ಸ್ವಸಹಾಯ ಸಂಘದ ಕಾರ್ಯಕ್ರಮ ಮಹಿಳೆಯರ ಬದುಕಿಗೆ ದಾರಿದೀಪ

ಬೀದರ:ನ.5: ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನ ನೇತೃತ್ವದಲ್ಲಿ ನಡೆದ ಸ್ವ ಸಹಾಯ ಸಂಘದ ಕಾರ್ಯಕ್ರಮವು ದೇಶ ವಿದೇಶಗಳಲ್ಲೂ ಮಾದರಿಯಾಗಿದ್ದು ಮಹಿಳೆಯರ ಬದುಕಿಗೆ ದಾರಿದೀಪವಾಗಿದೆ. ಸಂಘದ ಸದಸ್ಯರು ಯಶಸ್ವಿಯಾಗಿ ಗುಂಪಿನಲ್ಲಿ ಚಟುವಟಿಕೆಗಳನ್ನು ನಡೆಸಿಕೊಂಡು ಬ್ಯಾಂಕಿ£ ಸಾಲವನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಯಾಗಬೇಕು. ಸ್ವ ಸಹಾಯ ಸಂಘದಲ್ಲಿ ಹಣಕಾಸಿನ ವ್ಯವಹಾರ ವನ್ನಷ್ಠೇ ಮಾಡದೇ ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳಬೇಕು. ಮಹಿಳೆಯರ ಅಭಿವೃದ್ದಿಗಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲಾಗಿದ್ದು ಮಹಿಳೆಯರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ತರಬೇತಿಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಆತ್ಮವಿಶ್ವಾಸ ನಿರ್ವಹಣಾ ಸಾಮಥ್ರ್ಯ ಮತ್ತು ಸ್ವಯಂಪ್ರೇರಿತ ಶಿಸ್ತು ಮತ್ತು ಪ್ರಾಮಾಣಿಕತೆಯೊಂದಿಗೆ ಕೆಲಸ ನಿರ್ವಹಿಸಿದಾಗ ಒಬ್ಬ ಉತ್ತಮ ನಾಯಕನಾಗಿ ರೂಪುಗೊಳ್ಳಬಹುದು. ಜನರ ವಿಶ್ವಾಸ ಗಳಿಸಿಕೊಳ್ಳಬಹುದು. ನಾಯಕನಾದವನು ಸಮಾeದ ಹಿತಕ್ಕಾಗಿ ದುಡಿಯುವಂತಹ ಉನ್ನತ ಮನೋಭಾವನೆಯನ್ನು ಹೊಂದಿರಬೇಕು. ತರಬೇತಿಗಳ ಮೂಲಕ ಸಾಮಥ್ರ್ಯಗಳನ್ನು ಪಡೆಯಬಹುದಾಗಿದೆ. ಸ್ವ ಸಹಾಯ ಸಂಘಗಳಿಂದ ಮಹಿಳೆಯರಲ್ಲಿ ರಾಜಕೀಯ ನಾಯಕತ್ವ ಕೂಡಾ ರೂಪುಗೊಳ್ಳುತ್ತಿದೆ. ಬೀದರ ಜಿಲ್ಲೆಯಲ್ಲಿ ಸ್ವ ಸಹಾಯ ಸಂಘದ 530ಕ್ಕಿಂತಲೂ ಹೆಚ್ಚು ಸದಸ್ಯರು ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿರುವುದೇ ನಿದರ್ಶನವಾಗಿದೆ. ಮಹಿಳಾ ಸಬಲೀಕರಣ, ಕುಟುಂಬ ಬಲವರ್ಧನೆ, ಸ್ವಾವಲಂಬನೆ ಬದುಕು ಸಂಘಗಳಿಂದ ಸಾಧ್ಯವಾಗಿದೆ ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕಿ ಮತ್ತು ಸಹಕಾರಿ ಧುರೀಣೆ ಶ್ರೀಮತಿ ಶಕುಂತಲಾ ಬೆಲ್ದಾಲೆಯವರು ನುಡಿದರು.

ಬೀದರ ಡಿಸಿಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬೀದರ ಜಿಲ್ಲೆಯ ಆಯ್ದ ಸ್ವ ಸಹಾಉ ಗುಂಪುಗಳ ಸದಸ್ಯರಿಗೆ ಕಾರ್ಮೆಲ್ ಸೇವಾ ಟ್ರಸ್ಟ ಸಹಯೋಗದಲ್ಲಿ ನಡೆದ ನಾಯಕತ್ವ ಅಭಿವೃದ್ದಿÀ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಘಗಳ ಅಭಿವೃದ್ದಿಗೆ ಉತ್ತಮ ನಾಯಕತ್ವ ಬಹಳ ಮುಖ್ಯವಾಗಿದೆ. ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದಾಗ ಅನುಭವ ಸಿಗುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಪಂಚಾಯತ ಮಹಿಳಾ ಸದಸ್ಯರ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಜಗದೇವಿಯವರು ಪಂಚಾಯತ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ನಾಯಕತ್ವದ ಆವಶ್ಯಕತೆ ಮತ್ತು ತರಬೇತಿಗಳಿಂದಾಗುವ ಪ್ರಯೋಜ£ಗಳ ಬಗ್ಗೆ ತಿಳಿಸಿದರು. ತರಬೇತಿಗಳಲ್ಲಿ ಭಾಗವಹಿಸಿ ಜ್ಞಾನ ಹೆಚ್ಚಿಸಿಕೊಳ್ಳುವುದರ ಜೊತೆಗೆ ಅನುಭವವನ್ನು ಪಡೆಯಬಹುದಾಗಿz. ಎಂದು ಹೇಳಿದರು.

ಸಮಾರಂಭದಲ್ಲಿ ಪಂಚಾಯತ ಮಹಿಳಾ ಸದಸ್ಯರ ಒಕ್ಕೂmದ ಅಲಿಯಾಬಾದ ಜಯಶ್ರೀ, ಮನ್ನಳ್ಳಿಯ ನಿರ್ಮಲಾ ಸಹಾರ್ದದ ಮಂಜುನಾಥ ಬಾಗವತ, ಎಸ್ ಜಿ ಪಾಟೀಲ ಅನಿಲ್ ಪರೇಶ್ಯಾನೆ ಉಪಸ್ಥಿತರಿದ್ದರು.

ಕಾರ್ಯಕ್ರಮ ನಿರ್ವಹಿಸಿದ ಸಹಾರ್ದ ನಿರ್ದೇಶಕ ಬಿ. ಸುಬ್ರಹ್ಮಣ್ಯ ಪ್ರಭು, ತರಬೇತಿ ಉದ್ದೇಶಗಳನ್ನು ವಿವರಿಸಿದರು. ಸಹಕಾರದಿಂದ ಸಮೃದ್ದಿ ಸ್ವ ಸಹಾಯದಿಂದ ಅಭಿವೃದ್ದಿ ಎಂಬ ತತ್ವÀದಡಿಯಲ್ಲಿ ಸ್ವ ಸಹಾಯ ಸಂಘಗಳು ಸಹಕಾರೀ ಸಂಸ್ಥೇಗಳ ಜೊತೆ ಸಂಪರ್ಕ ಹೊಂದಿದ್ದು ಸಹಕಾರೀ ತತ್ವದಡಿಯಲ್ಲಿ ನಡೆಯುತ್ತಿವೆ ಎಂದು ಹೇಳಿದರು.