ಸ್ವಾತಂತ್ರಕ್ಕೋಸ್ಕರ ಹೋರಾಡಿದ ರಾಮಸ್ವಾಮಿಯ ಹುತಾತ್ಮ ದಿನ

ಮೈಸೂರು: ಸೆ.13:- ರಾಮಸ್ವಾಮಿ ಒಬ್ಬ ಬಾಲ ಹೋರಾಟಗಾರ, ಅಂದಿನ ಮೈಸೂರು ಸಂಸ್ಥಾನಕ್ಕೆ ಸ್ವಾತಂತ್ರ್ಯ ಬರಬೇಕೆಂದು ನಡೆದ ಹೋರಾಟದಲ್ಲಿ ಹುತಾತ್ಮನಾದ ವೀರ ಬಾಲಕ. ಈ ಹುತಾತ್ಮ ದಿನದಂದು ನಮ್ಮ ಸಂಘಟನೆಯ ಂIಆSಔ ನಿಂದ ರಾಮಸ್ವಾಮಿ ವೃತ್ತದ ಬಳಿ ವಿವಿಧ ಶಾಲ- ಕಾಲೇಜುಗಳಿಂದ ವಿದ್ಯಾರ್ಥಿಗಳು ಸೇರಿ ಅವರಿಗೆ ಅವರ ಹೋರಾಟದ ಇತಿಹಾಸವನ್ನು, ಸ್ಪೂರ್ತಿಯುತ ಹೋರಾಟವನ್ನು ನೆನಪಿಸಿಕೊಂಡೆವು.
ಇವರ ಹುತಾತ್ಮ ದಿನವನ್ನು ಉದ್ದೇಶಿಸಿ ಂIಆSಔ ಜಿಲ್ಲಾಧ್ಯಕ್ಷರಾದ ಸುಭಾಷ್ ಬಿಜೆ ಮಾತನಾಡಿದರು. ಇಡೀ ದೇಶಕ್ಕೆ ಸ್ವಾತಂತ್ರ್ಯ ಬಂದರೂ, ಅಂದಿನ ಮೈಸೂರು ಸಂಸ್ಥಾನಕ್ಕೆ ಆಗಸ್ಟ್15ರಂದು ಸ್ವಾತಂತ್ರ್ಯ ಬರಲಿಲ್ಲ. ಮೈಸೂರು ಮಹಾರಾಜರು ಮೈಸೂರಿಗೆ ಸಂಸ್ಥಾನಕ್ಕೆ ಸ್ವಾತಂತ್ರ ನೀಡಿರಲಿಲ್ಲ. ಇಡೀ ದೇಶದ ಬಹುಪಾಲು ಜನ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದರೆ, ಮೈಸೂರು ಸಂಸ್ಥಾನದ ಜನ ಸೂತಕದ ವಾತಾವರಣದಲ್ಲಿದ್ದರು. ಜೊತೆಗೆ ಸಿಟ್ಟಿಗೆದ್ದ ಜನ ನಿರಂತರವಾಗಿ, ರಾಜ್ಯಯಂತ್ರಕ್ಕೆ ಅಸಹಕಾರ ತೋರಿಸತೊಡಗಿದರು. ಪಟೇಲರು, ಶ್ಯಾನುಭೋಗರ ರಸೀತಿ ಪುಸ್ತಕಗಳನ್ನು ಜನ ಕಿತ್ತುಕೊಂಡು ಬೆಂಕಿಗೆ ಆಹುತಿ ಕೊಡತೊಡಗಿದರು. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು ತೊರೆದು ಹೋರಾಟಕ್ಕೆ ಧುಮುಕಿದರು.
ರಾಮಸ್ವಾಮಿ 17 ವರ್ಷದ ಬಾಲಕ. ಹಾಡ್ರ್ವಿಕ್ ಮಾಧ್ಯಮಿಕ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ರಾಷ್ಟ್ರನಾಯಕರ ಕರೆಗಳನ್ನು ಕೇಳಿ, ಪತ್ರಿಕೆಗಳನ್ನು ಓದಿ ಸ್ವಾತಂತ್ರ್ಯ ಚಳುವಳಿಯ ಸಭೆಗಳಲ್ಲಿ ಭಾಗವಹಿಸಿ ಅಪ್ಪಟ ಸ್ವಾತಂತ್ರ್ಯ ಪ್ರೇಮಿಯಾಗಿದ್ದ ರಾಮಸ್ವಾಮಿ ಚಳುವಳಿಯ ಕರೆ ಬಂದೊಡನೆಯೇ ಮನೆಯಿಂದ ಹೊರಬಿದ್ದು ಚಳುವಳಿಗೆ ಧುಮುಕುತ್ತಿದ್ದ. ತಾನು ಭಾಗವಹಿಸುವುದರ ಜೊತೆಗೆ ತನ್ನ ಸ್ನೇಹಿತರನ್ನೂ ಸಹ ಚಳುವಳಿಯಲ್ಲಿ ಭಾಗವಹಿಸುವಂತೆ ಹುರಿದುಂಬಿಸುತ್ತಿದ್ದ.
ಇಂದು ಅರಮನೆ ಮುಂಭಾಗ ಸತ್ಯಾಗ್ರಹ ಹೂಡುವುದೆಂದು ತೀರ್ಮಾನಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಹೋರಾಟಗಾರರು ಮೈಸೂರಿಗೆ ಹೊರಟು ಬಂದಿದ್ದರು. ಈ ಚಳುವಳಿಯನ್ನು ಹತ್ತಿಕ್ಕುವ ಸಲುವಾಗಿ ಚಳುವಳಿಯ ಎಲ್ಲಾ ಮುಂಚೂಣಿ ನಾಯಕರನ್ನು ಕೂಡಲೇ ಬಂಧಿಸಲಾಯಿತು. *ಅಂದು ತನ್ನ ಹುಟ್ಟಿದ ದಿನಕ್ಕೆ ಮನೆಯಲ್ಲಿ ಸಿಹಿ ಮಾಡಿಸಲು ದಿನಸಿ ತರಲು ಹೊರಟಿದ್ದ ರಾಮಸ್ವಾಮಿಯು ಕೂಡಾ ಅಲ್ಲಿಗೆ ಬಂದು ಚಳುವಳಿಯಲ್ಲಿ ಸೇರಿಕೊಂಡನು.
ಜನರನ್ನು ಚದುರಿಸಲು ಪೆÇಲೀಸರು ಲಾಠಿ ಪ್ರಹಾರ ಮಾಡಿದರು. ಅಶ್ರುವಾಯು ಪ್ರಯೋಗಿಸಿದರು. ವಿದ್ಯಾರ್ಥಿಗಳು ಚೆಲ್ಲಾಪಿಲ್ಲಿಯಾದರು. ಆದರೆ ಇದರ ನಡುವೆಯೂ ಧೈರ್ಯಶಾಲಿ ರಾಮಸ್ವಾಮಿ ತ್ರಿವರ್ಣ ಧ್ವಜ ಹಿಡಿದು ವೃತ್ತವನ್ನು ಪ್ರವೇಶಿಸಿ, ಧ್ವಜವನ್ನು ಹಾರಿಸಲು ಲಾಂದ್ರದ ಕಂಬವೇರಿದ. ಅಷ್ಟರಲ್ಲಿ ಅಲ್ಲಿಗೆ ಕುದುರೆ ಏರಿ ಬಂದ, ಅಂದಿನ ಮೈಸೂರು ಜಿಲ್ಲಾಧಿಕಾರಿ ನಾಗರಾಜರಾವ್ ರವರು, ಪೆÇೀಲಿಸರಿಗೆ ಹೋರಾಟಗಾರರ ಮೇಲೆ ಗೋಲಿಬಾರ್ ನಡೆಸುವಂತೆ ಆದೇಶಿಸಿದರು. ಆದರೆ ಅಲ್ಲಿದ್ದ ಜನರನ್ನು ನೋಡಿ ಹೆದರಿದ ಪೆÇಲೀಸರು ಅದಕ್ಕೆ ನಿರಾಕರಿಸಿದರು.
