ಸ್ವಸಹಾಯ ಸಂಘ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪೂರಕ

ಭಾಲ್ಕಿ :ನ. 11 : ಸ್ವಸಹಾಯ ಸಂಘಗಳು ಮಹಿಳೆಯರ ಸ್ವಾವಲಂಬಿ ಬದುಕಿಗೆ ಪೂರಕವಾಗಿವೆ ಎಂದು ಪಿಕೆಪಿಎಸ್ ಅಧ್ಯಕ್ಷ ರಮೇಶ ಕಡಗಂಚಿ ಅಭಿಪ್ರಾಯ ಪಟ್ಟರು. ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿಕೆಪಿಎಸ್)ನಲ್ಲಿ ಆಯೋಜಿಸಿದ್ದ ಸಹಕಾರ ಕ್ಷೇತ್ರದ ಭೀಷ್ಮ ದಿವಂಗತ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಜನ್ಮದಿನ ಹಾಗೂ ಸ್ವಸಹಾಯ ಸಂಘಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಿವಂಗತ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಹುಟ್ಟು ಹಾಕಿರುವ ಸ್ವಸಹಾಯ ಸಂಘಗಳಲ್ಲಿ ದೇಶದೆಲ್ಲಡೆ ಕ್ರಾಂತಿ ನಡೆಸಿವೆ. ಈ ಸಂಘಗಳು ಮಹಿಳೆಯರ ಆರ್ಥಿಕ ಪ್ರಗತಿ, ಬಡ ಮಕ್ಕಳ ಓದಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ ಎಂದು ಸಂತಸ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಮೇಶ ಆರಾಧ್ಯ, ನಿರ್ದೇಶಕರಾದ ಈಶ್ವರ ಬನ್ನಾಳೆ, ಚಾಂದ ಪಟೇಲ್, ಅಮೃತ, ಶಂಕರ ಮುತ್ತಗೊಂಡ್, ನಿರ್ಮಲಾಬಾಯಿ ಬೆಳಕೇಟೆ, ಕಾಶಪ್ಪ ಸೋನಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಲ್ಲಾಲಿಂಗ ಎಸ್ ಜಟಗೊಂಡ್, ಚಂದ್ರಕಾಂತ ಬಿರಾದಾರ್, ಸಂಗೀತಾ ಜ್ಯಾಂತೆ, ವಿಜಯಕುಮಾರ ಬಿರಾದಾರ್, ಬಸವರಾಜ, ನಂದಕುಮಾರ ಬಿರಾದಾರ್, ಅನಿಲ, ಗೋವಿಂದ ತುಕದೆ, ಸಿದ್ದಲಿಂಗ ಕಡ್ಯಾಳ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಹಾಜರಿದ್ದರು.