ಸ್ವಾತಂತ್ರ್ಯ ಹೋರಾಟಗಾರ ಪಂಪಣ್ಣ ಅವರಿಗೆ ಗೌರವ ಸನ್ಮಾನ

ರಾಯಚೂರು,ಆ.೧೮- ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಡಿ.ಪಂಪಣ್ಣ ಅವರನ್ನು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಆ.೧೪ರಂದು ಸ್ವಾತಂತ್ರ ಹೋರಾಟಗಾರ ಡಿ.ಪಂಪಣ್ಣ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸ್ವಾತಂತ್ರ್ಯ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೋರಾಟಗಾರರು ಅಪಾರವಾದ ಕೊಡುಗೆಯನ್ಮು ದೇಶಕ್ಕೆ ನೀಡಿದ್ದು, ಪ್ರತಿಯೊಬ್ಬರು ಸ್ವಾತಂತ್ರ್ಯ ಹೋರಾಟಗಾರರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಜಿಲ್ಲಾಡಳಿತದ ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಮತ್ತು ಡಿ.ಪಂಪಣ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಾದ ಘಟನೆಗಳ ಬಗ್ಗೆ ಮಾಹಿತಿಗಳನ್ನು ಪಡೆದರು ಮತ್ತು ಇಂದಿನ ವಿದ್ಯಾಮನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಡಿ ಪಂಪಣ್ಣನವರ ಧರ್ಮಪತ್ನಿ ಬಸಮ್ಮ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್ ದುರುಗೇಶ, ತಹಶಿಲ್ದಾರ ಸುರೆಶ ವರ್ಮಾ, ಡಾ. ಮಲ್ಲಿಕಾರ್ಜುನ್ ಪಾಟೀಲ್ ನಾಗ್ಭೂಷಣ ನೆರವಿ, .ಡಾ.ದಂಡಪ್ಪ ಬಿರಾದಾರ್ ಸೇರಿದಂತೆ ಪಂಪಣ್ಣನವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.