ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಧಾನ: ಸುಭಾಷ ತೇಲಿ

ಅಫಜಲಪುರ: ಸೆ.6:ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಹೀಗಾಗಿ ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯದ ಭದ್ರತೆಗೆ ಮುಂದಾಗಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಷ ತೇಲಿ ತಿಳಿಸಿದರು.

ಪಟ್ಟಣದ ಬ್ರಿಲಿಯಂಟ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಗುರು ಮತ್ತು ಶಿಕ್ಷಕ ಪರಂಪರೆ ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಶಿಕ್ಷಕರು ನಮಗೆ ನಿಜವಾದ ಜೀವನ ವಿಧಾನವನ್ನು ಕಲಿಸಿ ಸರಿಯಾದ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸುತ್ತಾರೆ.
ಗುರು ಮತ್ತು ಶಿಷ್ಯ ಸಂಪ್ರದಾಯ ಭಾರತೀಯ ಸಂಸ್ಕøತಿಯ ಪ್ರಮುಖ ಮತ್ತು ಪವಿತ್ರ ಭಾಗವಾಗಿದೆ. ಈ ವರ್ಣರಂಜಿತ ಸುಂದರ ಜಗತ್ತನ್ನು ನಮಗೆ ಪರಿಚಯಿಸುವ ಮೂಲಕ ನಮ್ಮಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಪ್ರಜ್ಞೆಯ ಅರಿವನ್ನು ಮೂಡಿಸುತ್ತಾರೆ ಎಂದು ಶಿಕ್ಷಕರ ಮಹತ್ವ ತಿಳಿಸಿದರು.

ತರಬೇತಿ ಕೇಂದ್ರದ ಕಂಪ್ಯೂಟರ್ ಶಿಕ್ಷಕಿ ಶೀತಲ ತೇಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಹೊಂದುವ ಮೂಲಕ ತಾವು ಅಭ್ಯಾಸ ಮಾಡಿದ ಶಾಲೆ, ಗ್ರಾಮ ಮತ್ತು ಪೆÇೀಷಕರಿಗೆ ಕೀರ್ತಿ ತರುವ ಮಕ್ಕಳಾಗಿ ಬೆಳೆಯಬೇಕು.
ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಹೆಚ್ಚಿನ ಮಹತ್ವವಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣದಲ್ಲಿ ಅಪಾರ ನಂಬಿಕೆ ಇಟ್ಟವರು. ಅವರೊಬ್ಬ ಮಹಾನ್ ತತ್ವಜ್ಞಾನಿ ಮತ್ತು ಶಿಕ್ಷಕರಾಗಿದ್ದರು. ಅವರಿಗೆ ಬೋಧನೆಯಲ್ಲಿ ಆಳವಾದ ಪ್ರೀತಿ ಇತ್ತು. ಆದರ್ಶ ಶಿಕ್ಷಕನ ಎಲ್ಲಾ ಗುಣಗಳನ್ನು ಹೊಂದಿದ್ದರು. ಹೀಗಾಗಿ ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಅವಿಸ್ಮರಣೀಯವಾಗಿರಿಸಲು ಹಾಗೂ ಶಿಕ್ಷಕರಿಗೆ ಗೌರವವನ್ನು ಸೂಚಿಸಲು ಸೆಪ್ಟೆಂಬರ್ 5 ರಂದು ಭಾರತದಾದ್ಯಂತ ಶಿಕ್ಷಕರ ದಿನವನ್ನು ಆಚರಿಸುತ್ತಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು
ತಮಗೆ ವಿದ್ಯೆ ಕಲಿಸಿ ಬದುಕಿಗೆ ಮಾರ್ಗದರ್ಶನ ನೀಡಿದ ಗುರುಗಳ ಸ್ಮರಣೆಯನ್ನು ಹಲವರು ತಮ್ಮದೇ ಭಾವನೆಗಳಲ್ಲಿ ವ್ಯಕ್ತಪಡಿಸಿದರು ಗೌರವ ನಮನ ಸಲ್ಲಿಸಿದರು.