ಸ್ವಸಹಾಯ ಸಂಘಗಳು ಆರ್ಥಿಕ ವಾಗಿ ಸದೃಢಗೊಳ್ಳಲಿ: ದರ್ಶನಾಪುರ

ಶಹಾಪುರ :ಜು.24: ಸ್ತ್ರೀಯರು ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಿ ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಕರೆ ನೀಡಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕ ಪಂಚಾಯಿತಿ ಶಿಶು ಅಭಿವೃದ್ಧಿ ಶಹಾಪುರ ಮತ್ತು ಸುರಪುರ ವತಿಯಿಂದ ಅಮೃತ ಯೋಜನೆ ಅಡಿಯಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಬೀಜಧನ ಚೆಕ್ ವಿತರಿಸಿ ಮಾತನಾಡಿದ ಅವರು. ಸರ್ಕಾರ ಮಹಿಳೆಯರಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು ಸ್ತ್ರೀಯರು ಆರ್ಥಿಕವಾಗಿ ಸದೃಢರಾಗಬೇಕು ನಾನು ಸಹ ಸ್ತ್ರೀ ಶಕ್ತಿ ಸಂಘಗಳಿಗೆ ಡಿ.ಸಿ.ಸಿ. ಬ್ಯಾಂಕ್ ಸೇರಿದಂತೆ ಹಲವು ಮೂಲಗಳಿಂದ ಸಹಾಯ ಕಲ್ಪಿಸುವ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. 11 ಗ್ರಾಮ ಪಂಚಾಯಿತಿಯ ಒಟ್ಟು 39 ಗ್ರಾಮ ಪಂಚಾಯತ್ ಸ್ವಸಸಾಯ ಸಂಘಗಳಿಗೆ ಬೀಜಧನ ಚೆಕ್ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶಹಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಗುರುರಾಜ ಶೆಟ್ಟಿ ತಾಲೂಕ ಪಂಚಾಯತ ಯೋಜನೆ ಅಧಿಕಾರಿಗಳಾದ ರಾಘವೇಂದ್ರ ಕುಲಕರ್ಣಿ ತಾಲೂಕ ನೌಕರ ಸಂಘದ ಅಧ್ಯಕ್ಷರಾದ ರಾಯಪಗೌಡ ಹುಡೇದ ಸಹಾಯಕ ಸಿಡಿಪಿಓ ಅಧಿಕಾರಿಗಳಾದ ಲಾಲಸಾಬ ಪೀರಾಪುರ ಸುರಪುರ ವಿವಿಧ ಗ್ರಾಮಗಳಿಂದ ಆಗಮಿಸಿದ
ಸ್ತ್ರೀ ಶಕ್ತಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಅಧಿಕಾರಿಗಳು ಹಾಜರಿದ್ದರು.