ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನಾ ಸಭೆ…

ಸಂಜೆವಾಣಿ ವಾರ್ತೆ

ಜಗಳೂರು.ಫೆ.22 :- ಪಕ್ಷೇತರ ಪರಾಜಿತ ಅಭ್ಯ ರ್ಥಿ ಮಾಜಿ ಶಾಸಕ ಎಚ್.ಪಿ ರಾಜೇಶ್ ಬಿಜೆಪಿ-ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳುವ ವಿಚಾರ ಇನ್ನೂ ನಿಗೂಢವಾಗಿಯೇ ಉಳಿಯಿ ತು ಇಂದಿನ ಸಭೆಯಲ್ಲಿ .!ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ನಡೆ ದ ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನೆ ಸಭೆಯಲ್ಲಿ ಎಚ್. ಪಿ ರಾಜೇಶ್ ರಾಷ್ಟ್ರೀಯ ಪಕ್ಷಯೊಂದರಲ್ಲಿ ಸೇರುವ ನಿಲವು ಪ್ರಕಟಿ ಸುವ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಸ್ಪಷ್ಟ ನಿರ್ಧಾರ ಸಿಗಲಿಲ್ಲ. ಆದರೂ,ಸಭೆಯಲ್ಲಿ ಮಹತ್ತರ ಬೆಳವಣಿಗೆಗಳು ನಡೆದವು.ಸಭೆಯಲ್ಲಿ ಹಲವು ಮುಖಂಡರುಗಳು ಟಿಕೇಟ್ ತಪ್ಪಿಸಿದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿ ಪಕ್ಷ ಸೇರ್ಪಡೆಯಾಗಬೇಕಿದೆ ಎಂದು ವ್ಯಾಪಕವಾಗಿ ಅಭಿಪ್ರಾಯ ವ್ಯಕ್ತವಾದವು.ಉಳಿದಂತೆ ಕೆಲ ಮುಖಂ ಡ ರುಗಳು ಯಾವುದೇ ಪಕ್ಷಕ್ಕೆ ಸೇರ್ಪಡೆಯಾದರೂ ತಮ್ಮ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ.ಆದರೆ ತಮ್ಮ ಸ್ಥಾನ ಭದ್ರಪಡಿ ಸಿಕೊಂಡು ಸೇರ್ಪಡೆಗೊಳ್ಳಬೇಕು ಎಂದು ಸಲಹೆ ನೀಡಿದರು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,10 ವರ್ಷ ಪಕ್ಷ ನಿಷ್ಠೆ ಯಿಂದ ಶ್ರಮಿಸಿದೆ. ಅಲ್ಲದೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಅತಿಹೆಚ್ಚು ಅಧ್ಯಕ್ಷ ಸ್ಥಾನಗಳಿಸಿದ ಇತಿಹಾಸವಿದೆ.ಆದರೂ ನನಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್ ಕೈತಪ್ಪಿ ತು.ಆ ವೇಳೆ ನನಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನಡೆಸಿ ಕ್ಷೇತ್ರದ ಪ್ರತಿ ಬೂತ್ ಮಟ್ಟದಿಂದಲೂ ಸ್ವಾಭಿಮಾನಿ ಕಾರ್ಯಕರ್ತರ ವ್ಯಾಪಕ ಬೆಂಬಲದಿಂದ ಕೇವಲ 1250 ಮತಗಳ ಅಂತರದ ಸೋಲು ನನಗೆ ಸೋಲು ಎನಿಸದೆ ತೃಪ್ತಿತಂದಿದೆ.ಆದರೆ ಶಾಸಕನಾಗಿ ಆಯ್ಕೆ ಯಾಗು ವ ಅದೃಷ್ಟ ಸಿಗಲಿಲ್ಲ.ಕಷ್ಟಕಾಲದಲ್ಲಿ ಕೈಹಿಡಿದ ಮತದಾರ ರಿಗೆ ಸದಾ ಚಿರ ಋಣಿ ಎಂದು ಭಾವುಕರಾದರು.