ಸ್ವಾತಂತ್ರ್ಯ ಅಮೃತ ಮಹೋತ್ಸವ ಉಪನ್ಯಾಸ

ಚಿಂಚೋಳಿ,ಜು.29- ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ಯ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ನಿವೃತ ಶಿಕ್ಷಕಿ ಶ್ರೀದೇವಿ ಪಾಟೀಲ ಚಾಲನೆ ನೀಡಿದರು.
ಭಾರತದ ಸ್ವಾತಂತ್ರ್ಯ ಹೋರಾಟ ಕುರಿತು ಅವರು, ವಿಶೇಷ ಉಪನ್ಯಾಸ ನೀಡಿದರು. ಭಾರತ ಜಗತ್ತಿನಲ್ಲಿಯೇ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದ ದೇಶವಾಗಿದೆ. ತ್ಯಾಗ, ಬಲಿದಾನಗಳ ಸಂಕೇತವೇ ಸ್ವಾತಂತ್ರ್ಯವಾಗಿದೆ. ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪೆÇ್ರ.ಮಲ್ಲಿಕಾರ್ಜುನ ಪಾಲಾಮೂರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಸದಾಶಂಕರ ತಳವಾರ, ಡಾ.ಎಂಡಿ. ಶಮಶೋದ್ದಿನ, ಸೈಯದಾ ಫರ್ಹಾನಾ, ವಿಜಯಲಕ್ಷ್ಮಿ ಹಂಚನಾಳ ವೇದಿಕೆಯಲ್ಲಿದ್ದರು. ರಮೇಶ ವೈರಾಗೆ ನಿರೂಪಿಸಿ, ಸ್ವಾಗತಿಸಿದರು. ಸುರೇಶ ಚವ್ಹಾಣ ವಂದಿಸಿದರು.