ಸ್ವಾಭಿಮಾನಿಗಳು ದಳಪತಿಗೆ ಜೈ ಎಂದಿದ್ದಾರೆ:ಬಿರಾದಾರ

ತಾಳಿಕೊಟೆ:ಮೇ.15: ದೇವರ ಹಿಪ್ಪರಗಿ ಮತಕ್ಷೇತ್ರದ ಸ್ವಾಭಿಮಾನಿ ಮತದಾರರು ಈ ಭಾರಿ ಹಣ ಹೆಂಡ ಯಾವುದಕ್ಕೂ ಬೆಲೆ ನೀಡದೇ ಸ್ವಾಭಿಮಾನಿ ಧಳಪತಿ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರಿಗೆ ಜೈ ಎಂದಿದ್ದಾರೆಂದು ಜೆಡಿಎಸ್ ತಾಲೂಕಾ ಕಾರ್ಯಾಧ್ಯಕ್ಷ ಮಡುಸಾಹುಕಾರ ಬಿರಾದಾರ ಅವರು ಹೇಳಿದರು.

ದೇವರ ಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಅವರು ಭಾರಿಮತಗಳ ಅಂತರದಿಂದ ಜಯ ಸಾಧಿಸಿದಕ್ಕೆ ಗಡಿಸೋಮನಾಳ ಗ್ರಾಮದಲ್ಲಿ ಆಯೋಜಿಸಲಾದ ವಿಜಯೋತ್ಸವದಲ್ಲಿ ನೇತೃತ್ವವಹಿಸಿ ಮಾತನಾಡಿದ ಅವರು ರಾಜುಗೌಡ ಪಾಟೀಲರು ಅಭಿವೃದ್ದಿ ಪೂರಕ ಚಿಂತಕರಾಗಿದ್ದಾರೆ ಅವರು ಎರಡು ಭಾರಿ ಸೋಲುಂಡಿದ್ದರೂ ಕೂಡಾ ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವಂತಹ ವ್ಯಕ್ತಿಯಾಗಿದ್ದಾರೆ ಜನರೊಂದಿಗೆ ಅವರು ಸದಾ ಕಾಲ ಹೊಂದಿದ್ದ ಒಡನಾಟ ಅಭೂತಪೂರ್ವ ಜಯ ಸಾಧಿಸಲು ಕಾರಣವಾಗಿದೆ ದೇವರ ಹಿಪ್ಪರಗಿ ಮತಕ್ಷೇತ್ರದ ಮತದಾರರು ಹಣ ಹೆಂಡಕ್ಕೆ ತಮ್ಮ ಮತಗಳನ್ನು ಮಾರಿಕೊಳ್ಳದೇ ಸ್ವಾಭಿಮಾನಿಗಳಾಗಿದ್ದಾರೆಂಬುದು ರಾಜುಗೌಡರ ಗೆಲವಿನ ಅತ್ಯಧಿಕ ಮತಗಳೇ ಸಾಕ್ಷೀಯಾಗಿವೆ ಎಂದರು.

ಈ ಸಮಯದಲ್ಲಿ ಜೆಡಿಎಸ್ ಮುಖಂಡ ಭೀಮನಗೌಡ ತಂಗಡಗಿ, ಒಳಗೊಂಡು ನೂರಾರು ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.