ಸ್ವಾತಂತ್ರದ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯದ ವೀರತನ ಮರೆಯುವಂತಿಲ್ಲ:ಶಾಂತಾರಾಮ್ ಸಿದ್ದಿ

ಕಲಬುರಗಿ.ಸೆ.9: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಅವರ ಅಹಿಂಸೆಯ ಹೋರಾಟದ ಜೊತೆಗೆ ಬುಡಕಟ್ಟು ಸಮುದಾಯ ವೀರತನ, ಶೂರತನವು ಇದೆ. ಆದರೆ ಅದು ಇತಿಹಾಸದಲ್ಲಿ ಮರೆಯಾಗಿದ್ದು ದುರ್ದೈವ ಎಂದು ವಿಧಾನ ಪರಿಷತ್ ಶಾಸಕ ಹಾಗೂ ವನವಾಸಿ ಕಲ್ಯಾಣ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಶಾಂತಾರಾಮ್ ಸಿದ್ದಿ ಹೇಳಿದರು.
ಬ್ರಿಟೀಷರ ವಿರುದ್ಧದ ಸ್ವಾತಂತ್ರ ಹೋರಾಟದಲ್ಲಿ ಬುಡಕಟ್ಟು ಸಮುದಾಯದ ಕೊಡುಗೆ, ಪರಿಶ್ರಮ ಬಹಳಷ್ಟಿದೆ. ಸ್ವಾತಂತ್ರದ ಸಂಗ್ರಾಮದಲ್ಲಿ ಕರ್ನಾಟಕದ ಹಲಗಲಿ ಬೇಡರ ಪಾತ್ರವೂ ಹಿರಿದಾಗಿದೆ ಎಂದು ಹೇಳಿದರು. ಹೋರಾಟದ ಇತಿಹಾಸದಲ್ಲಿ ಇದು ದಾಖಲಾಗದಿರುವುದು ವಿμÁದದ ಸಂಗತಿ ಎಂದ ಅವರು ಇತಿಹಾಸದ ಸತ್ಯ ಸಂಶೋಧನೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ನವದೆಹಲಿಯ ಪರಿಶಿಷ್ಠ ಪಂಗಡಗಳ ರಾಷ್ಟ್ರೀಯ ಆಯೋಗದ ಆಶ್ರಯದಡಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಸಹಯೋಗದೊಂದಿಗೆ ಶುಕ್ರವಾರ ವಿ.ವಿ.ಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ “ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ವೀರರು” ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಸಿಕ್ಕ ಸ್ವಾತಂತ್ರ್ಯ ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ನಾಡು, ನುಡಿ, ಜಲ, ಗಡಿ ವಿಧ, ಜಾತಿಯತೆ ಮರೆತು
ಸ್ವಾತಂತ್ರ್ಯ ಉಳಿವಿಗೆ ಒಗ್ಗಟ್ಟಿನ ಅವಶ್ಯಕತೆ ವಿದೆ. ದೇಶ ಮತ್ತು ಸಮಾಜದ ರಕ್ಷಣೆಗಾಗಿ ಯುವಕರು ಸಂಕಲ್ಪ ಮಾಡಬೇಕು ಎಂದರು.
1857 ದೇಶದ ಮೊದಲ ಸ್ವಾತಂತ್ರ ಸಂಗ್ರಾಮ ಎಂದು ಹೇಳುತ್ತೆವೆ. ಅದರೆ ಬಿಹಾರದ ತಿಲಕ್ ಮಾಂಜಿ ಎಂಬ ಬುಡಕಟ್ಟು ಸಮುದಾಯದ ಯುವಕ 1750ರಲ್ಲಿಯೇ ಬುಡಗಟ್ಟು ಜನರ ಮೇಲೆ ಬ್ರಿಟೀಷರ ದಬ್ಬಾಳಿಕೆ ಸಹಿಸದೆ ಆಂಗ್ಲ ಅಧಿಕಾರಿಯನ್ನು ತನ್ನ ಬಿಲ್ಲಿನಿಂದ ಕೊಂದುವ ಮೂಲಕ ಆಂಗ್ಲರವಿರುದ್ಧ ತೊಡೆತಟ್ಟಿದ್ದ. ರಾಮಾಯಣ-ಮಹಾಭಾರತದ ಕಥಾ ರೂಪಕದ ಪ್ರತಿ ಹಂತದಲ್ಲಿಯೂ ವನವಾಸಿ ಸಮುದಾಯ ಕಾಣುತ್ತದೆ. ರಾಮಾಯಣ ಬರೆದ ವಾಲ್ಮೀಕಿ ಸಹ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂದರು.
