ಸ್ವಾತಂತ್ರ್ಯ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕೊಟ್ಟೂರಿನ ಹೋರಾಟಗಾರರ ಪಾತ್ರ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.26: ಗಾಂಧೀಜಿಯವರ ಆದರ್ಶಕ್ಕೆ ಪ್ರಭಾವಿತರಾಗಿ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಗೊರ್ಲೀ ಶರಣಪ್ಪ,ಅಡವಿ ಗೌಡ್ರು ಹಾಗೂ ಭದ್ರಶೆಟ್ಟಿ ಶಂಕ್ರಪ್ಪ,ಬುರ್ಲಿಂಗಪ್ಪ ಸೇರಿದಂತೆ ಅನೇಕ ಕೊಟ್ಟೂರಿನ ಮಹನೀಯರು ಗಂಡು ಮೆಟ್ಟಿನ ಪಾತ್ರ ನಿರ್ವಸಿದ್ದಾರೆ ಎಂದು ನಿವೃತ್ತ ಪ್ರೋ.ಬಿ.ಸಿ ಮಹಾಬಲೇಶ್ವರ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಹೆಚ್.ಜಿ.ರಾಜ್ ಸಭಾಂಗಣದಲ್ಲಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಹಾಗೂ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಸಹಯೋಗದೊಂದಿಗೆ ಏರ್ಪಡಿಸಿದ್ದ 2023-24ನೇ ಶೈಕ್ಷಣಿಕ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ “ಹೈದ್ರಾಬಾದ್ ಮತ್ತು ಮದ್ರಾಸ್ ಕರ್ನಾಟಕದಲ್ಲಿ ಭಾಷಾವಾರು ಪ್ರಾಂತ ಚಳುವಳಿ” ಕುರಿತು
ಉಪನ್ಯಾಸ ನೀಡಿದರು.
ಕನ್ನಡದ ಗಟ್ಟಿತನ ಉಳಿಯಲು ಪ್ರತಿಯೊಬ್ಬ ಕನ್ನಡಿಗನೂ ಮೊದಲು ಕರ್ನಾಟಕ ಚರಿತ್ರೆ ತಿಳಿಬೇಕು.ಸಮ ಸಮಾಜ ನಿರ್ಮಾಣದಡಿಯಲ್ಲಿ ಬಸವಣ್ಣನವರು 12 ನೇ ಶತಮಾನದಲ್ಲಿ ಕ್ರಾಂತಿಯ ಮೂಲಕ ಕರ್ನಾಟಕಕ್ಕೆ ಚಳುವಳಿಯ ಬೀಜ ಬಿತ್ತಿದವರು.
ನೃಪತುಂಗ ಅಥವಾ ಆತನ ಆಶ್ರಯ ದಾತ ಶ್ರೀವಿಜಯ ನ ಕೃತಿ ಕವಿರಾಜಮಾರ್ಗದಲ್ಲಿ ಕನ್ನಡ ನಾಡಿನ ಸೀಮೆಯನ್ನು ಕಾವೇರಿಯಿಂದ ಗೋದಾವರಿಯವರೆಗೆ ಎಂದಿದೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಹಂಚಿ ಚಿದ್ರಗೊಳಿಸಿರುವರು.
ಸ್ವತಂತ್ರ ಪೂರ್ವದಲ್ಲಿ ಕರ್ನಾಟಕದಲ್ಲಿದ 565 ಸಂಸ್ಥಾನಗಳನ್ನು, ರಾಜ, ಮಹಾರಾಜ ಹಾಗೂ ಮಾಂಡಲಿಕರು ಆಳ್ವಿಕೆ ನಡೆಸುತ್ತಿದ್ದರು,ಬ್ರಿಟಿಷ್ ರು ದೇಶ ಬಿಟ್ಟು ಹೋಗುವಾಗ ಭಿತ್ತಿದ, ವಿಷ ಬೀಜದಿಂದ
ಕಾಶ್ಮೀರ ರಾಜ ಹರಿಸಿಂಗ್,ಪಂಜಾಬ್ ನ ಮೊಹಮ್ಮದ್ ಮಹಾಬಾತ್ ಕಣಜಿ ಹಾಗೂ ಹೈದ್ರಾಬಾದ್, ಮೀರ್ ಉಸ್ಮಾನ ಅಲೀ ಖಾನ್‌ ಆಗಸ್ಟ್ 15,1947 ರಲ್ಲಿ ಭಾರತ ಒಕ್ಕೂಟದಲ್ಲಿ ಸೇರಲು ನಿರಾಕರಿಸಿ ಪ್ರತ್ಯೇಕ ಉಳಿದರು.
