ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜನ್ಮದಿನಾಚರಣೆ :‘ನನ್ನನ್ನು ಸಾಯಿಸಬಹುದು ,ನನ್ನ ಆಲೋಚನೆಗಳನ್ನಲ್ಲ’

ಸಿಂಧನೂರು ಸೆ.೨೮ ತಾಲೂಕಿನ ತುರವಿಹಾಳ ಪಟ್ಟಣದಲ್ಲಿನ ವಿಶ್ವೇಶ್ವರಯ್ಯ ಕಾರ್ಮಿಕ ಕಟ್ಟಡ ಸಂಘದ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ಕಿಡಿ ಹಚ್ಚಿಸಿದ ,ಹೋರಾಟ ಗಾರ ಹಾಗೂ ಈ ದೇಶಕ್ಕಾಗಿ ತನ್ನ ಪ್ರಾಣವನ್ನು ಬಲಿಕೊಟ್ಟ ವೀರ ಯೋಧ ಭಗತ್ ಸಿಂಗ್ ರ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸರಳವಾಗಿ ಆಚರಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಎಲೆ ಮರೆಯಂತೆ ಉಳಿದಿದ್ದಾರೆ. ಬ್ರೀಟಿಷರಿಗೆ ನೀವು ನನ್ನನ್ನು ಸಾಯಿಸಬಹುದು ಆದರೆ ನನ್ನ ಕ್ರಾಂತಿ ವಿಚಾರಗಳನ್ನಲ್ಲ ನನ್ನ ದೇಹವನ್ನು ಪುಡಿ ಮಾಡಬಹುದು ಆದರೆ ನನ್ನ ಆತ್ಮವನ್ನಲ್ಲ ಎಂದು ಹೇಳಿದಂತ ದಿಟ್ಟ ಹೋರಾಟಗಾರನ ನುಡಿಗಳನ್ನು ನೆನೆದು ಇವರ ಆದರ್ಶ ಗಳು ಮಾದರಿ ಎಂದು ಅನಿಸಿಕೆಗಳನ್ನು ಹಂಚಿಕೊಂಡರು.
ಇದೆ ಸಂದರ್ಭದಲ್ಲಿ ನಾಗಲಿಂಗಪ್ಪ, ಅನ್ವರ್ ಪಾಷಾ ಮೇಸ್ತ್ರೀ, ಹೊನ್ನುರಪ್ಪ, ವೆಂಕಟೇಶ, ಚಂದ್ರಶೇಖರ, ರಮೇಶ, ನಾಗಬಾಬು, ಶರಣಪ್ಪ, ಕಾಸಿಂ, ಸಲ್ಮಾನ್ ಖಾನ್, ವಿರೇಶ, ಬಸವರಾಜ, ಹನುಮಂತಪ್ಪ ಇತರರಿದ್ದರು.