ದೇಶದಲ್ಲಿ ಸುಮಾರು 11 ಕೋಟಿ ಜನ ಬುಡಕಟ್ಟು ಜನಾಂಗವಿದೆ. ನಾಗಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ ನಂಥ ರಾಜ್ಯಗಳಲ್ಲಿ ಆದಿವಾಸಿ ಜನ ಹೆಚ್ಚಾಗಿ ಕಾಣಸಿಗುತ್ತಾರೆ. ಇವರು ಕನಿಷ್ಟ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದರು.
ರಾಜ್ಯದಲ್ಲಿ 51 ಪ್ರಕಾರದ ಬುಡಕಟ್ಟು ಸಮುದಾಯದವರು ವಾಸಿಸುತ್ತಿದ್ದಾರೆ. ಉಡುಪಿಯಲ್ಲಿನ ಕೊರಗ ಸಮುದಾಯ, ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಜೇನು ಕುರುಬ ವನವಾಸಿ ಸಮುದಾಯಕ್ಕೆ ಇಂದಿಗೂ ಸುರಕ್ಷತೆಯ ಮನೆಯಿಲ್ಲ. 1-2 ಸಾವಿರ ರೂ. ಗಳ ಪ್ಲಾಸ್ಟಿಕ್ ಟಾರ್ಪಲಿನ್ ಹೊದಿಕೆಯೊಂದಿಗೆ ಸೂರು ಮಾಡಿಕೊಂಡಿದ್ದಾರೆ. ಇಂತಹ ಕಷ್ಟದ ಜೀವನ ವನವಾಸಿಗಳದ್ದಾಗಿದ್ದು, ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ 100 ವಿಶ್ವವಿದ್ಯಾಲಯಗಳಲ್ಲಿ ಯುವ ಪೀಳಿಗೆಯ ಅರಿವಿಗೆ ಸ್ವಾತಂತ್ರ ಹೋರಾಟದಲ್ಲಿ ಬುಡಕಟ್ಟು ಜನಾಂಗದ ಪಾತ್ರದ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಆಯೋಜಿಸಿದ್ದು ಔಚಿತ್ಯಪೂರ್ಣವಾಗಿದೆ ಎಂದರು.
ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಸಲಹೆಗಾರ ರಾಘವ ಮಿತ್ತಲ್ ಅವರು, ರಾಷ್ಟ್ರೀಯ ಆಯೋಗದ ಅಧಿಕಾರ ಮತ್ತು ವ್ಯಾಪ್ತಿ ಕುರಿತು ವಿವರಿಸಿದರು. ಶೈಕ್ಷಣಿಕ ಸಂಯೋಜಕ ಪೆÇ್ರ. ಗೂರು ಶ್ರೀರಾಮುಲು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ಗಂಗಾಧರ ನಾಯಕ್, ವಿದ್ಯಾವಿಷಯಕ ಪರಿಷತ್ ಸದಸ್ಯ ಪೆÇ್ರ. ಟಿ. ಶಂಕರಪ್ಪ, ಕುಲಸಚಿವ ಪೆÇ್ರ. ವಿ.ಟಿ.ಕಾಂಬಳೆ, ಮುಖ್ಯ ಸಂಯೋಜಕ ಪೆÇ್ರ.ಚಂದ್ರಕಾಂತ ಆರ್. ಕೆಳಮನಿ, ಆಡಳಿತ ಸಂಯೋಜಕ ಪೆÇ್ರ. ಬಸವರಾಜ ಸಣ್ಣಕ್ಕಿ ಇದ್ದರು. ದೈಹಿಕ ಶಿಕ್ಷಣ ವಿಭಾಗದ ನಿಂಗಣ್ಣ ಕಣ್ಣೂರು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವದ ಹಂಗು ತೊರೆದು ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಬುಡಕಟ್ಟು ವೀರರ ಕುರಿತ ವಿಡಿಯೋ ಚಿತ್ರ ಪ್ರದರ್ಶಿಸಲಾಯಿತು.