
(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಆ 16: ಮಹನೀಯರು ಬ್ರಿಟಿಷರ ವಿರುದ್ಧ ರಣಕಹಳೆ ಊದಿ ಮಧ್ಯೆ ರಾತ್ರಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಆದರೆ ಭಾರತ ವಿಭಜನೆಯ ಮೂಲಕ ಒಡೆದ ಆ ದಿನವನ್ನು ದೇಶ ವಿಭಜನೆಯ ದುರಂತ ಕಥೆ ತಿಳಿಸುತ್ತದೆ ಎಂದು ಸಮಾಜಸೇವಕ ಹಾಗೂ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಸೋಮವಾರ ಪೇಟೆಯ ಚನ್ನಮ್ಮನ ಕೂಟದಲ್ಲಿ ಅಗಷ್ಟ 14ರ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಇತಿಹಾಸದಲ್ಲಿ ಶಾಶ್ವತವಾಗಿರುವ ನಮ್ಮ ಹಿರಿಯರ ತ್ಯಾಗ ಬಲಿದಾನ ನೆನಪಿಸಿಕೊಳ್ಳುವುದರೊಂದಿಗೆ ಇತಿಹಾಸದ ರಕ್ಷಣೆ ಮಾಡಬೇಕಾಗಿದೆ. ದೇಶದ ಮೂಲೆ-ಮೂಲೆಗಳಲ್ಲಿ ಧ್ವಜ ಸಂಭ್ರಮಿಸುತ್ತಿದ್ದು ಈ ಮಹೋತ್ಸವದಲ್ಲಿ ಇಡೀ ದೇಶವೇ ಹೋರಾಟಗಾರರನ್ನು ಸ್ಮರಿಸುತ್ತದೆ ಎಂದರು.
ಪ್ರಸ್ತಾವಿಕವಾಗಿ ನ್ಯಾಯವಾದಿ ದೇಶಪಾಂಡೆಯವರು ಮಾತನಾಡಿ ದೇಶ ವಿಭಜನೆ ಮತ್ತು ಚನ್ನಮ್ಮನ ಇತಿಹಾಸ ಕುರಿತು ಉಪನ್ಯಾಸ ನೀಡಿದರು.
ಈ ವೇಳೆ ಬಿಜೆಪಿ ಬ್ಲಾಕ ಅಧ್ಯಕ್ಷ ಬಸವರಾಜ ಪರವಣ್ಣರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ. ಮುಖಂಡ ಬಸವರಾಜ ಮೂಗಬಸವ, ಉಮಾದೇವಿ ಬಿಕ್ಕನ್ನವರ, ಪ.ಪಂ ಸದಸ್ಯರುಗಳದ ಕಿರಣ ಪಾಟೀಲ, ನಾಗ ರಾಜ ಅಸುಂಡಿ, ಭ್ಲಾಕ್ ಯುವ ಘಟಕಗಳು. ನಾಗು, ಸೇರಿದಂತೆ ಸಾರ್ವಜನಿಕರಿದ್ದರು.