ಸ್ವಾತಂತ್ರ್ಯ ಹೋರಾಟಗಾರ ಕೌಲಗಾ ಅಂತ್ಯಕ್ರಿಯೆ: ಗೌರವ ಸಲ್ಲಿಸದ ಪೆÇೀಲಿಸ್‍ರ ವಿರುದ್ಧ ಶಾಸಕ ಎಂ.ವೈ. ಪಾಟೀಲ್ ಆಕ್ರೋಶ

ಅಫಜಲಪುರ: ಜ.12:ಮತಕ್ಷೇತ್ರದ ಕೌಲಗಾ(ಕೆ) ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶತಾಯುಷಿ ಶಿವಶಂಕರೆಪ್ಪ ಕವಲಗಾ ಅವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ವೇಳೆ ಪೆÇೀಲಿಸರು ಗೌರವ ಸಲ್ಲಿಸದೇ ಶಿಷ್ಠಾಚಾರ ಉಲ್ಲಂಘಿಸಿದ್ದಾರೆ ಎಂದು ಶಾಸಕ ಎಂ.ವೈ. ಪಾಟೀಲ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರು ನಿಧನರಾದರೆ ಅವರಿಗೆ ಪೆÇೀಲಿಸ್ ಗೌರವ ಕೊಡುವುದು ಒಂದು ಶಿಷ್ಠಾಚಾರವಾಗಿದೆ. ಆದಾಗ್ಯೂ, ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಪೆÇೀಲಿಸರು ಗೌರವ ಸೂಚಿಸಿಲ್ಲ ಎಂದು ಆರೋಪಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶಿವಶಂಕರೆಪ್ಪ ಕೌಲಗಾ ಅವರು ನಿಧನರಾದ ಸುದ್ದಿ ತಿಳಿಯಿತು. ತಕ್ಷಣವೇ ಪೆÇೀಲಿಸ್ ಇಲಾಖೆಯಿಂದ ಗೌರವ ವಂದನೆ ಸಲ್ಲಿಸಲು ನಾನು ಹಿರಿಯ ಪೆÇೀಲಿಸ್ ಅಧಿಕಾರಿಯೊಂದಿಗೆ ಮಾತನಾಡಿದೆ. ಅವರು ಪೆÇೀಲಿಸ್ ಆಯುಕ್ತರಿಗೆ ಪತ್ರ ಬರೆದು ದೂರವಾಣಿ ಮುಖಾಂತರ ಮಾತನಾಡಿದರು. ಬೆಂಗಳೂರಿನಿಂದ ಇನ್ನೂ ನಮಗೆ ಪರವಾನಿಗೆ ಬಂದಿಲ್ಲ ಎಂದು ಹೇಳಿದ್ದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಕನಿಷ್ಠ ಸೌಜನ್ಯಕ್ಕಾದರೂ ಮಾನವೀಯತೆಗಾದರೂ ಪೆÇೀಲಿಸ್ ಇಲಾಖೆಯ ವತಿಯಿಂದ ಗೌರವ ಸಲ್ಲಿಸಬೇಕಿತ್ತು ಎಂದು ಹೇಳಿದ ಅವರು, ಈ ಹಿಂದೆ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರ ಅಜ್ಜ ಯಶವಂತರಾಯಗೌಡ ಅವರು ರೇವೂರ್(ಬಿ)ಯಲ್ಲಿ ವಿಧಿವಶರಾದಾಗ ನಾನು ಪೆÇೀಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿದಾಗ ಕ್ಷಣಾರ್ಧದಲ್ಲಿ ಪೆÇೀಲಿಸ್ ಇಲಾಖೆಯಿಂದ ಗೌರವ ಸಲ್ಲಿಸಿದರು. ಆದಾಗ್ಯೂ, ಶಿವಶಂಕರಪ್ಪ ಅವರ ವಿಷಯದಲ್ಲಿ ಪೆÇೀಲಿಸರು ಹಾಗೆ ಮಾಡಲಿಲ್ಲ ಎಂದು ಕಿಡಿಕಾರಿದರು.
ಬೆಂಗಳೂರಿನಿಂದ ಪರವಾನಿಗೆ ಬರುವವರೆಗೂ ಸ್ವಾತಂತ್ರ್ಯ ಹೋರಾಟಗಾರ ಶಿವಶಂಕರೆಪ್ಪ ಕೌಲಗಾ ಅವರ ಮೃತ ಶರೀರವನ್ನು ಹಾಗೆಯೇ ಇಟ್ಟುಕೊಳ್ಳಬೇಕೇ? ಎಂದು ಅವರು ಹಿರಿಯ ಪೆÇೀಲಿಸ್ ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದರು.