ಸ್ವಾತಂತ್ರ್ಯ ಯೋಧರ ತ್ಯಾಗ, ಬಲಿದಾನ ಸ್ಮರಣೆ

ಬೀದರ್:ಮಾ.24: ನವದೆಹಲಿಯ ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ)ರ ನೇತೃತ್ವದಲ್ಲಿ ಪಂಜಾಬ್- ಪಾಕಿಸ್ತಾನ್ ಗಡಿಯಲ್ಲಿನ ಖಟಕರ್ ಕಲನ್ ರೋಡ್‍ನ ಶಹೀದ್-ಎ-ಆಝಂ ಭಗತ್‍ಸಿಂಗ್ ಮ್ಯೂಸಿಯಂ ಸಮೀಪ ನಡೆದ ಅಮರ ಬಲಿದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ವಾತಂತ್ಯ ಯೋಧರ ತ್ಯಾಗ ಹಾಗೂ ಬಲಿದಾನ ಸ್ಮರಿಸಲಾಯಿತು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವೀರ ಸೇನಾನಿಗಳ ಗುಣಗಾನ ಮಾಡಲಾಯಿತು. ಅವರ ಕುಟುಂಬದ ಸದಸ್ಯರನ್ನು ಸತ್ಕರಿಸಿ, ಗೌರವಿಸಲಾಯಿತು.

ಭಗತ್‍ಸಿಂಗ್, ಸುಖದೇವ್, ರಾಜಗುರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಹವಾ ಮಲ್ಲಿನಾಥ ಮಹಾರಾಜರು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ, ದೇಶಪ್ರೇಮ ಹಾಗೂ ದೇಶಾಭಿಮಾನ ಜಾಗೃತಗೊಳಿಸಲು ಹವಾ ಮಲ್ಲಿನಾಥ ಮಹಾರಾಜರು 2021 ರಲ್ಲಿ ಬೆಂಗಳೂರು ಹಾಗೂ 2022 ರಲ್ಲಿ ನವದೆಹಲಿಯಲ್ಲಿ ಅಮರ ಬಲಿದಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದರು. ಇದೀಗ ಪಂಜಾಬ್- ಪಾಕಿಸ್ತಾನ್ ಗಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಗಣ್ಯರು ಮುಕ್ತ ಕಂಠದಿಂದ ಪ್ರಶಂಸಿಸಿದರು. ರಾಜಗುರು ಕುಟುಂಬದ ಸತ್ಯಶೀಲ ರಾಜಗುರು ಹಾಗೂ ಸುಖದೇವ ಕುಟುಂಬದ ಅಶೋಕ್ ಥಾಪರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಚಂದ್ರಶೇಖರ್ ಆಜಾದ್ ಕುಟುಂಬದ ಅಮಿತ್ ಆಜಾದ್ ತಿವಾರಿ, ಭಗತ್ ಸಿಂಗ್ ಕುಟುಂಬದ ಯದುವೀರಸಿಂಗ್ ಸಂಧು, ಆಷಾಖುಲ್ ಖಾನ್ ಕುಟುಂಬದ ಆಲಾಖ್ ಉಲ್ಲಾಖಾನ್, ಉದ್ಧಂ ಸಿಂಗ್ ಕುಟುಂಬದ ಹರ್ಪಾಲ್ ಸಿಂಗ್, ಸುಮನ್, ರಾಣಿ ಲಕ್ಷ್ಮೀಬಾಯಿ ಕುಟುಂಬದ ಸುನಿಲ್ ಗೋಪಾಲರಾವ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುಟುಂಬದ ಕರವೀರಪ್ಪ, ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದ ಸೋಮಶೇಖರ ದೇಸಾಯಿ, ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ತಸ್ಲೀಮಾ ಪಾಟೀಲ, ತಲ್ವಾರೆ ದಾಸೊರವ್ ಹಂಬರಡೆ, ಶಹಾಜಿರಾವ್ ಪಾಟೀಲ, ವೈಜಿನಾಥ ಝಲಕೆ, ಗುರುಸಿದ್ದಪ್ಪ, ಪಪ್ಪು ಪಾಟೀಲ ಖಾನಾಪುರ, ಪ್ರಕಾಶ ಶಂಭು, ಮಲ್ಲಿಕಾರ್ಜುನ ಸಾರ್ವಡ್, ಸಂದೇಶ ಪಾಟೀಲ, ಶ್ರೀಶೈಲ ಪಾಟೀಲ, ಶ್ರೀಕಾಂತ ಪಾಟೀಲ, ಸುಭಾಷ್‍ಚಂದ್ರ, ಜೇಮ್ಸ್ ಕೊಳಾರ, ಪುಷ್ಪಕ್ ಜಾಧವ್, ಶಿವರಾಜ ವರಾದ್, ನವಣಿ ಸ್ವಾಮಿ, ಬಲವಂತ ಪಾಟೀಲ, ಡಾ. ನೀಲಂಗೆ, ರಾಜಶೇಖರ ರಡ್ಡಿ, ಬಾಲಾಜಿ ಲಾತೂರ, ಬಸವರಾಜ ಬಿರಾದಾರ, ಸಂತೋಷ ಅಲ್ಲೆ, ಸುನೀಲ್ ಕುಮಾರ, ಉದಯ ಪಾಟೀಲ, ಶ್ರೀಕಾಂತ ಹೊನಳ್ಳಿ, ಶಿವಕುಮಾರ ಮದನೂರು, ಮಾಣಿಕ ಯರನಳ್ಳಿ, ನಾಗೇಶ ಬೇಮಳಖೇಡ, ನಂದೇಶ ಪಾಟೀಲ, ಉಲ್ಲಾಸ್ ಹುಮನಾಬಾದ್, ಸುಧಾಕರ್, ಅನಿಲ್ ಅಲ್ಮಾ, ವಿಶ್ವ ಕೊಳಾರ, ಆನಂದ ಸಾಳೆ, ಸುಹಾನ್, ಬಸವರಾಜ ಕುಂಬಾರಗೇರಿ, ಸಂತೋಷ ಶಂಭು, ಮಲ್ಲು ಕೊಳಾರ, ಬಲವೀರ್ ಪಾಟೀಲ, ಸಂತೋಷ, ಸುನಿಲ್, ಶಿವಕುಮಾರ ಜಮಾದಾರ್, ಶಂಕರ, ಗಣಪತಿ ಉಮೇಶ, ಗುರು, ಮೀನಾಕ್ಷಿ ಪಾಟೀಲ, ಜಗದೇವಿ, ಲಕ್ಷ್ಮಿ, ಸಂಗೀತಾ, ನಂದಾ, ಆಶಾ ದಾಡಗಿ, ಶೀತಲ್ ಪರ್ವನಿ ಇದ್ದರು.

ಅಮರ ಬಲಿದಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ದೇಶಭಕ್ತರ ಯಾತ್ರೆಯು ನೂರಾರು ವಾಹನ ಹಾಗೂ ಸಾವಿರಾರು ದೇಶಭಕ್ತರೊಂದಿಗೆ ಕಾರ್ಯಕ್ರಮಕ್ಕೆ ಸ್ಥಳಕ್ಕೆ ತಲುಪಿತು.

ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ್, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ದೇಶ ಭಕ್ತರು ಅಪಾರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.