ಆರ್ ನಗರ ಚುನಾವಣೆ ಮಾಡಿ ದಂತೆ ಮಸ್ಕಿಯಲ್ಲಿ ವಿಜಯೇಂದ್ರ ಮಾಡಿದರುಸಹ ಅವರ ಆಟ ನಡೆಯಲ್ಲಿಲ್ಲ ಆವರ ಹಣ ಹಾಗೂ ಆಧಿಕಾರಕ್ಕೆ ಮರುಳಾಗದೆ ರೈತನ ಮಗ ಬಸವನಗೌಡ ತುರ್ವಿಹಾಳರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರಗೆ ಸರಿಯಾದ ಪಾಠವನ್ನು ಮತದಾರರು ಕಲಿಸಿದ್ದಾರೆ ಎಂದರು. ಪಕ್ಷದ ರಾಜ್ಯ ಹಾಗೂ ಜಿಲ್ಲೆಯ ಮುಖಂಡರುಗಳು ಹಾಗೂ ಕಾರ್ಯಕರ್ತರು ತಾವೆ ಅಭ್ಯರ್ಥಿ ಎಂದು ತಿಳಿದು ಅಭ್ಯರ್ಥಿ ಗೆಲವುಗಾಗಿ ಹೊರಾಡಿ ಮತದಾರರ ಮನಗೆಲ್ಲುವಲ್ಲಿ ಯಶಸ್ವಿ ಯಾಗಿದ್ದಾರೆ ಕ್ಷೇತ್ರದ ಮತದಾರರು ಅದರಲ್ಲಿ ಮಹಿಳೆಯರು ಚುನಾವಣೆಗೆ ಹಣ ದೇಣಿಗೆ ನೀಡುವ ಜೋತೆಗೆ ಮತ ಹಾಕಿ ಬಸವನಗೌಡ ತುರ್ವಿಹಾಳ ಅವರನ್ನು ಗೆಲ್ಲಿಸಿ ಐತಿಹಾಸಿಕ ತೀರ್ಪ ನೀಡಿದ್ದಾರೆ.
ಮಸ್ಕಿ ಕ್ಷೇತ್ರದ ಸ್ವಾಭಿಮಾನಿ ಮತದಾರರಿಗೆ ಎಷ್ಟು ಕೃತಜ್ಞತೆಗಳುನ್ನು ಸಲ್ಲಿಸಿದರು ಕಡಿಮೆ ನಿಮ್ಮ ಋಣ ತೀರಿಸಲು ಕ್ಷೇತ್ರದ ಅಭಿವೃದ್ಧಿಗಾಗಿ ವಿಧಾನಸಭೆಯಲ್ಲಿ ಶಾಸಕ ಬಸನಗೌಡ ತುರ್ವಿಹಾಳ ಹಾಗೂ ಪಕ್ಷ ಹೊರಾಟ ಮಾಡತ್ತದೆ ಎಂದರು.
ಬಿಜೆಪಿ ನೋಟು ಕಾಂಗ್ರೆಸ್‌ಗೆ ಓಟು ಎಂದು ಪಕ್ಷದ ಅಧ್ಯಕ್ಷ ರಾದ ಡಿ.ಕೆ ಶಿವಕುಮಾರ್ ಮಾತನ್ನು ಮತದಾರರು ಅಕ್ಷರಸಹ ಪಾಲಿಸಿದ್ದಾರೆ.
ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವಂತೆ ಡಿ.ಕೆ ಮಾತಿನಂತೆ ಪಕ್ಷದ ಮುಖಂಡರು ಚಾಚು ತಪ್ಪದೆ ಪಾಲಿಸಿ ಬಸವನಗೌಡ ತುರ್ವಿಹಾಳ ಅವರನ್ನು ಗೆಲ್ಲಿಸಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ ಪ್ರೀಯ ಕಾರ್ಯಕ್ರಮಗಳನ್ನು ಜನ ಮರೆತ್ತಿಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳಿಗೆ ಜನ ರೊಸಿ ಹೋಗಿ ಬಿಜೆಪಿ ಅಭ್ಯರ್ಥಿ ಬಡ್ಡಿ ವ್ಯಾಪಾರದ ಪ್ರತಾಪ ಪಾಟೀಲ್ ವರನ್ನ ಜನ ಸೋಲಿಸಿ ಬಸವನಗೌಡರನ್ನು ೩೦ ಸಾವಿರ ಅಧಿಕ ಮತಗಳಿಂದ ಗೆಲಿಸಿ ಪಕ್ಷಾಂತರ ಪ್ರತಾಪ ಪಾಟೀಲ್‌ರನ್ನು ಮತದಾರರು ಮನೆಗೆ ಕಳಿಸಿದ್ದಾರೆ. ಎಂದರು. ಪಕ್ಷದ ಯುವ ಕಾಂಗ್ರೆಸ್ ಮುಖಂಡರಾದ ಶಿವು ಕುಮಾರ್ ಜವಳೆ, ಅರ್ ವೆಂಕಟೇಶ್ ನಾಯಕ್, ಖಾಜ ಹುಸೇನ್ ರೌಡಕುಂದ ಸೇರಿದಂತೆ ಇತರರು ಪತ್ರಿಕೆ ಗೊಷ್ಟಿಯಲ್ಲಿ ಇದ್ದರು.