ಸ್ವಾತಂತ್ರ್ಯ ದಿನ ಆಚರಣೆಯ ಪೂರ್ವಭಾವಿ ಸಭೆ


ಸಿರುಗುಪ್ಪ : ನಗರದ ತಹಶೀಲ್ದಾರ್ ಕಛೇರಿಯಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕಿನ ವಿವಿಧ ಇಲಾಖೆಯ ಸಹಯೋಗದೊಂದಿಗೆ 75ನೇ ವರ್ಷದ ಸ್ವಾತಂತ್ರೋತ್ಸವ ದಿನ ಆಚರಣೆಯ ಅಂಗವಾಗಿ ತಹಶೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ಪೂರ್ವ ಭಾವಿ ಸಭೆ ನಡೆಯಿತು.
ಕಳೆದ ಎರಡು ವರ್ಷಗಳಲ್ಲಿ ಕರೋನಾ ಕಾರಣ ರಾಷ್ಟ್ರೀಯ ಹಬ್ಬಗಳನ್ನು ಸರಳವಾಗಿ ಆಚರಿಸಿದ್ದೆ, ಎಲ್ಲಾ ಇಲಾಖೆಯ ವತಿಯಿಂದ 75ನೇ ವರ್ಷದ ಅಂಗವಾಗಿ ಅಮೃತ ಮಹೋತ್ಸವ ಆಚರಿಸುತ್ತ ಬಂದಿದ್ದೆವೆ, ಈ ವರ್ಷ ವಿಜೃಂಭಣೆಯಿಂದ ಸಂಭ್ರಮದಿಂದ ಆಚರಿಸಲು ಎಲ್ಲಾ ಇಲಾಖೆಯ ಸಹಾಯೋಗ ಮುಖ್ಯವಾಗಿದೆ,
ತಾಲೂಕು ಕ್ರೀಡಾಂಗಣದಲ್ಲಿ 9ಗಂಟೆಗೆ ಖಾಯಂ ಧ್ವಜಾರೋಹಣ ನಡೆಸಲಾಗುವುದು.ಎಲ್ಲಾ ಶಾಲಾ ವಿದ್ಯಾರ್ಥಿಗಳು, ಸೇವಾ ದಳ, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳಗಳಿಂದ ಧ್ವಜವಂದನೆ, ಕಡ್ಡಾಯ ಮಾಸ್ಕ ಧರಿಸಬೇಕು, ಮನೆ ಮನೆಗಳಲ್ಲಿ, ತಾಲೂಕಿನ ಎಲ್ಲಾ ಇಲಾಖೆಯಲ್ಲಿ 9 ಗಂಟೆ ಒಳಗೆ ಮೂರು ದಿನಗಳ ಕಾಲ ಹೊಸ ಧ್ವಜ ಹಾರಿಸಿಬೇಕು, ದೀಪ ಅಲಂಕಾರ ಮಾಡಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವುದು,
ತಾಲೂಕು ಕ್ರೀಡಾಂಗಣದಲ್ಲಿ ಅಂಬ್ಯುಲೇನ್ಸ್ ಮತ್ತು ಅಗ್ನಿ ಶಾಮಕ ವಾಹನ ಇರಬೇಕು, ಶುದ್ಧ ಕುಡಿಯುವ ನೀರು ಇರಬೇಕು, ಅಂದಾಜು 5ಸಾವಿರ ಜನರು ಕೂಡಬಹುದು, ಶಾಲೆಗಳಲ್ಲಿ ಸಿಹಿ ಹಂಚಲು ತೀರ್ಮಾನಿಸಲಾಯಿತು. ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ.
ಆ.11ರಿಂದ ಶಾಲೆಯ ಪ್ರಾರ್ಥನೆಯಲ್ಲಿ ಸ್ವಾತಂತ್ರ್ಯದ ಕುರಿತು ಮಾಹಿತಿ ನೀಡುವುದು, ಪ್ರತಿ ಗ್ರಾಮ ಮಟ್ಟದಲ್ಲಿ ಜಾಗೃತಿ ಜಾಥ ನಡೆಸುವಂತೆ ತಿಳಿಸಿದರು. ರಾಷ್ಟ್ರೀಯ ಧ್ವಜಾರೋಹಣ ನೀತಿ ನಿಯಮಗಳನ್ನು ಕಡ್ಡಾಯ ಪಾಲಿಸಿಕೊಂಡು ಗೌರವಾರ್ಥ ನಡೆದುಕೊಳ್ಳಬೇಕು.
ಸ್ವಾತಂತ್ರ್ಯ ಪೂರ್ವ ಭಾವಿ ಸಭೆಯಲ್ಲಿ ಕೆಲವೊಂದು ಇಲಾಖೆ ಅಧಿಕಾರಿಗಳು ಗೈರುಹಾಜರಿ ಕಂಡು ಬಂದಿತು.
ತಾ.ಪಂ.ಇ.ಒ. ಮಡಗಿನ ಬಸಪ್ಪ, ಬಿ.ಇ.ಒ ಪಿ.ಡಿ.ಭಜಂತ್ರಿ, ನಗರಸಭೆ ಪೌರಾಯುಕ್ತ ಪ್ರೇಮ್ ಚಾರ್ಲ್ಸ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ, ಬಿಸಿಎಂ‌ ವಿಸ್ತಾರಣ ಅಧಿಕಾರಿ ಎ.ಗಾದಿಲಿಂಗಪ್ಪ, ಟಿ.ಹೆಚ್.ಒ.ಡಾ.ಈರಣ್ಣ, ಎಸ್.ಟಿ.ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಮ, ಎಸ್.ಸಿ ಇಲಾಖೆ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಎ.ಡಿ.ಎಸ್.ಬಿ.ಪಾಟೀಲ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.