ಸ್ವಾತಂತ್ರ್ಯೋತ್ಸವ ಆಚರಣೆ

ಧಾರವಾಡ,ಆ16: ಸ್ವಾತಂತ್ರ್ಯ ದಿನದ ಅಂಗವಾಗಿ ಧಾರವಾಡದ ಪವನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ್ ಇಂಡಿಯನ್ ಏಪೆರ್Çೀರ್ಸ ಆಫೀಸರ್ ಶ್ರೀಯುತ ಹರ್ಷವರ್ಧನ್ ರವರು ಆಗಮಿಸಿ ಮಕ್ಕಳಲ್ಲಿ ದೇಶಾಭಿಮಾನದ ಬಗ್ಗೆ ಮತ್ತು ಶಿಸ್ತಿನ ನಡತೆ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಶಾಲೆಯ ಆಡಳಿತ ಮಂಡಳಿ ಶ್ರೀಮತಿ ರತ್ನ ಪಾಟೀಲ್ ಹಾಗೂ ಮಹೇಶ್ ಪಾಟೀಲ್ “ನಮ್ಮ ರಾಷ್ಟ್ರ ಮೊದಲು ಅದು ಯಾವಾಗಲೂ ಮೊದಲು” ಎನ್ನುವ ಘೋಷಣೆಯ ಕುರಿತಾಗಿ ಮಕ್ಕಳಲ್ಲಿ ಮನವರಿಕೆ ಮಾಡಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರವೀಣಾ ಬ್ಯಾಹಟ್ಟಿ ಮತ್ತು ವಿಕ್ರಂ ಮಹಾಶಬ್ದೆ ಅವರು ಉಪಸ್ಥಿತರಿದ್ದರು. ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಶಿಕ್ಷಕ ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು.