ಸ್ವಾತಂತ್ರ್ಯೋತ್ಸವದಂದು ತಿರಂಗಾ ಸಾರಿ ವಾಕ್‍ಥಾನ್

ಕಲಬುರಗಿ,ಆ.10: 76ನೇ ಭಾರತದ ಸ್ವಾತಂತ್ರ್ಯೋತ್ಸವದ ನಿಮಿತ್ಯ ಸುಮಾರು 500 ಜನ ಮಹಿಳಯರು ನಗರದಲ್ಲಿ ತಿರಂಗಾ ಸೀರೆಯುಟ್ಟು ವಾಕ್‍ಥಾನ್ ಕಾರ್ಯಕ್ರಮವನ್ನು ಸಂಘಿನಿ ಸಂಘ, ಆರ್ಯ ವೈಶ್ಯ ಸಂಘ, ರೋಟರಿ ಕ್ಲಬ್, ಗೀತಾ ಪರಿವಾರ್, ಜೈನ್ ಅಸೋಶಿಯೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಗೀತಾ ಪರಿವಾರದ ಡಾ. ಪ್ರಣತಿ ಕಾವೇರಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಮಹಿಳೆಯರು ತ್ರಿವರ್ಣ ಸಾರಿಯಲ್ಲಿ ವಾಕ್‍ಥಾನ್‍ನಲ್ಲಿ ಪಾಲ್ಗೊಳ್ಳುವರು. ನಗರದ ಆರ್ಕಿಡ್ ಮಾಲ್‍ನಲ್ಲಿ ಬೆಳಿಗ್ಗೆ 7-30ಕ್ಕೆ ರಾಷ್ಟ್ರಧ್ವಜಾರೋಹಣ ಹಾಗೂ ರಾಷ್ಟ್ರಗೀತೆಯಾದ ನಂತರ ಅಲ್ಲಿಂದ ವಾಕ್‍ಥಾನ್ ಆರಂಭಿಸಲಾಗುವುದು ಎಂದರು.
ಡಿಜೆ ಜೊತೆಯೊಂದಿಗೆ ದೇಶಭಕ್ತಿ ಗೀತೆಗಳೊಂದಿಗೆ ವಾಕ್‍ಥಾನ್ ಜಗತ್ ವೃತ್ತದವರೆಗೆ ಹೋಗುತ್ತದೆ. ಕೆಲವು ರಚನೆಗಳನ್ನು ಕೈಗೊಂಡು, ನಂತರ ಸಿಟಿ ಸೆಂಟರ್ ಮಾಲ್‍ಗೆ ಹೋಗಿ, ಅಲ್ಲಿಂದ ತಿರುಗಿ ಗೋಲ್ಡ್ ಹಬ್‍ಗೆ ತೆರಳಿ, ಅಲ್ಲಿ ಉಪಹಾರ ಮಾಡಲಾಗುವುದು ಎಂದು ಎಂದು ಅವರು ಹೇಳಿದರು.
ವಾಕ್‍ಥಾನ್‍ನಲ್ಲಿ ಸುಮಾರು 500ಕ್ಕಿಂತ ಹೆಚ್ಚು ಮಹಿಳೆಯರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು. ಶ್ರೀಮತಿ ರೂಪಾಲಿಗೌಡ, ಡಾ. ವರ್ಷಾ ಪಂಡಿತ್, ನತಾಶಾ ಅವರು ಕಾರ್ಯಕ್ರಮದ ನಿರ್ದೇಶಕರಾಗಿದ್ದಾರೆ ಎಂದು ಅವರು ತಿಳಿಸಿದರು.
ಡಾ. ಜ್ಯೋತಿ ತೆಗನೂರು ಅವರು ಮಾತನಾಡಿ, ಭಾರತೀಯ ಮಹಿಳೆಯರು ಸೀರೆಗಳನ್ನು ತೊಡುವುದೇ ಒಂದು ಪರಂಪರೆ. ಆದಾಗ್ಯೂ, ಈಗ ಆ ಸೀರೆ ಪರಂಪರೆ ಹೋಗಿ ವಿದೇಶಿ ಬಟ್ಟೆಗಳಿಗೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಸ್ವಾತಂತ್ರ್ಯದ ಸಂಭ್ರಮದಲ್ಲಿ ಭಾರತೀಯ ಸಂಸ್ಕøತಿ ಉಳಿಸಿ ಬೆಳೆಸಲು ದೇಶಿ ಸೀರೆಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಂಪ್ರದಾಯವನ್ನು ಮುಂದುವರೆಸಲು ಇಂತಹ ವಾಕ್‍ಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಡಾ. ಪ್ರಣಿತಾ ಕಾವೇರಿ, ಲೀನಾ ಶಾ, ಮಹಾದೇವಿ ಕಿಣಗಿ, ಪಲ್ಲವಿ ಮುಕ್ಕಾ, ಸುಷ್ಮಾ ಮುಕ್ಕಾ, ಪ್ರಿಯಾಂಕಾ, ಪಲ್ಲವಿ ಕೊಠಾರಿ, ಪೂರ್ಣಿಮಾ ಕುಲಕರ್ಣಿ, ಶ್ರೀಮತಿ ಚೈತ್ರಾ ಮಾದಮಶೆಟ್ಟಿ, ಮಂಜುಷಾ ಪೋಕಲ್, ರಜನಿ ಗುಪ್ತಾ, ಮೀರಾ ರಘೋಜಿ, ನಂದಿನಿ ರಘೋಜಿ ಮುಂತಾದವರು ಉಪಸ್ಥಿತರಿದ್ದರು.