ಸ್ವಸ್ಥ ಶರೀರ ಮತ್ತು ಮನಸ್ಸಿನಿಂದ ಸಧೃಢ ಸಮಾಜ ನಿರ್ಮಾಣ

ಬೀದರ:ಡಿ.28: ಭಾರತದ ಸಂಸ್ಕøತಿ ವಿಶ್ವದಲ್ಲಿಯೇ ಶ್ರೀಮಂತ ಸಂಸ್ಕøತಿಯಾಗಿದೆ. ಅದನ್ನು ಮುಂದುವರೆಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಯೋಗ ನಮ್ಮ ದೇಶದ ಉತ್ತಮ ಸಂಸ್ಕøತಿ. ಪ್ರತಿದಿನ ಯೋಗ ಮಾಡಿ ಸ್ವಸ್ಥ ಶರೀರ ಮತ್ತು ಮನಸ್ಸನ್ನು ಗಟ್ಟಿ ಮಾಡಿಕೊಳ್ಳುವುದರಿಂದ ಸುಂದರ ಮತ್ತು ಸಧೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಸಂಸದ ಭಗವಂತ ಖೂಬಾ ನುಡಿದರು.
ನಗರದ ವಿದ್ಯಾನಗರ ಬಡಾವಣೆಯ ರಾಮಮಂದಿರ ಆವರಣದಲ್ಲಿ ಜೈ ಶ್ರೀರಾಮ್ ಚಾರಿಟೇಬಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ಏಳು ದಿವಸಗಳ ಕಾಲ ನಡೆದ ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಿರಂತರ ಯೋಗ ಮಾಡುವುದರಿಂದ ಮನಸ್ಸು ನಕಾರಾತ್ಮಕ ಚಿಂತನೆ ಮಾಡುವುದನ್ನು ಬಿಟ್ಟು ಸಕಾರಾತ್ಮಕತೆ ಕಡೆಗೆ ಕೊಂಡೊಯ್ಯುತ್ತದೆ. ಯೋಗದಿಂದ ಜೀವನದಲ್ಲಿ ಕೆಟ್ಟ ವಿಚಾರಗಳು ಬರದೆ ಆನಂದಮಯವಾಗಿರುತ್ತದೆ. ಅನೇಕ ಮಹಾತ್ಮರು, ಸಾಧು-ಸಂತರು ಈ ದೇಶಕ್ಕೆ ಉನ್ನತ ಕೊಡುಗೆ ನೀಡಿದ್ದಾರೆ. ನಾವುಗಳು ಕೂಡಾ ಸ್ವಾರ್ಥಕ್ಕಾಗಿ ಬದುಕದೆ ಆರೋಗ್ಯವಂತ ಸಮಾಜಕ್ಕಾಗಿ ಬದುಕೋಣ ಎಂದರಲ್ಲದೆ ಯೋಗದ ಜೊತೆಗೆ ತಮ್ಮ ತಮ್ಮ ಬಡಾವಣೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾದ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಮಾತನಾಡಿ “ಬಾಬಾ ರಾಮದೇವ ಅವರು ಯೋಗವನ್ನು ಈ ದೇಶಕ್ಕೆ ಪರಿಚಯಿಸಿದರು. ಅದನ್ನು ಯುಎನ್‍ಓ ಮೂಲಕ ಅನುಮತಿ ಪಡೆದು ವಿಶ್ವಕ್ಕೆ ಪರಿಚಯಿಸಿದವರು ಪ್ರಧಾನಿ ನರೇಂದ್ರ ಮೋದಿಯವರು. ಇಂತಹ ಚಿಕ್ಕ ಚಿಕ್ಕ ಯೋಗ ಶಿಬಿರದಿಂದ ದೊಡ್ಡ ದೊಡ್ಡ ಕಾರ್ಯಗಳಾಗುತ್ತವೆ. ಈ ನಿಟ್ಟಿನಲ್ಲಿ ವಿದ್ಯಾನಗರ ಬಡಾವಣೆಯ ಯುವಕರ ಕಾರ್ಯ ಶ್ಲಾಘನೀಯ ಎಂದು ನುಡಿದರು.
ವೇದಿಕೆ ಮೇಲೆ ಖ್ಯಾತ ಯೋಗ ಗುರುಗಳಾದ ಯೋಗೇಂದ್ರ ಯದಲಾಪುರೆ, ಜೈ ಶ್ರೀರಾಮ್ ಚಾರಿಟೇಬಲ್ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಚಂದ್ರಶೇಖರ ಸಿದ್ರಾಮಶೆಟ್ಟಿ ಹಾಗೂ ನಗರಸಭೆ ನಾಮನಿರ್ದೇಶಕರಾದ ಕಲ್ಯಾಣರಾವ ಬಿರಾದಾರ ಉಪಸ್ಥಿತರಿದ್ದರು.
ಯೋಗ ಗುರುಗಳಾದ ಯೋಗೇಂದ್ರ ಯದಲಾಪುರೆ, ಭರತನಾಟ್ಯ ಕಲಾವಿದೆ ಕು.ರಾಜೇಶ್ವರಿ, ಸ್ವಾಮಿ ವಿವೇಕಾನಂದ ಶಕ್ತಿಕೇಂದ್ರದ ಅಧ್ಯಕ್ಷರಾದ ರಾಜಕುಮಾರ ಕೋಮಟಿ ಹಾಗೂ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಸತತವಾಗಿ ಏಳು ದಿವಸಗಳ ಕಾಲ ಯೋಗ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳನ್ನು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಟ್ರಸ್ಟ್‍ನ ಸದಸ್ಯರಾದ ಪ್ರಭಾಕರ್ ಜೆಟ್ಲಾ ಸ್ವಾಗತಿಸಿದರು. ಮೀನಾಕ್ಷಿ ಸಂಗೋಳಗಿ ಸ್ವಾಗತ ಗೀತೆ ಹಾಡಿದರು. ಕಾರ್ಯದರ್ಶಿ ಶ್ರೀಕಾಂತ ಪಾಟೀಲ ನಿರೂಪಿಸಿದರು. ಬಾಲಸುಬ್ರಹ್ಮಣ್ಯಂ ಚಾಲಕ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಯದಲಾಪುರ, ಪ್ರಭು ಆಲೂರೆ, ನಾಗೇಂದ್ರರೆಡ್ಡಿ, ಮಲ್ಲಿಕಾರ್ಜುನ ಬೆಳಕೇರಿ, ಜಗದೀಶ ಜೆಟ್ಲಾ, ಧೂಳಪ್ಪ ಡಾವರಗಾಂವ, ಮೋಹನ್ ಚಾರಿ, ಬಾಬುರಾವ ಸಂಗೋಳಗಿ, ಸೂರ್ಯಕಾಂತ ಕೋಟೆ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.