ಸ್ವಸಹಾಯ ಸಂಘದ ಸದಸ್ಯರಿಗೆ ತರಭೇತಿ ನೀಡಿ: ಸಿಇಒ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಜು.23- ಜಲಜೀವನ್ ಮಿಶನ್ ಯೋಜನೆಯಲ್ಲಿ ಪೈಫ್ ಜೋಡಣೆ ಪೈಪ್ ಪಿಟ್ಟಿಂಗ್ ಬಗ್ಗೆ ಕೋಳಿಫಾರಂ ನಿರ್ವಹಣೆಯ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯತಿ ಸಿಬ್ಬಂಧಿಗಳು ಸ್ವಸಹಾಯ ಸಂಘದ ಸದಸ್ಯರಿಗೆ ತರಭೇತಿ ನೀಡಿದರೆ ಮಹಿಳೆಯರಿಗೆ ಸ್ವಾವಲಂಭಿ ಜೀವನಕ್ಕೆ ಸಹಾಯಕವಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣ ತಿಳಿಸಿದರು.
ಕೈತೋಟ ಮಾಡುವವರಿಗೆ ನರೇಗಾ ಯೋಜನೆ ಅಡಿಯಲ್ಲಿ ಸಸಿ ಖರೀದಿಸಲಿಕ್ಕೆ 3500 ರೂ ಪ್ರೋತ್ಸಾಹಧನ ಸಿಗಲಿದೆ ಎಂದರು.  ಬೆಣಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ವರಲಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಪ್ರಗತಿ ಹಂತದಲ್ಲಿರುವ ಗೋಶಾಲೆ ಹಾಗೂ ಗೋಶಾಲೆಗೆ ಹೋಗಿ ಬರಲು ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಜಲಜೀವನ್ ಮಿಶನ್ ಯೋಜನೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿ ಪರಿಶೀಲಿಸಿ ಬಳಿಕ ಮಾತನಾಡಿ ಜಲಜೀವನ್ ಮೀಶನ್ ಯೋಜನೆಯಲ್ಲಿ ಫೈಫ್ ಜೋಡಣೆ ಫೈಫ್ ಪಿಟ್ಟಿಂಗ್ ಬಗ್ಗೆ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ ನೀಡುವಂತೆ ಜಲಜೀವನ್ ಮಿಶನ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.ಗೋಶಾಲೆಗೆ ಕೆಆರ್‍ಡಿಎಲ್ ಅನುದಾನದಲ್ಲಿ ಬೋರ್‍ವೆಲ್, ತಂತಿಬೇಲಿ, ಆಫೀಸ್, ಪ್ಲಾಂಟೇಶನ್ ಕಾಮಗಾರಿ ಪೂರ್ಣಗೊಳಿಸುವ ಕಾರ್ಯ ಕೈ ಗೆತ್ತಿಕೊಳ್ಳಲಾಗುವುದು. ನರೇಗಾ ಯೋಜನೆಯ 10 ಲಕ್ಷ ಅನುದಾನದಲ್ಲಿ ಗೋಶಾಲೆಗೆ ರಸ್ತೆ ಹಾಗೂ ಗ್ರಾಮ ಪಂಚಾಯತಿ 10 ಲಕ್ಷ ಅನುದಾನದಲ್ಲಿ ಶೆಡ್ ನಿರ್ಮಾಣ ಕಾಮಗಾರಿ ಕೈಗೆತ್ತಿ ಕೊಳ್ಳಲಾಗುವುದು ಎಂದರು.                                         ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿ ರಮೇಶ್ ಮಹಾಲಿಂಗಾಪುರ,ನರೇಗಾ ಸಹಾಯಕ ನಿರ್ದೆಶಕರಾದ ಉಮೇಶ್ ಗೌಡ,ನೀರು ಸರಾಬರಾಜು ಇಲಾಖೆ ಅಧಿಕಾರಿ ಶ್ರೀಮತಿ ದೀಪಾ, ಅಧಿಕಾರಿ ಬಸವರೆಡ್ಡಿ,ಎಡಿಪಿಸಿ ರಾಹುಲ್,ಪಿಡಿಒಗಳಾದ ಶಾಂತನಗೌಡ ಹಾಗೂ ಮಲ್ಲೇಶ್ ನಾಯ್ಕ್ ಕಾರ್ಯದರ್ಶಿ ಕೆ ಕೊಟ್ರೇಶ್,ಬೆಣಕಲ್ಲು ಪಂಚಾಯತಿ ಲಕ್ಷ್ಮಣ,ಬಿಎಫ್‍ಟಿ ನಾಗರಾಜ,ತಾಂತ್ರಿಕ ಸಂಯೋಜಕ ದೇವೆಂದ್ರನಾಯ್ಕ್ ತಾಂತ್ರಿಕ ಸಹಾಯಕ ಎಸ್‍ಎಂ ಶಿವಕುಮಾರ್,ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಪಂಚಾಯತಿ ಸಿಬ್ಬಂದಿ ಸ್ಥಳೀಯ ನಾಗರಿಕರು ಇದ್ದರು.