ಸ್ವಾತಂತ್ರ್ಯ ಹೋರಾಟಗಾರರ ಉಡಿಗೆ ಸ್ಪರ್ಧೆ

ಕಲಬುರಗಿ:ಆ.13:ಲಿಟಲ್ ಲ್ಯಾಂಪ್ಸ್ ಪ್ಲೇ ಸ್ಕೂಲ್.ಜೆ.ಆರ್.ನಗರ ಕಲಬುರಗಿಯಲ್ಲಿ ಪುಟಾಣಿ ಮಕ್ಕಳಿಂದ ಸ್ವತಂತ್ರ ಹೋರಾಟಗಾರರ ಅಲಂಕಾರಿಕ ಉಡಿಗೆ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಶ್ರೀಮತಿ ರೂಪ ಕೆರಳ್ಳಿ ಉಪನ್ಯಾಸಕಿಯರು ಹಾಗೂ ಶ್ರೀಮತಿ ಜಯಶ್ರೀ ಬಿರಾದರ್ ಹಿರಿಯ ಶಿಕ್ಷಕಿಯರು ಆಗಮಿಸಿದರು ಈ ಸ್ಪರ್ಧೆಯಲ್ಲಿ 25 ಮಕ್ಕಳು ಭಾಗವಹಿಸಿದರು. ಸದರಿ ಶಾಲೆಯ ಮಕ್ಕಳು ಸ್ವತಂತ್ರ ಹೋರಾಟಗಾರರ ಉಡುಗೆ ಮತ್ತು ಅವರ ಸಂದೇಶಗಳನ್ನು ಹೇಳುವುದರ ಮೂಲಕ ದೇಶಾಭಿಮಾನವನ್ನು ಕೊಂಡಾಡಿದರು. ಈ ಸ್ಪರ್ಧೆಯಲ್ಲಿ ಉತ್ತಮವಾದ ಉಡುಗೆ ಮತ್ತು ಸಂದೇಶಗಳನ್ನು ಹೇಳಿದವರಿಗೆ ಬಹುಮಾನಗಳನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಮಹೇಶ್ ಸಣಮನಿ, ಈ ಸಂಸ್ಥೆಯ ಅಧ್ಯಕ್ಷಕಿಯರಾದ ರಾಜೇಶ್ವರಿ. ಎನ್. ಮೂಲಗೆ, ಶಿಕ್ಷಕಿಯರು ಮತ್ತು ಪಾಲಕರು ಭಾಗವಹಿಸಿ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಗೊಳಿಸಿದರು.