ಸ್ವಾಧೀನದಾರರಿಗೆ ಭೂ ಮಂಜೂರು ಮಾಡಲು ಒತ್ತಾಯ

ರಾಯಚೂರು.ಜು.೦೮-ಇನಾಂ ರದ್ದಿಯಾತಿ ಕಾಯ್ದೆ ೧೦ರ ಅನ್ವಯ ಸ್ವಾಧೀನದಾರರಿಗೆ ಸಾಧಿಸದಂತೆ ಭೂ ಮಂಜೂರಾತಿ ಮಾಡಲು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬುರು ಹೋಬಳಿಯ ಮಲದಕಲ್ ಗ್ರಾಮದ ಸರ್ವೇನಂ ೨೧೭ ವಿಸ್ತೀರ್ಣ : ೨೭ ಎಕರೆ ೩೯ ಗುಂಟೆ ಜಮೀನು ಸರೋಜಮಿ ಗಂಡ ಶ್ರೀನಿವಾಸರಾವ್ ದೇಸಾಯಿ ಈ ಜಮೀನು ಇನಾಂ ಜಮೀನುವಾಗಿದ್ದು, ಸದರಿ ಮಲದಕಲ್ ಗ್ರಾಮದ ಪರಿಶಿಷ್ಟ ಜಾತಿ ಮಾದಿಗ ಜನಾಂಗದ ಭೂ ರಹಿತ ಕುಟುಂಬಗಳು ಸುಮಾರು ೨೫ ರಿಂದ ೩೦ ವರ್ಷಗಳಿಂದ ಇನಾಮುದಾರರ ಅನುಮತಿಯಂತೆ ಸಾಗುವಳಿ ಮಾಡಿಕೊಂಡು ಜಮೀನಿನ ಅವಲಂಬಿತವಾಗಿ ಅವರ ಕುಟುಂಬವನ್ನು ಘೋಷಿಸಿಕೊಂಡು ಬಂದಿರುತ್ತಾರೆ.
ಆದರೆ ಅವರ ಕುಟುಂಬದ ಹಿರಿಯರು ಅವಿದ್ಯಾವಂತರಾಗಿದ್ದು ಇವರಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ ೪೮( ೧ ) ೬ ರಂತೆ ೧೧ ವರ್ಷಗಳ ಅನುಭವದ ತರುವಾಯ ಯಾವುದೇ ಮಂಜೂರಾತಿಯನ್ನು ರದ್ದುಪಡಿಸಲು ಬರುವುದಿಲ್ಲವೆಂದು ಕಾನೂನಿನ ಅಜ್ಞಾನ ಇಲ್ಲದಿರುವದರಿಂದ ಜಿಲ್ಲಾಧಿಕಾರಿಗಳು ಕರ್ನಾಟಕ ಭೂ ಕಂದಾಯ ಕಾಯ್ದೆ ೧೩೬ ( ೩ ) ರ ಅಧಿನಿಯಮ ೧೯೬೪ ರಂತೆ ಸದರಿ ಜಮೀನನ್ನು ಪರಿಶೀಲಿಸದೆ ಅನುಭವದಾರರಿಗೆ ಯಾವುದೇ ತಿಳುವಳಿಕೆ ನೋಟಿಸನ್ನು ನೀಡದೆ ಕಂದಾಯ ಭೂ ಸುಧಾರಣೆ ಕಾಯ್ದೆಯಂತೆ ೧೩೦೩ / ೧೩೪೪೫-೭೬ ರ ಮ್ಯುಟೀಶನ್ ನಂಬರ್ : ೧೮೨ ದಿನಾಂಕ : ೦೭-೦೮ ೨೦೧೨ ರ ರೀತ್ಯಾ ಯಾವುದೇ ವಿಚಾರಣೆಯನ್ನು ಮಾಡದೆ ಸರಕಾರದ ವಶಕ್ಕೆ ಪಡೆದಿರುವುದು ಕಾನೂನು ಬಾಹಿರವಾಗಿರುತ್ತದೆ. ಆದಕಾರಣ ತಾವುಗಳು ಮಲದಕಲ್ ಗ್ರಾಮದ ಸರ್ವೇನಂ : ೨೧೭ ವಿಸ್ತೀರ್ಣ : ೨೭ ಎಕರೆ ೨ ಗುಂಟೆ ಜಮೀನು ಇನಾಂ ರದ್ದಿಯಾತಿ ನಿಯಮ ಸೆಕ್ಷನ್ ೧೦ ಮತ್ತು ೧೧ ರ ನಿಯಮಾನುಸಾದ ಪರಿಶಿಷ್ಟ ಜಾತಿಯ ಭೂ ರಹಿತ ಬಡವರಿಗೆ ಅವರ ಧೀರ್ಘಾವಧಿ ಅನುಭವವನ್ನು ಪರಿಶೀಲಿಸಿ, ಕರ್ನಾಟಕ ಭೂ ಕಂದಾಯ ಕಲಂ ೪೯ ( ೧ ) ( ೬ ) ಸಿದ್ದುಪಡಿ ಕಾಯ್ದೆಯ ರೀತ್ಯಾ ಅನುಭವದಾರರಿಗೆ ಭೂ ಮಂಜೂರಾತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಾಕರಗಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.