
(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಆ16: ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವದಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಮಂದಾಕಿನಿ ಪಟರ್ವಧನ ಅವರ ನೇತೃತ್ವದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರಗೌಡ ಹೊನ್ನಪ್ಪಗೌಡ್ರ ಧ್ವಜಾರೋಹಣ ನೇರವೇರಿಸಿದರು.
ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರದ ಅಂಗನವಾಡಿ ಕೇಂದ್ರ- 2 ರಲ್ಲಿ ಶಿಕ್ಷಕಿ ಶಾಂತವ್ವ ಯಲಿವಾಳರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಯಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮುಕ್ತುಂಹುಸೇನ ಬಡಿಗೇರ್, ಸದಸ್ಯರಾದ ಯಲ್ಲಪ್ಪಗೌಡ ಸಣ್ಣಪರ್ವತಗೌಡ್ರ, ಬಸಕ್ಕ ಮಾಳಗಿ, ದಿವಾನಸಾಬ್ ಕಮಲಸಾಬನವರ, ಹೊನ್ನಪ್ಪ ಸೋಲಾರಗೊಪ್ಪ, ಶೀತಲ ಬಿಜವಾಡ, ಮುಖಂಡರಾದ ನಿಂಗಪ್ಪ ಯಲಿವಾಳ, ಅಶೋಕ ಸೋಲಾರಗೊಪ್ಪ ಮತ್ತಿತರರು ಪಾಲ್ಗೊಂಡಿದ್ದರು.