ಕೋಪಗೊಂಡ ನಾಗರಾಜರಾವ್ ಕೈಯಲ್ಲಿದ್ದ ರಿವಾಲ್ವರ್ ಅನ್ನು ರಾಮಸ್ವಾಮಿಯೆಡೆಗೆ ಗುರಿಮಾಡಿ ತೋರಿಸಿ ಧ್ವಜವನ್ನು ಬಿಟ್ಟು ಕೆಳಗಿಳಿಯದಿದ್ದರೆ ಗುಂಡು ಹಾರಿಸುವುದಾಗಿ ಗದರಿಸಿದರು. ಆದರೆ ಧೈರ್ಯಗೆಡದ ಬಾಲಕ “ನಮ್ಮ ನಾಡಿನ ಸ್ವತಂತ್ರಕ್ಕಾಗಿ ಜನರೆಲ್ಲಾ ಹೋರಾಡುತ್ತಿರುವಾಗ ನೀವು ಇಷ್ಟು ಓದಿದವರಾಗಿ ಸಂಬಳಕ್ಕೆ ಗುಲಾಮರಾಗಬೇಡಿ. ನೀವು ನಮ್ಮೊಡನೆ ಸೇರಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿರಿ” ಎಂದ “ನನ್ನೊಬ್ಬನನ್ನು ಕೊಂದರೇನಂತೆ? ಕೋಟ್ಯಾಂತರ ಭಾರತೀಯರು ಸಿಡಿದೇಳುತ್ತಾರೆ. ಮೈಸೂರು ರಾಜ್ಯ ಸ್ವತಂತ್ರವಾಗುತ್ತದೆ. ನಿಮ್ಮ ಅಧಿಕಾರ ಹೋಗುತ್ತದೆ” ಎಂದ ಬಾಲಕ ತನ್ನ ಶರಟು ಕಿತ್ತು ಅಧಿಕಾರಿಯೆಡೆಗೆ ತನ್ನ ಎದೆ ಚಾಚಿದನು. ರೇಗಿದ ಅಧಿಕಾರಿಯ ರಿವಾಲ್ವರ್ ನಿಂದ ಹಾರಿದ ಮೂರು ಗುಂಡುಗಳು ರಾಮಸ್ವಾಮಿಯ ಎದೆಯನ್ನು ಭೇದಿಸಿದವು. ಕೈಯಲ್ಲಿ ಧ್ವಜ ಹಿಡಿದಂತೆಯೇ ಇತ್ತು. ಕಂಬದ ಬುಡದಲ್ಲಿ ರಾಮಸ್ವಾಮಿ ಕುಸಿದುಬಿದ್ದನು. ಈ ಧೀರ ಬಾಲಕನ ನೆನಪಿನಲ್ಲಿ ವೃತ್ತಕ್ಕೆ “ರಾಮಸ್ವಾಮಿ ವೃತ್ತ”ಎಂದು ಮರು ನಾಮಕರಣ ಮಾಡಲಾಯಿತು. ಹೋರಾಟದ ಫಲವಾಗಿ ಮುಂದೆ ಅಕ್ಟೋಬರ್ 24 ರಂದು, ಮೈಸೂರು ಸಂಸ್ಥಾನದ ಆಡಳಿತ ಕೊನೆಯಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಸುಭಾಷ್ ಕಾರ್ಯದರ್ಶಿಗಳಾದ ಚಂದ್ರಕಲಾ, ಆಸಿಯಾ ಬೇಗಂ ಶಾಲಾ ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.