ಸ್ವಾಬ್ ಪಡೆಯದೆ 700 ರೂಗೆ ಕೊರೊನಾ ನೆಗೆಟಿವ್ ವರದಿ ಖದೀಮರ ಸೆರೆ

ಬೆಂಗಳೂರು,ಏ.೩೦- ಕೊರೊನಾವನ್ನೇ ಬಂಡವಾಳ ಮಾಡಿಕೊಂಡು ಸ್ವಾಬ್ ಪಡೆಯದೆ ೭೦೦ರೂಗಳನ್ನು ಪಡೆದು ಕೊರೊನಾ ನೆಗೆಟಿವ್ ವರದಿ ನೀಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚೌಡದೇನಹಳ್ಳಿಯ ಮುಖೇಶ್ ಸಿಂಗ್(೨೫) ಹಾಗೂ ಹೊಸಹಳ್ಳಿಯ ನಾಗರಾಜು ಅಲಿಯಾಸ್ ಓಂಶಕ್ತಿ(೩೯) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ವರ್ತೂರಿನ ಸರ್ಜಾಪುರ ರಸ್ತೆಯಲ್ಲಿ ಅಂಗಡಿ ಇಟ್ಟಿದ್ದ ಆರೋಪಿಗಳು, ಸ್ವಾಬ್ ಪಡೆಯದೆ ೭೦೦ಕ್ಕೆ ಕೊರೊನಾ ನೆಗೆಟಿವ್ ವರದಿ ನೀಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು
ಕೂಡಲೇ ಕಾರ್ಯಾರಣೆಗಿಳಿದ ಸಿಸಿಬಿ ಪೊಲೀಸರು ಜನ ಸಾಮನ್ಯರಂತೆ ತೆರಳಿ ಕೊರೊನಾ ವರದಿ ಕೇಳಿದ್ದಾರೆ.
ಈ ವೇಳೆ ಆರೋಪಿಗಳು ಸ್ವಾಬ್ ಪಡೆಯದೇ ನೆಗೆಟಿವ್? ವರದಿ ನೀಡಿದ್ದಾರೆ. ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಐದು ನೆಗೆಟಿವ್ ರಿಪೋರ್ಟ್ ಮತ್ತು ಮೊಬೈಲ್?ಗಳನ್ನು ವಶಕ್ಕೆ ಪಡೆದು ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಆರೋಪಿ ಮುಖೇಶ್ ಸಿಂಗ್ ರಾಜಸ್ಥಾನ ಮೂಲದವನಾಗಿದ್ದು ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಈ ಕೃತ್ಯ ನಡೆಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.