ಸ್ವಾತಂತ್ರ್ಯ ಹೋರಾಟದ ತ್ರಿರತ್ನ ಭಗತಸಿಂಗ್, ಸುಖದೇವ, ರಾಜಗುರು

ಕಲಬುರಗಿ:ಮಾ.24: ಭಗತಸಿಂಗ್,ಸುಖದೇವ ಮತ್ತು ರಾಜಗುರು ಅವರು ಬ್ರಿಟೀಷರನ್ನು ಭಾರತದಿಂದ ಹೊಡೆದೋಡಿಸಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡುವಲ್ಲಿ ಸಾಕಷ್ಟು ಪ್ರಯತ್ನಿಸಿದ್ದಾರೆ.ಅದಕ್ಕಾಗಿ ಬಾಲ್ಯದಲ್ಲಿಯೇ ನೇಣುಗಂಬ ಏರಿದ ಅವರು ಸ್ವಾತಂತ್ರ್ಯ ಹೋರಾಟದ ತ್ರಿರತ್ನಗಳು ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಮಹಾದೇವ ನಗರದಲ್ಲಿರುವ ಸ್ವಾತಿ, ಶಿವಾ ವಿದ್ಯಾ ಮಂದಿರ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ಭಗತಸಿಂಗ, ಸುಖದೇವ ಮತ್ತು ರಾಜಗುರು ಹುತಾತ್ಮ ದಿನಾಚರಣೆಯಲ್ಲಿ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದ ಭಗತಸಿಂಗ, ಸುಖದೇವ ಮತ್ತು ರಾಜಗುರು ಅಪ್ಪಟ ದೇಶಭಕ್ತರಾಗಿದ್ದಾರೆ. ಅವರಲ್ಲಿರುವ ದೇಶಪ್ರೇಮ ಈಗಿನ ಎಲ್ಲಾ ಯುವಕರು ಅಳವಡಿಸಿಕೊಂಡು ದೇಶ ಸೇವೆ ಮಾಡಬೆಕು ಎಂದರು.

ಕಾರ್ಯಕ್ರದಮಲ್ಲಿ ಶಿವಯೋಗಪ್ಪ ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಶಿಕ್ಷಕರಾದ ಸ್ವಾತಿ ಆರ್.ಪವಾಡಶೆಟ್ಟಿ, ಪ್ರೀತಿ ಜೆ.ಬಿರಾದಾರ, ಸ್ವಾತಿ ಆರ್.ಪವಾಡಶೆಟ್ಟಿ, ಚಂದ್ರಲೇಖಾ ಪೂರ್ಮಕರ್, ಸಾವಿತ್ರಿ ಎನ್.ಪಾಟೀಲ, ಕಾಶಮ್ಮ ಎಸ್.ಚಿಂಚೋಳಿ, ವರ್ಷಾರಾಣಿ, ಈಶ್ವರಿ ಹಂಗರಗಿ, ರೋಹಿತ್ ಸಿ.ವೈ., ಶಿಲ್ಪಾ ಎಸ್.ಕೆ., ಮಾಯಾದೇವಿ ಲಕ್ಷ್ಮೀ ತಾಂಡೂರಕರ್, ಚಂದ್ರಲೇಖಾ ಪೂರ್ಮಕರ್, ಪ್ರೀತಿ ಜೆ.ಬಿರಾದಾರ, ಸಾವಿತ್ರಿ ಎನ್.ಪಾಟೀಲ, ಈಶ್ವರಿ ಹಂಗರಗಿ, ಮಾಯಾದೇವಿ, ವಿಜಯಲಕ್ಷ್ಮೀ ಸೇರಿದಂತೆ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.