ಸ್ವಾತಂತ್ರ್ಯಕ್ಕಾಗಿ ಬಲಿದಾನ ಸ್ಮರಣೀಯ

ವಿಜಯಪುರ, ಜು೩೧:ಬ್ರಿಟೀಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಲಕ್ಷಾಂತರ ಮಂದಿ ಸ್ವಾತಂತ್ರ್ಯ ವೀರರು ಪ್ರಾಣ ತೆತ್ತಿದ್ದು, ಇಂದಿನ ಪೀಳಿಗೆ ಅವರುಗಳ ಬಲಿದಾನವನ್ನು ಸದಾ ಸ್ಮರಿಸಬೇಕೆಂದು ಬಂಡಾಯ ಸಾಹಿತಿ ಜಿಲ್ಲಾ ಉತ್ಸವಾಧ್ಯಕ್ಷ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.
ಅವರು ಅಖಿಲ ಕರ್ನಾಟಕ ಮಿತ್ರ ಸಂಘದ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಭಾರತಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾದ ನೆನಪಿನ ಸುವರ್ಣ ಮಹೋತ್ಸವ ಹಾಗೂ ಅಖಿಲ ಕರ್ನಾಟಕ ಮಿತ್ರ ಸಂಘದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ ಉತ್ಸವಾಧ್ಯಕ್ಷರಾಗಿ ಅಭಿನಂದನೆ ಸ್ವೀಕರಿಸಿ, ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿರವರು ಮಾತನಾಡಿ, ೭೦ ವರ್ಷಗಳಾಗಿದ್ದರೂ, ಮಿತ್ರ ಸಂಘದ ರಾಜ್ಯಾಧ್ಯಕ್ಷ ಚಿ.ಮಾ.ಸುಧಾಕರ್‌ರವರು ೧೮ ವರ್ಷದ ಹುಡುಗನಂತೆ ಕೆಲಸ ಮಾಡುತ್ತಿದ್ದು, ಕನ್ನಡಕ್ಕಾಗಿ ಅವರು ಅವಿರತವಾಗಿ ಹಮ್ಮಿಕೊಳ್ಳೂವ ಕಾರ್ಯಕ್ರಮಗಳೀಂದ ವಿಜಯಪುರ ಪಟ್ಟಣ “ಸಾಂಸ್ಕೃತಿಕ ಕಾರ್ಯಕ್ರಮಗಳ ನಾಡು-ದೇವರ ಬೀಡು’ ಎಂಬ ಹೆಸರು ಗಳಿಸಿದ್ದು, ಪುರಸಭಾಧ್ಯಕ್ಷೆ ರಾಜೇಶ್ವರಿ ಭಾಸ್ಕರ್‌ರವರು ಪಟ್ಟಣದ ಅಭಿವೃದ್ದಿಗೆ ಶ್ರಮಿಸುತ್ತಿದ್ದು, ರಾಜ್ಯ ಸರಕಾರವು ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಶೇ.೪ ರಷ್ಟು ಮೀಸಲಿಟ್ಟಿರುವುದು ಸ್ವಾಗತಾರ್ಹ ಸಂಗತಿಯೆಂದು ತಿಳಿಸಿದರು.
ಜಿಲ್ಲಾ ಶಿಕ್ಷಕರ ಉತ್ಸವ ಅಧ್ಯಕ್ಷರಾಗಿದ್ದ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ವೆಂಕಟೇಶ್, ಮಹಿಳಾ ಸಮಾಜ ಸೇವಕರ ಉತ್ಸವ ಅಧ್ಯಕ್ಷರಾದ ಸೂರ್ಯಕಲಾ ಡಾಕ್ಟರ್ ಮೂರ್ತಿ, ಸಣ್ಣ ಕೈಗಾರಿಕೆಗಳ ಉದ್ದಿಮೆದಾರರ ಉತ್ಸವ ಅಧ್ಯಕ್ಷರಾದ ಹೊಸಕೋಟೆ ಚೌಡೇಗೌಡ, ಜನಪ್ರತಿನಿಧಿಗಳ ಉತ್ಸವ ಅಧ್ಯಕ್ಷರಾದ ಹೊಸಕೋಟೆ ನಗರಸಭಾ ಸದಸ್ಯರಾದ ರಾಜಶೇಖರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉತ್ಸವ ಅಧ್ಯಕ್ಷರಾಗಿ ಹನುಮಂತಪ್ಪ, ಜಿಲ್ಲಾ ಕೃಷಿಕರ ಉತ್ಸವ ಅಧ್ಯಕ್ಷರಾಗಿ ಲಕ್ಷ್ಮಣ್, ಜಿಲ್ಲಾ ಸಾರಿಗೆ ನೌಕರರ ಉತ್ಸವ ಅಧ್ಯಕ್ಷರಾದ ಮುನಿ ನಾರಾಯಣಸ್ವಾಮಿರವರುಗಳನ್ನು ಅಂಕತಟ್ಟಿ ನಂಜುಂಡಪ್ಪ ವೃತ್ತದಿಂದ ಊರಿನ ಪ್ರಮುಖ ಬೀದಿಗಳಲ್ಲಿ ವೀರಗಾಸೆ, ಡೊಳ್ಳು ಕುಣಿತ, ತಮಟೆ ವಾದ್ಯ, ನಾದಸ್ವರ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಬೆಳಿಗ್ಗೆ ೮-೩೦ ಕ್ಕೆ ರಾಷ್ಟ್ರ ಧ್ವಜಾ ರೋಹಣವನ್ನು ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಅವರು ನೆರವೇರಿಸಲಿದ್ದು ಕನ್ನಡ ಧ್ವಜಾರೋಹಣವನ್ನು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಡಾ ಕೆ ಎಂ ಶಿವಕುಮಾರ್ ನೆರವೇರಿಸಲಿದ್ದು ಸಂಗೀತ ನಿರ್ದೇಶಕ ಎಂ ವಿ ನಾಯ್ಡು ಮತ್ತು ತಂಡದವರಿಂದ ನಾಡಗೀತೆ ಮತ್ತು ರಾಷ್ಟ್ರಗೀತೆ ನಡೆಸಲಾಯಿತು..
ಪುರಸಭೆ ಉಪಾಧ್ಯಕ್ಷ ಕೇಶವಪ್ಪ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಕಾರಹಳ್ಳಿ ದೇವರಾಜ್, ಕಸಾಪ ಟೌನ್ ಮಾಜಿ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಕಾರ್ಯದರ್ಶಿ ಮುನಿವೆಂಕಟರಮಣಪ್ಪ, ಕಾರ್ಪೆಂಟರ್ ಮುನಿರಾಜು, ಎಲೆಕ್ಟ್ರಿಕ್ ನಾಗರಾಜುರವರುಗಳಿಗೆ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಎಂ ವೀರಪ್ಪ, ಕವಿಗಳಾದ ಸ್ವರ್ಣಗೌರಿ ಮಹದೇವ್, ಚಂದ್ರಶೇಖರ್ ಹಡಪದ್, ಶಿಕ್ಷಕರುಗಳಾದ ನಾರಾಯಣ್, ಪೆದ್ದನ್ನ ಉಪಸ್ಥಿತರಿದ್ದರು.