
ಸಂಜೆವಾಣಇ ವಾರ್ತೆ
ಗಂಗಾವತಿ:ಅ,15- ಸ್ವಾತಂತ್ರ್ಯ ಕ್ಕಾಗಿ ಶ್ರಮಿಸಿದ ಮಹಾನಿಯರನ್ನು ಹಾಗೂ ಹೋರಾಟ ಮಾಡಿದವರನ್ನು ಗೌರವಿಸಬೇಕು ಎಂದು ಶಾಸಕ ಗಾಲಿ ಜನಾರ್ಧನ ರಡ್ಡಿ ಹೇಳಿದರು.
ಇಂದು ನಗರದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಾಳಿತದಿಂದ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಸುಲಭದ ಮಾತಲ್ಲ. ಸ್ವಾತಂತ್ರ್ಯಕ್ಕಾಗಿ ಹಲವಾರು ಜನರ ಶ್ರಮವಿದೆ.ಅವರ ತ್ಯಾಗ ಬಲಿದಾನವಿದೆ. ಈಗಿನ ಪೀಳಿಗೆಯ ಜನರು ಅವರಿಗೆ ಗೌರವಿಸುವದರ ಮೂಲಕ ಅವರ ಕಾರ್ಯವನ್ನು ಶ್ಲಾಘಿಸಬೇಕು. ನನ್ನ ಮತ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಎಲ್ಲಾ ಹಳ್ಳಿಗಳಲ್ಲಿ ಅಭಿವೃದ್ಧಿಗಾಗಿ ಸಿಸಿ ರಸ್ತೆ, ವಿದ್ಯುತ್, ಪಾರ್ಕ್ ವ್ಯವಸ್ಥೆ ಕೈಗೊಳ್ಳಲು ಅಧಿಕಾರಿಗಳ ತಿಳಿಸಲಾಗಿದೆ. ನಗರ ಪ್ರದೇಶದಲ್ಲಿ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಂಜನಾದ್ರಿ ಬೆಟ್ಟದಲ್ಲಿ ಅಭಿವೃದ್ಧಿ ಗಾಗಿ ಸಕಲ ವ್ಯವಸ್ಥೆ ಕೈಗೊಳ್ಳಲು ತಿಳಿಸಲಾಗಿದೆ. ಹಾಗೂ ತಾಲೂಕಾ ಕ್ರೀಡಾಂಗಣದ ಅಭಿವೃದ್ಧಿಗೆ ಸಚಿವರಿಗೆ ತಿಳಿಸಲಾಗಿದೆ ನಾಲ್ಕೈದು ತಿಂಗಳಲ್ಲಿ ವಿವಿಧ ಕಾಮಗಾರಿ ಮಾಡಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಇದಕ್ಕು ಮೊದಲು ಪೊಲೀಸ್ ಇಲಾಖೆ, ಎನ್.ಸಿ.ಸಿ, ಸೇವಾ ದಳ, ವಿವಿಧ ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ದೇಶ ಭಕ್ತಿಗೀತೆಗಳಿಗೆ ನೃತ್ಯ ನಡೆಸಲಾಯಿತು.
ತಹಶಿಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿ ಶ್ರಮಿಸಿದವರನ್ನು ಎಲ್ಲರೂ ನೆನೆಯಬೇಕು. ಅವರು ಈ ಸ್ವಾತಂತ್ರ್ಯ ಕ್ಕಾಗಿ ಪಟ್ಟ ಕಷ್ಟವನ್ನು ಅರಿತು ಅವರನ್ನು ಗೌರವಿಸಬೇಕು ಎಂದರು. ಈ ವೇಳೆ ಇಒ ಲಕ್ಷ್ಮೀದೇವಿ, ಬಿಇಒ ವೆಂಕಟೇಶ ರಾಮಚಂದ್ರಪ್ಪ,ಜಿ.ಪಂ ಎಇಇ ವಿಜಯಕುಮಾರ, ಡಿವೈಎಸ್ ಪಿ ಸಿದ್ದಲಿಂಗಪ್ಪಗೌಡ ಪೋಲಿಸ್ ಪಾಟೀಲ್, ಪಿ.ಐ ಶೇಖರಪ್ಪ ಎಸ್ ಗೋದಿಗೊಪ್ಪ, ಪೌರಾಯುಕ್ತ ಆರ್. ವೀರಪಾಕ್ಷಮೂರ್ತಿ, ಉಪತಹಶಿಲ್ದಾರ್ ವಿರುಪಾಕ್ಷಪ್ಪ ಹೊರಪೇಟೆ, ಸಂಚಾರಿ ಪಿಎಸ್ ಐ ಶಾರದ,