ಕಳೆದ ವಾರದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯ ನಂತರ ಕಾಂಗ್ರೆ ಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರು ಸಂಪರ್ಕಿ ಸಿ ಆಹ್ವಾನಿಸಿದ್ದಾರೆ.ಆದರೆ ನಾನು ಏಕಪಕ್ಷೀಯ ನಿರ್ಧಾರ ಕೈಗೊಳ್ಳ ದೆ.ಯಾವುದೇ ಆಮಿಷೆ ಗೊಳಗಾಗದೆ ನನ್ನ ಅಭಿಮಾನಿ ದೇವರುಗ ಳು ಸ್ವಾಭಿಮಾನಿ ಕಾರ್ಯಕರ್ತರು ಯಾವುದೇ ಆಮಿಷೆ ಗಳಿಗೆ ಬಲಿ ಯಾಗಿ ಸ್ಥಾನಪಲ್ಲಟವಾಗದೆ,ವಿಚಲಿತರಾಗದೆ ನನ್ನನ್ನೇ ನಂಬಿರುವ ತಮ್ಮ ಮಾರ್ಗದರ್ಶನ,ಅಭಿಪ್ರಾಯ,ಪಡೆದು ಮುನ್ನಡೆ ಯುವೆ. ಇಂದಿನ ಸಭೆಯ ಅಭಿಪ್ರಾಯ ಕ್ರೂಢೀಕರಿಸಿ ನಂತರ ಮತ್ತೊಂದು ಮಹತ್ವದ ನಿರ್ಣಯ ಸಭೆ ನಡೆಸಿ ನಮಗೆ ಗೌರವಿಸು ವ,ಸ್ವಾಭಿ ಮಾನಕ್ಕೆ ದಕ್ಕೆ ತರದ ಪಕ್ಷಕ್ಕೆ ಲೋಕಸಭಾ ಚುನಾವಣೆ ವೇಳೆಗೆ ಸೇರ್ಪಡೆಯಾಗುವ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳನ್ನು ಹಳ್ಳಿಗಳಲ್ಲಿ ಮನೆಮನೆಗೆ ಪ್ರಚಾರ ಪಡಿಸುವಾಗ.ಹಾಲಿ ಶಾಸಕ ಬಿ.ದೇವೇಂದ್ರಪ್ಪ ಅವರು ಟಿಕೇಟ್ ಗಾಗಿ ಬೆಂಗಳೂರಿಗೆ ಪದೇ ಪದೇ ತೆರಳುತ್ತಿದ್ದರು.ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಏನಿದೆ? ಎಂದು ಪ್ರಶ್ನಿಸಿದರು.ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಎಲ್ಲಾ ನಿರೀಕ್ಷೆಯಿತ್ತು.ಆಗ ಸ್ವಾಭಿ ಮಾನಿ ಪಕ್ಷದಿಂದ ನಾನು ಸ್ಪರ್ಧಿಸಿದ್ದರ ಪರಿಣಾಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣವಾಯಿತು.ಅದನ್ನು ಮರೆತು ಹಾಲಿ ಶಾಸಕರು ತೆಂಗಿನ‌ಮರ ಗುರುತಿಗೆ ಮತ ಚಲಾಯಿಸಿದವರ ನ್ನು ತಾತ್ಸಾರ ಮಾಡುವುದು ಸರಿಯಲ್ಲ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಎನ್.ಎಸ್.ರಾಜಣ್ಣ,ಬೇವಿನ ಹಳ್ಳಿ.ಯಶವಂತಗೌಡ,ಬಾಬುರೆಡ್ಡಿ,ಗಡಿಗುಡಾಳ್ ಸುರೇಶ್, ಬೈರೇಶ್ .ಗಡಿ ಮಾಕುಂಟೆ ಶಿವಕುಮಾರ್,ತಿಪ್ಪೇಸ್ವಾಮಿಗೌಡ,ನಿವೃತ್ತ ಶಿಕ್ಷಕ ದೇವ ರಾಜ್, ಸಲಾಂ ಸಾಹೇಬ್,ಬೈರೇಶ್,ರಾಜಶೇಖಗೌಡ,ಮಹಾಂತೇಶ್ ನಾಯ್ಕ,ತಳವಾರ ಮಂಜಣ್ಣ,ವಕೀಲ.ಮರೇನಹಳ್ಳಿ ಬಸವರಾಜ್, ಕರಿಬಸಪ್ಪ, ನಾಗರಾಜ್, ಪುರುಷೋತ್ತಮನಾಯ್ಕ, ವೇಮಣ್ಣ, ನಾಗರಾಜ್, ಸೂರಲಿಂಗಪ್ಪ,ಬಿ.ಲೊಕೇಶ್,ರೇವಣ್ಣ,ಶ್ರೀನಿವಾಸ್,ಗಿಡ್ಡಪ್ಪ,ತಿಪ್ಪೇಸ್ವಾಮಿ,ಬಸಣ್ಣ,ಓಬಳೇಶ್,ವೆಂಕಟೇಶ್. ರೇವಣ್ಣ. ಬೊಮ್ಮುಲಿಂಗಪ್ಪ ನಾಗರಾಜ್. ಸೋಮಶೇಖರ.ಮಧು.ಸೇರಿದಂತೆ ಭಾಗವಹಿಸಿದ್ದರು.

ReplyForward