ಸ್ವಾಗತ ಸಮಾರಂಭ

ಧಾರವಾಡ, ಸೆ5: ಕೆ ಎಲ್ ಎಸ್ ವಿ ಡಿ ಐ ಟಿ ಹಳಿಯಾಳದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿತ್ತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿ. ಎ. ಕುಲಕರ್ಣಿ ತಂತ್ರಜ್ಞಾನವು ಜಗತ್ತನ್ನು ಆಳುತ್ತಿದ್ದು, ವಿಜ್ಞಾನಿಗಳು ಹಾಗೂ ಇಂಜಿನಿಯರ್ ಗಳು ಹೊಸ ಆವಿಷ್ಕಾರಕ್ಕೆ ಕಾರಣಿಭೂತರಾಗಿದ್ದಾರೆ ಎಂದು ಹೇಳಿದರು. ಮಹಾವಿದ್ಯಾಲಯವು ಉತ್ತಮ ನಾಗರಿಕ ಇಂಜಿನಿಯರ್ ಗಳನ್ನು ರೂಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ವಾತಾವರಣವನ್ನು ನಿರ್ಮಿಸಿದೆ ಎಂದು ಹೇಳಿದರು.
ಡಾ. ಸಮೀರ್ ಗಲಗಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ದೇಶ ಕಂಡ ಅತ್ಯುತ್ತಮ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ನಮ್ಮೆಲ್ಲರಿಗೆ ಸ್ಪೂರ್ತಿಯಾಗಿದ್ದು ಅವರಂತೆ ನಾವೆಲ್ಲ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಹೇಳಿದರು. ಶೈಕ್ಷಣಿಕ ವಿಭಾಗದ ಡೀನ್ ಪೆÇ್ರ. ಪೂರ್ಣಿಮಾ ರಾಯ್ಕರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಬಳಸುತ್ತಿರುವ ಅತ್ಯಾಧುನಿಕ ತಂತ್ರಾಂಶಗಳ ಕುರಿತು ಮಾಹಿತಿ ನೀಡಿದರು.
ವಿ ಟಿ ಯು ನಿರ್ದೇಶನುಸಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ವನ್ನು ಸಪ್ಟೆಂಬರ್ 15 ರ ವರೆಗೆ ಆಯೋಜಿಸಲಾಗಿದೆ. ಪರಿಣಿತರ ಉಪನ್ಯಾಸ, ವಿವಿಧ ವಿಭಾಗಗಳ ಕಾರ್ಯ ವೀಕ್ಷಣೆ , ಕೈಗಾರಿಕೆ ಗಳಿಗೆ ಭೇಟಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.