ಸ್ವಸ್ಥಾನ ಸೇರಿದ ಪಂಚ ರಥಗಳು

ದಕ್ಷಿಣ ಕಾಶಿ ನಂಜುಡೇಶ್ವರನ ಸನ್ನಿಧಿಯಲ್ಲಿ ಸರಳ ದೊಡ್ಡ ಜಾತ್ರೆ
ನಂಜನಗೂಡು: ಮಾ.26: ಇಂದು ಅದ್ದೂರಿಯಾಗಿ ನಡೆಯಬೇಕಿದ್ದ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರಾ ಮಹೋತ್ಸವ ಕೊರೋನಾ ಎರಡನೇ ಅಲೆ ಆರಂಭವಾಗಿರುವ ಹಿನ್ನಲೆ ಮುಂಜಾಗ್ರತೆಯಿಂದ ಪುರಾಣ ಪ್ರಸಿದ್ಧ ಗೌತಮ ಪಂಚ ಮಹಾರಥೋತ್ಸವ ಸರಳವಾಗಿ ನೆರವೇರಿತು.
ಈ ಬಾರಿ ಪಂಚ ರಥೋತ್ಸವ ಸರಳವಾಗಿ ಮತ್ತು ಜಿಲ್ಲಾಧಿಕಾರಿಗಳ ನಿಯಮವನ್ನು ಪಾಲಿಸಿ ಆಚರಣೆ ಮಾಡಲಾಯಿತು.
ಬೆಳಿಗ್ಗೆ 5:00 ಗಂಟೆಯಿಂದಲೇ ಭಕ್ತಾದಿಗಳು ದೇವಸ್ಥಾನ ಮುಂಭಾಗ ಉತ್ಸಾಹದಿಂದ ರಥಗಳನ್ನು ಎಳೆಯಲು ಬಂದಿದ್ದರು
6:00 ಸರಿಯಾಗಿ ಎಲ್ಲ ರಥಗಳಿಗೆ ಪೂಜೆ ಮಾಡಿ ಪ್ರತಿಯೊಂದು ರಥಗಳ ಮೇಲೆ ದೇವರುಗಳನ್ನು ಕೂರಿಸಿದರು ಭಕ್ತಾದಿಗಳು ಜೈಕಾರ ಹಾಕುತ್ತಾ ರಥವನ್ನು ಎಳೆದರು.
ಮುಜರಾಯಿ ಇಲಾಖೆ ಅಸಿಸ್ಟೆಂಟ್ ಕಮಿಷನರ್ ವೆಂಕಟರಾಜು ಜಾತ್ರೆಗೆ ಚಾಲನೆ ನೀಡಿದರು. ಬೆಳಗ್ಗೆ 6 ರಿಂದ 7 ವರಗೆ ಸಲ್ಲುವ ಮೀನ ಲಗ್ನದಲ್ಲಿ ಗೌತಮ ಮಹಾರಥಕ್ಕೆ ಬ್ರೇಕ್ ಹಾಕಿ ಜಿಲ್ಲಾಡಳಿತ ಚಿಕ್ಕ ತೇರಿನಲ್ಲೇ ಶ್ರೀಕಂಠೇಶ್ವರನ ರಥೋತ್ಸವ ಮುಗಿಸಿದೆ.


ನಂಜುಂಡೇಶ್ವರ ಎಂದೇ ಹೆಸರಾದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಜರುಗುವ ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ, ಪಾರ್ವತಿ ಹಾಗೂ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಗಳನ್ನು ಅಲಂಕೃತ ರಥಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಭಕ್ತಾದಿಗಳು ಪಂಚ ರಥ ಗಳನ್ನು ನೋಡಿ ಹಣ್ಣು ದವನ ರಥಗಳಿಗೆ ಎಸೆದು ಪುನೀತರಾದರು.
