ಸ್ವಹಾಯ ಸಂಘಗಳು ಪ್ರಗತಿಗೆ ಶಾಸಕರ ಸಲಹೆ

ಪಾವಗಡ, ಆ. ೬- ಸರ್ಕಾರ ನೀಡುವ ಸಹಾಯ ಧನವನ್ನು ಪಡೆದುಕೊಂಡು ಸ್ವಸಹಾಯ ಸಂಘದ ಮಹಿಳಾ ಸದಸ್ಯರುಗಳು ಪ್ರಗತಿ ಸಾಧಿಸಬೇಕು ಎಂದು ಶಾಸಕ ವೆಂಕಟರವಣಪ್ಪ ಸಲಹೆ ನೀಡಿದರು.
ಪಟ್ಟಣದಲ್ಲಿ ಜಿಲ್ಲಾ ಪಂಚಾಯತ್ ತುಮಕೂರು, ತಾಲ್ಲೂಕು ಪಂಚಾಯತ್, ಮಹಿಳಾ ಮತ್ತು ಅಭಿವೃದ್ದಿ ಇಲಾಖೆ ಪಾವಗಡ ಇವರ ಸಹಯೋಗದಲ್ಲಿ ಅಮೃತ ಮಹಿಳಾ ಸ್ವಸಹಾಯ ಸಂಘಗಳಿಗೆ ಸಹಾಯ ಧನದ ಚೆಕ್ ವಿತರಣಾ ಕಾರ್ಯಕ್ರಮ ಹಾಗೂ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಾಯ ಧನದ ಹಣವನ್ನು ಆದಾಯವನ್ನು ಉತ್ಪಾದಿಸುವ ಚಟುವಟಿಕೆಗಳಲ್ಲಿ ತೊಡಗಿಕೊಂಡು ಆದಾಯ ಪಡೆದು ಲಾಭಾಂಶದಿಂದ ಅಭಿವೃದ್ದಿ ಹೊಂದಬೇಕು ಎಂದು ಹೇಳಿದರು.
ಸಿ.ಡಿ.ಪಿ.ಓ. ನಾರಾಯಣ ಮಾತನಾಡಿ, ತಾಲ್ಲೂಕಿನಲ್ಲಿರುವ ಆಯ್ದ ೫೦ ಸಂಘಗಳನ್ನು ಅಮೃತ ಸ್ವಹಾಯ ಸಂಘಗಳ ಯೋಜನೆಯಲ್ಲಿ ೧ ಲಕ್ಷ್ಮ ಸಹಾಯಧನವನ್ನು ನೀಡುತ್ತಿದ್ದು, ಆದಾಯವನ್ನು ಉತ್ಪಾದಿಸುವ ಉದ್ದಿಮೆದಾರರಾಗಿ ಹೊರ ಹೊಮ್ಮಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ತಿರುಪತಯ್ಯ ಮಾತನಾಡಿ, ಮಗು ಹುಟ್ಟಿದ ೧ ಘಂಟೆಯೊಳಗೆ ತಾಯಿಯ ಎದೆಯ ಹಾಲು ಕುಡಿಸಿದರೆ ಮಗು ಆರೋಗ್ಯದಿಂದ ಬೆಳವಣಿಗೆಯಾಗುತ್ತದೆ ಮತ್ತು ಮಹಿಳೆಯರು ಕಡ್ಡಾಯವಾಗಿ ಶೌಚಾಲಯವನ್ನು ಉಪಯೋಗಿಸಬೇಕು. ಶೌಚಾಲಯ ಇಲ್ಲದಿದ್ದರೆ ಸರ್ಕಾರ ನೀಡುವ ಸವಲತ್ತನ್ನು ಪಡೆದುಕೊಂಡು ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.
ತಾ.ಪಂ. ಇ.ಒ. ಶಿವರಾಜಯ್ಯ ಮಾತನಾಡಿ, ಸಂಘದ ಸದಸ್ಯರುಗಳು ಹಣದ ವ್ಯವಹಾರವನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ಬಿ.ಇ.ಓ. ಅಶ್ವಥ್‌ನಾರಾಯಣ ಮಾತನಾಡಿ, ಸ್ವಹಾಯ ಸಂಘದ ಸದಸ್ಯರುಗಳು ತಮ್ಮ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಿ ಅವರು ತಮ್ಮ ಕಾಲ ಮೇಲೆ ತಾವೇ ನಿಂತುಕೊಳ್ಳುವಂತೆ ರೂಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಪುರಸಭಾದ್ಯಕ್ಷರಾದ ಎ. ಶಂಕರೆಡ್ಡಿ, ಸುಧಾಕರರೆಡ್ಡಿ, ಜಿಲ್ಲಾ ಕಾಳಿದಾಸ ಸಂಘದ ಅಧ್ಯಕ್ಷರಾದ ಮೈಲಪ್ಪ, ಸಂಜೀವಿನಿ ಯೋಜನೆಯ ತಾ. ಸಂಯೋಜಕ ಡಿ. ಕೃಷ್ಣಮೂರ್ತಿ, ಸ್ವಹಾಯ ಸಂಘಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷೆ ಜಯಮ್ಮ, ರಾಜ್ಯ ಸಂಪನ್ಮೂಲ ವ್ಯಕ್ತಿ ನಾಗಲಕ್ಷ್ಮಿ, ಸೂಪರ್ ವೈಸರ್ ಜಯಲಕ್ಷ್ಮಿ, ಸುಶೀಲಮ್ಮ ಮತ್ತಿತರರು ಉಪಸ್ಥಿತರಿದ್ದರು.ಟ
ಇದೇ ಸಂದರ್ಭದಲ್ಲಿ ೫೦ ಸ್ವಸಹಾಯ ಸಂಘಗಳಿಗೆ ತಲಾ ೧ ಲಕ್ಷದಂತೆ ೫೦ ಲಕ್ಷ ಸಹಾಯಧನದ ಚೆಕ್ ವಿತರಿಸಲಾಯಿತು.