ಬಾಗೇಪಲ್ಲಿ,ಜೂ.೮- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸಿಕೊಂಡು ಬರುತ್ತಿರುವ ಅನೇಕ ಸಮಾಜ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣೆಯು ಒಂದು. ಆದ್ದರಿಂದ ಪ್ರತಿ ವರ್ಷದ ಹಾಗೆ ಪ್ರಸ್ತುತ ವರ್ಷವೂ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನಾದ್ಯಂತ ಪರಿಸರ ಸಂರಕ್ಷಣೆಯ ಬಗ್ಗೆ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತಿದೆ.
ಈ ಸಂದರ್ಭದಲ್ಲಿ ತಾಲೂಕಿನ ಪುಟ್ಟಪರ್ತಿ ಗ್ರಾಮದಲ್ಲಿ ಸ್ವಸಹಾಯ ಸಂಘ ಮತ್ತು ಪ್ರಗತಿ ಬಂದು ಒಕ್ಕೂಟ ಗ್ರಾಮಸ್ಥರು ಶಾಲಾ ಎಸ್.ಡಿ.ಎಂ.ಸಿ. ಶಿಕ್ಷಕ ವೃಂದ ಎಲ್ಲರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶಾಲಾ ಮಕ್ಕಳಿಗೆ ಗ್ರಾಮಸ್ಥರಿಗೆ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಆವರಣ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕ್ ಯೋಜನಾಧಿಕಾರಿ ಶ್ರೀಯುತ ಗಿರೀಶ್ ಪಿ. ಕೃಷಿ ಅಧಿಕಾರಿ ಧನಂಜಯ ಮೂರ್ತಿ. ಮೇಲ್ವಿಚಾರಕರಾದ ಶ್ರೀಯುತ ಉಮೇಶ್. ಮುಖ್ಯೋಪಾಧ್ಯಾಯರಾದ ಶ್ರೀಯುತ ಗಂಗಪ್ಪ ಈ. ಶಿಕ್ಷಕರದ ವೆಂಕಟೇಶ್ವರ. ಶರಣ ಕುಮಾರ್. ಮುಬಿನ್ ತಾಜ್. ಸಂಸ್ಥೆಯ ಕಾರ್ಯಕರ್ತರಾದ ಶ್ರೀಯುತ ಭಾವಣ್ಣ. ಪ್ರಮೀಳಮ್ಮ. ವೆಂಕಟರತ್ನಮ್ಮ ಉಪಸ್ಥಿತರಿದ್ದರು.