ಭಾರತವು ಸ್ವಾತಂತ್ರ ಸಂಭ್ರಮಾಚರಣೆ ಸಂತೋಷದಲ್ಲಿದ್ದರೆ ಹೈದ್ರಾಬಾದ್ ರಾಜ್ಯದ ಪ್ರಜೆಗಳು ಅದನ್ನು ನೋಡುತ್ತ ತಮಗಾದ ನೋವನ್ನು ನುಂಗಿಕೊಂಡು, ಹೈದ್ರಾಬಾದ್ ಜನರು ಮತ್ತೊಂದು ಸ್ವತಂತ್ರ ಸಂಗ್ರಾಮಕ್ಕೆ ಮುಂದಾಗಬೇಕಾಯಿತು, ಈವೇಳೆ ಕೊಟ್ಟೂರಿನವರು ಮತ್ತು ಅಖಂಡ ಬಳ್ಳಾರಿ ಜಿಲ್ಲೆಯ ಮಹನೀಯರ ಪಾತ್ರವು ಬಹುಮುಖ್ಯವಾಗಿದೆ ಎಂಬುದು ಮರಿಯುವಂತಿಲ್ಲ.
 ಸಂಗ್ರಾಮದಲ್ಲಿ ಅನೇಕರು ಪ್ರಾಣ ತ್ಯಾಗ ಮಾಡಬೇಕಾಯಿತು,ಅದರೂ ಇದನ್ನು ಲೆಕ್ಕಿಸದೆ ಚಳುವಳಿ ತೀರ್ವತೆ ಪಡೆಯುತ್ತಿದ್ದಂತೆ ಹೈದ್ರಾಬಾದ್ ಜನರ ಬೆಂಬಲಕ್ಕೆ ಬಂದ ಭಾರತ ಸರ್ಕಾರ ಮದ್ಯ ಪ್ರವೇಶಿಸಿ ಪೋಲಿಸ್ ಕಾರ್ಯಚರಣೆ “ಆಪರೇಶನ್ ಪೋಲೋ” ಎಂಬ ಹೆಸರಿನಿಂದ ನಾಲ್ಕೇ ದಿನದಲ್ಲಿ ಹೈದ್ರಾಬಾದ್ ಮುತ್ತಿಗೆ ಹಾಕಿತು,ಇದನ್ನರಿತ ನಿಜಾಮ ಮೀರ ಉಸ್ಮಾನ್ ಅಲೀ ಖಾನ್ ಭಾರತ ಒಕ್ಕೂಟಕ್ಕೆ ಸೇರುವಂತಾಯಿತು ಎಂದು ವಿವರಿಸಿದರು.
ಇವುಗಳನ್ನು ಕ್ರಮೇಣ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿ,ಕನ್ನಡಿಗರು ಹೆಚ್ಚಿರುವ ಹರವುಗಳನ್ನು ಸೇರಿಸಿ ಮೈಸೂರು ರಾಜ್ಯ ಎಂದು ಮಾಡಿದರು, ಮುಂದೆ 1973 ರಲ್ಲಿ ಕರ್ನಾಟಕ ಎಂದು ಹೆಸರು ಮಾರ್ಪಟ್ಟಿತು,ನಂತರ ಇದನ್ನು ಮುಬೈ ಕರ್ನಾಟಕ, ದಕ್ಷಿಣ ಕನ್ನಡ, ಉಡುಪಿ, ಹೈದ್ರಾಬಾದ್ ಕರ್ನಾಟಕ, ಹಳೆ ಮೈಸೂರು ಕರ್ನಾಟಕ ಎಂದು ನಾಲ್ಕು ವಿಭಾಗವಾಗಿ ವಿಂಗಡಿಸಿ, ನಂತರ ಕನ್ನಡದೊಲವಿನ ಕಾರಣಕ್ಕಾಗಿ ಹೆಸರನ್ನು ಬದಲಾಯಿಸಿ ಪ್ರಸ್ತುತ ಬಸವಣ್ಣನವರ ಕಲ್ಯಾಣ ಕ್ರಾಂತಿಯ ನೆನಪಿಗಾಗಿ ಕಲ್ಯಾಣ ಕರ್ನಾಟಕ ಎಂದು ಕರೆಯಲಾಗಿದೆ ಎಂದು ವಿವರಿಸಿದರು.
ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿದರು,ಪದವಿ ಕಾಲೇಜ್ ಪ್ರಾಚಾರ್ಯರು ಎಂ.ರವಿಕುಮಾರ್ ಮಾತನಾಡಿದರು ,ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ  ಡಾ.ಬಿ.ಜಿ.ಕನಕೇಶಮೂರ್ತಿ  ಪ್ರಾಸ್ತಾವಿಕವಾಗಿ ಮಾತನಾಡಿದರು.
ಇತಿಹಾಸ ಉಪನ್ಯಾಸಕರು ಪ್ರೊ.ಸಿದ್ದನಗೌಡ್ರು  ಸ್ವಾಗತಿಸಿದರು, ನಿರೂಪಣೆಯನ್ನು ವಿಜಯಲಕ್ಷ್ಮಿ ನಿರ್ವಹಿಸಿದರು, ಬಿ.ಎನ್.ಅರವಿಂದ ವಂದನಾರ್ಪಣೆ ನೆರವೇರಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಿ.ಎಸ್.ಕೊಟ್ರೇಶ್, ಶಿವಕುಮಾರ್ ಮುಂತಾದವರು ಇದ್ದರು.