ಸ್ವಾತಂತ್ರ್ಯ
ಹೋರಾಟಗಾರರ ಜೀವನ ನಮಗೆಲ್ಲ ಆದರ್ಶ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.05: ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆಯಲು ಎಷ್ಟೋ ಜನ ಭಾರತೀಯರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ, ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಅವರು ನಿನ್ನೆ 
ತಾಲೂಕಿನಸಂಜೀವರಾಯನಕೋಟೆಯಲ್ಲಿ ಹಮ್ಮಿಕೊಂಡಿದ್ದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಶಾಲೆಯಲ್ಲಿ ನೂರಕ್ಕೆ ನೂರು ಹಾಜರಾತಿ ಪಡೆದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
 ಭಾರತ ಇಂದು ವಿಜ್ಞಾನ, ತಂತ್ರಜ್ಞಾನ, ಐಟಿ ಬಿಟಿ ಕ್ಷೇತ್ರಗಳಲ್ಲಿ ವಿಶ್ವದಲ್ಲೇ ಹೆಸರು ಮಾಡುತ್ತಿದೆ.ನೀವು ಕೂಡ ಉತ್ತಮವಾಗಿ ಓದಿ ಶಿಕ್ಷಕರು, ವೈದ್ಯರು, ಇಂಜಿನಿಯರ್ ಆಗಬೇಕು ಜೊತೆಗೆ ರಾಷ್ಟ್ರೀಯ ಹೋರಾಟಗಾರರ ಜೀವನ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದರು.
ನಾಲ್ಕನೇ ತರಗತಿ ಗೌತಮಿ ವಾಲ್ಮೀಕಿ, ಆರನೇ ತರಗತಿ ಸಂಗೀತ ಅಗಸರ, ಶಿವಕುಮಾರ, ಕಾವೇರಿ, ಏಳನೇ ತರಗತಿ ಸಂಗೀತ, ಎಂಟನೇ ತರಗತಿ ಸುಜಾತ ಬಹುಮಾನ ಪಡೆದ ಮಕ್ಕಳು.
ಗ್ರಾಮ ಪಂಚಾಯಿತಿ ಸದಸ್ಯೆ  ಬಸಮ್ಮ, ತಾಲೂಕಿನ ಆರೋಗ್ಯ ಶಿಕ್ಷಣ ಅಧಿಕಾರಿ ಮಹಮ್ಮದ್ ರಫಿ, ಗ್ರಂಥ ಪಾಲಕ ಕೆ.ಆರ್. ಸಿದ್ದಪ್ಪ, ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ, ಶಿಕ್ಷಕರಾದ ವಿ.ಬಸವರಾಜ, ಮುನಾವರ ಸುಲ್ತಾನ, ಅಂಗನವಾಡಿ ಶಿಕ್ಷಕಿಯರಾದ ಶ್ರೀದೇವಿ, ನಿಂಗಮ್ಮ ಮುಂತಾದವರು ಉಪಸ್ಥಿತರಿದ್ದರು.