ಸ್ವಾತಂತ್ರ್ಯ ಅಮೃತ ಮಹೋತ್ಸವ ಪೂರ್ವ ಸಿದ್ಧತಾ ಸಭೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಆ.04: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದ ಅಮೃತಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಹಸೀಲ್ದಾರ್ ಡಾ. ಶಿವಕುಮಾರ ಬಿರಾದಾರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಬಾರಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ ಹೋರಾಟದ ಹಾಗೂ ಭವ್ಯ ಭಾರತದ ಅಸ್ಥಿತೆಯನ್ನು ಪ್ರತಿಬಿ0ಬಿಸುವ ಗೋಡೆ ಚಿತ್ರ ಬರಹ ಸ್ಪರ್ಧೆ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ವಿಜೇತರಾದವರಿಗೆ ಪ್ರಥಮ ಬಹುಮಾನ 215 ಸಾವಿರ, ದ್ವಿತೀಯ 810 ಸಾವಿರ, ತೃತೀಯ ಈ 5 ಸಾವಿರ ಬಹುಮಾನಗಳನ್ನು ನೀಡಲು ನಿರ್ಣಯ ಕೈಗೊಳ್ಳಲಾಯಿತು. ಸಿದ್ಧ9 ಯಲಿ ಭಾಗ ವಹಿಸಲು ಇಚ್ಚಿಸುವ ವರು ಗ್ರಾಮ ಲೆಕ್ಕಿಗ ಜೀವನ -9986036434 ಹಾಗೂ ಗ್ರಾಮ ಲೆಕ್ಕಿಗ ಜಿ.ಶಶಿಕುಮಾರ – 9686038626 ಗೆ ಸಂಪರ್ಕಿಸಲು ಸಭೆಯಲ್ಲಿ ಸೂಚಿಸಲಾಯಿತು.
ಕಲಾವಿದರಿಂದ ಮೆರವಣಿಗೆ ಪಟ್ಟಣದ ಪ್ರವಾಸಿಮಂದಿರ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಟೇಡಿಯಂ ವರೆಗೆ ವಿವಿಧ ಕಲಾವಿದರಿಂದ ಕಲಾವಿದರ ಸಂಘದ ಅಧ್ಯಕ್ಷ ನಿಚ್ಚವನಹಳ್ಳಿ ಭೀಮಪ್ಪ ನವರ ನೇತೃತ್ವದಲ್ಲಿ ಮೆರವಣಿಗೆ, ಪಟ್ಟಣದ ವಿವಿಧ ವೃತ್ತಗಳಿಗೆ ದೀಪಲಂಕಾರ ಮಾಡುವುದನ್ನು ಪುರಸಭೆ ವರೆಗೆ ವಹಿಸಲು ಹಾಗೂ ತಳಿರು ತೋರಣ ಕಟ್ಟಲು ಅರಣ್ಯ ಇಲಾಖೆಗೆ ಸೂಚಿಸಲಾಯಿತು.ಎಸ್‍ಎಸ್‍ಎಲ್‍ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ಅಮೃತ ಮಹೋತ್ಸವ ಆಗಿರುವುದರಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಇತರರಿಗೆ ಬೂಂದಿ ಸಿಹಿಯನ್ನು ವಿತರಿಸುವ ಜವಾಬ್ದಾರಿಯನ್ನು ಉಪನೋಂದಣಿ ಕಚೇರಿ ಹಾಗೂ ಮೀನುಗಾರಿಕೆ ಇಲಾಖೆಗೆ ವಹಿಸಲಾಯಿತು. ತಹಸೀಲ್ದಾರ್ ಡಾ. ಶಿವಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‍ಐ ಸಿ.ಪ್ರಕಾಶ, ವಲಯ ಅರಣ್ಯಾಧಿಕಾರಿ ಮಲ್ಲಪ್ಪ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಗೊಂದಿ, ಸಬ್ ರಿಜಿಸ್ಟ್ರಾರ್ ದೀಪಾಮ್ಯಾಳಿ, ಮೀನುಗಾರಿಕೆ ಇಲಾಖೆಯ ಮಂಜುಳಾ, ಆರೋಗ್ಯಾಧಿಕಾರಿ ಹಾಲಸ್ವಾಮಿ, ಶಿಕ್ಷಣ ಸಂಯೋಜಕ ಗಿರಜ್ಜ ಮಂಜುನಾಥ, ಟಿಪಿಒ ಮಂಜಯ್ಯ, ಕಲಾವಿದರ ಸಂಘದ ಅಧ್ಯಕ್ಷ ನಿಚ್ಚವನಹಳ್ಳಿ ಭೀಮಪ್ಪ, ಡಿಪ್ ವೆಂಕಟೇಶ, ಕಂದಾಯ ನಿರೀಕ್ಷಕ ಅರವಿಂದ್,ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.