ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಭಾರತ ಮುಂದುವರೆದ ರಾಷ್ಟ್ರಕ್ಕೆ ಸಂಕಲ್ಪ: ವೈ.ಎಂ.ಸತೀಶ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.02: ‌ನಮ್ಮ ಭಾರತ  ಈಗ ಮುಂದುವರೆಯುತ್ತಿರುವ ದೇಶವಾಗಿದೆ. ಸ್ವಾತಂತ್ರ್ಯದ ಶತಮಾನೋತ್ಸವದ 2047 ರ ವೇಳೆಗೆ ಮುಂದುವರೆದ ದೇಶವಾಗಲು ಶ್ರಮಪಡಬೇಕೆಂಬ
ಪ್ರಧಾನಿ ಮೋದಿ ಅವರ ಸಂಕಲ್ಪಕ್ಕೆ  ಬರುವ 25 ವರ್ಷಗಳಲ್ಲಿ  ನಾವೆಲ್ಲ ಕೈಜೋಡಿಸಬೇಕು‌ ಎಂದು  ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಹೇಳಿದರು.
ಅವರು ನಿನ್ನೆ ಸಂಜೆ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ನಡೆದ ಭಾರತ ಸರ್ಕಾರದ ವಿವಿಧ ಯೋಜನೆಗಳನ್ನು  ಜನರಿಗೆ ತಲುಪಿಸುವ  “ವಿಕಸಿತ ಭಾರತ ಸಂಕಲ್ಪ ಯಾತ್ರಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಈಗ ಆರ್ಥಿಕವಾಗಿ ವಿಶ್ವದಲ್ಲಿ ಭಾರತ ಸುಸ್ಥಿರವಾದ ದೇಶವಾಗಿ ಮುನ್ನಡೆಯುತ್ತಿದ್ದು. ಮುಂದುವರೆದ ರಾಷ್ಟ್ರವಾಗಲು ಕೇವಲ ಸರ್ಕಾರದ ಪ್ರಯತ್ನ ಸಾಲದು, ನಾವು ನೀವೆಲ್ಲ ಪರಿಶ್ರಮದ ಮೂಲಕ ಕೈ ಜೋಡಿಸಬೇಕಿದೆಂದರು. 
ಸರ್ಕಾರವೇ ನಿಮ್ಮ‌ ಮನೆಗೆ ಭಾರತ ಸರ್ವಿಕಾರದ ವಿವಿಧ ಯೋಜನೆಗಳ‌ ನೋಂದಣಿಗಾಗಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಭಿಯಾನ ಕೈಗೊಂಡಿದೆ ಇದರ ಲಾಭ ಪಡೆಯಿರಿ ಎಂದು ಹೇಳಿದರು.
ಆರೋಗ್ಯಾಧಿಕಾರಿ ಶರಣ ಬಸವ ಅವರು  ಮಾತನಾಡಿ ಕೇವಲ ನಿಮ್ಮ ಆಧಾರ್ ಕಾರ್ಡು ನೀಡಿದರೆ ನಿಮಗೆ ಆರೋಗ್ಯ ವಿಮೆಯ ಕಾರ್ಡು ನೀಡಲಿದೆ. ಇದರಿಂದ ಉಚಿತ ಚಿಕಿತ್ಸೆ ದೊರೆಯಲಿದೆ. ಅಲ್ಲದೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಕ್ಷಯ ಮುಕ್ತ‌ ಮಾಡಲು ಸಂಕಲ್ಪ ಮಾಡಿದ್ದು. ಜಿಲ್ಲೆಯಲ್ಲಿ ಕ್ಷಯರೋಗ ಇರುವವರಿಗೆ ಚಿಕಿತ್ಸೆ ಜೊತೆಗೆ ನ್ಯೂಟ್ರಿಷನ್ ಆಹಾರಕ್ಕಾಗಿ ಕಿಟ್ ನೀಡಲಾಗುತ್ತಿದೆಂದು ತಿಳಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕೋಳೂರು ಶಾಖೆಯ ವ್ಯವಸ್ಥಾಪಕಿ ಶ್ರೀಲೇಖ ಅವರು,  ಪ್ರಧಾನ‌ಂಮತ್ರಿ ಸುರಕ್ಷಾ ಭೀಮಾ ಯೋಜನೆಯಡಿ ನೋಂದಣಿ ಮಾಡಿಸಿ ಎರೆಡು ಲಕ್ಷ ರೂ ವಿಮೆ ಪಡೆಯಿರಿ, ಈ ರೀತಿ‌ ಲಾಭ ಪಡೆದವರು ಅನೇಕರಿದ್ದೀರಿ. ಅಂತಹವರು ಈ ಬಗ್ಗೆ ಮತ್ತಷ್ಟು ಜನತೆಗೆ ತಿಳಿಸಿ ಎಂದರು.
ಸಂಜೆವಾಣಿಯೊಂದಿಗೆ ಮಾತನಾಡಿದ ರೈತ ವೀರನಗೌಡ, ನಾವು ಬ್ಯಾಂಕಿನಲ್ಲಿ ಪಡೆದ ಬೆಳೆಸಾಲವನ್ನು ನಿಗಧಿತ ಅವಧಿಯಲ್ಲಿ ಮರುಪಾವತಿಸಿದರೆ ಕೇಂದ್ರ ಸರ್ಕಾರ ನೀಡುವ ಶೇ 3 ರಷ್ಟು ರಿಯಾಯಿತಿ ನಮಗೆ ಸಾಕಷ್ಟು ಸಹಕಾರಿಯಾಗಿದೆಂದರು.
ರೈತ ಮಹಿಳೆ ಹೇಮ‌, ಈ ಮೊದಲು ಕಟ್ಟಿಗೆಯಿಂದ ಅಡುಗೆ ಮಾಡುವುದು ಉಜ್ಬಲ ಯೋಜನೆಯಿಂದ ತಪ್ಪಿದೆ. ಅಲ್ಲದೆ ಅಡುಗೆ ಅನಿಲ ಖರೀದಿಗೆ 300 ರೂ ಸಬ್ಸಿಡಿ ನೀಡುತ್ತಿರುವುದು ಸಹಕಾರಿಯಾಗಿದೆಂದರು.
ಕಾರ್ಯಕ್ರಮದಲ್ಲಿ ಬರುವ 2047 ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ  ಪ್ರತಿಜ್ಞಾವಿಧಿ ಭೋಧಿಸಿ, ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ಸಂದೇಶಗಳ ಪ್ರದರ್ಶನವನ್ನು ಜನತೆಗೆ ಪ್ರದರ್ಶಿಸಲಾಯ್ತು.