“ಸ್ವಾಗತರ್ಹಾದಾಯಕ ಸಂಗತಿ”

.ಹೊಳಲ್ಕೆರೆ. ಮೇ.೨೮;  ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ವ್ಯಾಪಿಸಿರುವ ಹಿನ್ನಲೆಯಲ್ಲಿ ಕೋವಿಡ್ ಸೋಂಕಿತರ ಪಾಲನೆಯಲ್ಲಿ ಹಗಲಿರುಳು ರೋಗಿಗಳ ವೈದ್ಯಾಕೀಯ ಸೇವೆ ನೀಡುತ್ತಿರುವ ವೈದ್ಯಾರು ಹಾಗೂ ವೈದ್ಯಾಕೀಯ ಸಿಬ್ಬಂದಿಗಳಿಗೆ ಘನ ಸರ್ಕಾರ “ಕೋವಿಡ್ ರಿಸ್ಕ್ ಭತ್ಯೆ” ಹೆಚ್ಚವರಿ ವಿಶೇಷ ಭತ್ಯೆ ವೈದ್ಯರಿಗೆ ರೂ 10,000/- ನರ್ಸ್ಗಳಿಗೆ (ದಾದಿಯರಿಗೆ) ರೂ 8000/-ಗಳನ್ನು ಹಾಗೂ ಪ್ರಯೋಗಶಾಲಾ ತಂತ್ರಜ್ಞಾನರಿಗೆ 5,000/- ಗ್ರೋಪ್ “ಡಿ”ಯವರಿಗೆ 3,000/- ವಿಶೇಷ ಭತ್ಯೆ ಘೋಷಿಸಿರುವುದು ಸ್ವಾಗತಾರ್ಹದಾಯಕ ಸಂಗತಿಯಾಗಿದೆ ಎಂದು ಎಸ್ ಮರುಳಸಿದ್ದೇಶ್ವರ ಹೇಳಿದ್ದಾರೆ.ಸರ್ಕಾರ ಪ್ರಸ್ತುತ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ ಸ್ವತಃ ಪೋಷಕರೆ ಕೋವಿಡ್ ಸೋಂಕಿತರೆ ಹತ್ತಿರ ಬಾರ ಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಕರೋನಾ ಸಂಕ್ರಾಮಿಕ ರೋಗವೆಂದು ತಿಳಿದಿದ್ದರು ವೈದ್ಯರು ಹಾಗೂ ವೈದ್ಯಾಕೀಯ ಸಿಬ್ಬಂದಿಗಳು ತಮ್ಮ ಜೀವದ ಹಂಗನ್ನು ತೊರೆದು ಕರೋನಾ ಸೋಂಕಿತರಿಗೆ ಚಿಕಿತ್ಸೆಗೆ ಮುಂದಾಗಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಇದನ್ನು ಅವಲೋಕಿಸಿರುವ ಸರ್ಕಾರ “ಕೋವಿಡ್ ರಿಸ್ಕ್ ಭತ್ಯೆ” ವಿಶೇಷ ಭತ್ಯೆ ನೀಡಿರುವುದು ಸ್ವಾಗತಾರ್ಹದಾಯಕ ವಿಷಯವಾಗಿದೆ.