ಕೋವಿಡ್ ನಿಯಮವನ್ನು ಪಾಲಿಸಿ ರಥಬೀದಿಯನ್ನು ನಾನಾಕಡೆ ಪೆÇಲೀಸ್ ಸರ್ಪಗಾವಲು ಹಾಕಿ ಸ್ಥಳೀಯರಿಂದಲೇ ಈ ಬಾರಿ ರಥವನ್ನು ಎಳೆದರು ಭಕ್ತಾದಿಗಳು ಜೈಕಾರ ಹಾಕುತ್ತಾ ಪಂಚ ರಥಗಳನ್ನು ಎಳೆದು ಸ್ವಸ್ಥಾನಕ್ಕೆ ತಲುಪಿಸಿದರು.
ಸಂಪ್ರದಾಯದಂತೆ ಮೊದಲು ಗಣಪತಿ ಸುಬ್ರಹ್ಮಣ್ಯ ಚಂಡಿಕೇಶ್ವರ ಮತ್ತು ಪಾರ್ವತಿ ಶ್ರೀಕಂಠೇಶ್ವರಸ್ವಾಮಿ ರಥಗಳು ಸಾಗಿದವು ಬಣ್ಣ ಬಣ್ಣದ ಬಟ್ಟೆಗಳಿಂದ ಹೂಗಳಿಂದ ಸಿಂಗರಿಸಲಾಯಿತು ರಥದ ಬೀದಿಯನ್ನು ಸ್ವಚ್ಛಗೊಳಿಸಿ ಪ್ರತಿಯೊಂದು ಮನೆಗಳ ಮುಂದೆ ರಂಗೋಲಿಯನ್ನು ಬಿಟ್ಟು ಹಸಿರು ತೋರಣ ಕಟ್ಟಿ ರಥಗಳನ್ನು ಬರಮಾಡಿಕೊಂಡರು. ಭಕ್ತಾದಿಗಳಿಗೆ ಪ್ರಸಾದ ಪಾನಕ ವ್ಯವಸ್ಥೆ ಇರಲಿಲ್ಲ ದೇವಸ್ಥಾನ ವತಿಯಿಂದ ದಾಸೋಹದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಒಟ್ಟಿನಲ್ಲಿ ಕಳೆದ ಬಾರಿ ದೊಡ್ಡ ಜಾತ್ರೆ ನಡೆಯಲಿಲ್ಲ ಈ ಬಾರಿಯಾದರೂ ಸರಳ ರೀತಿಯ ದೊಡ್ಡ ಜಾತ್ರೆ ನಡೆಯಿತು ಭಕ್ತಾದಿಗಳ ಮುಖದಲ್ಲಿ ಮಂದಹಾಸ ಸಮಯಕ್ಕೆ ತಕ್ಕಂತೆ ದೊಡ್ಡ ಜಾತ್ರೆ ಸರಳವಾಗಿ ಮುಗಿಯಿತು.
ಪಾಸ್ ಹೊಂದಿರುವ ಸ್ಥಳೀಯರಿಗೆ ರಥೋತ್ಸವಕ್ಕೆ ಅವಕಾಶ ನೀಡಲಾಗಿತ್ತು. ಹೊರ ಜಿಲ್ಲೆ, ರಾಜ್ಯದ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ಪ್ರತಿ ವರ್ಷ ದೇವಾಲಯದ ಸುತ್ತ ತೇರಿನ ಬೀದಿಯಲ್ಲಿ ಕಿಕ್ಕಿರಿದು ಸೇರುತ್ತಿದ್ದ ಲಕ್ಷಾಂತರ ಭಕ್ತ ಸಾಗರ ದರ್ಶನ ಪಡೆಯುತ್ತಿದ್ದರು ಆದರೇ ಕೊರೋನಾ ಹಿನ್ನಲೆ ಎಲ್ಲಾರಿಗೂ ಬ್ರೇಕ್ ಹಾಕಿದೆ.