ಸ್ವಸಹಾಯ ಸಂಘಗಳು ಆರ್ಥಿಕ ಚಟುವಟಿಕೆ ನಡೆಸಿದರೆ ಮಾತ್ರ ಸಾಲ ಪಡೆಯಲು ಸಾಧ್ಯ

????????????????????????????????????

ಮುಳಬಾಗಿಲು ಸೆ.೨೫- ಮಹಿಳಾ ಸ್ವಸಹಾಯ ಸಂಘಗಳು ಸಕ್ರೀಯವಾಗಿ ಪ್ರತಿವಾರ ಸಭೆ ನಡೆಸಿ ಅರ್ಥಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಹಣ ಕೂಡಿರುವುದನ್ನು ಕಲಿಯಬೇಕು ಇದರಿಂದ ಎಲ್ಲರೂ ಒಂದಡೆ ಸೇರಿ ಸಾಲ ಪಡೆಯಲು ಸಂಘದ ಚಟುವಟಿಕೆಗಳನ್ನು ಪ್ರಾಮಾಣಿಕತೆಯಿಂದ ಮಾಡುವ ಮೂಲಕ ಶೂನ್ಯಬಡ್ಡಿಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಪ್ರತಿಯೊಬ್ಬರು ೫೦ಸಾವಿರ ಸಾಲವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದ ಡಿವಿಜಿ ಗಡಿ ಕನ್ನಡ ಭವನದಲ್ಲಿ ಶುಕ್ರವಾರ ಕಸಬಾ ವಿಎಸ್.ಎಸ್.ಎನ್ ಮೂಲಕ ೬೦ ಮಹಿಳಾ ಸ್ವಸಹಾಯ ಸಂಘಗಳ ೬೦೦ ಸದಸ್ಯರಿಗೆ ತಲಾ ೫೦ಸಾವಿರದಂತೆ ೩ ಕೋಟಿ ಹಣವನ್ನು ಶೂನ್ಯ ಬಡ್ಡಿಯಲ್ಲಿ ವಿತರಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಮುಳಬಾಗಿಲು ತಾಲೂಕಿನ ಮಹಿಳೆಯರಿಗೆ ೧೦ ಕೋಟಿ ಸಾಲವನ್ನು ಮಡಿಲು ತುಂಬವ ಕಾರ್ಯಕ್ರಮ ಮೂಲಕ ವಿತರಣೆ ಮಾಡಲಾಗುವುದು ಮಹಿಳೆಯರು ಪ್ರಮಾಣಿಕತೆಯಿಂದ ಮರುಪಾವತಿ ಮಾಡುತ್ತಿದ್ದಾರೆ ಇದು ಬ್ಯಾಂಕಿನ ಬೆಳವಣಿಗೆಗೆ ಅಶಾದಾಯಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೆಲವರು ಡಿಸಿಸಿ ಬ್ಯಾಂಕ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು ಅದಕ್ಕೆ ತಕ್ಕ ಉತ್ತರವನ್ನು ಮಹಿಳೆಯರಿಗೆ ಸಾಲ ನೀಡುವ ಮೂಲಕ ನೀಡುತ್ತಿದ್ದೇವೆ ಯಾವುದೇ ಪಕ್ಷ ಪಾತ ಮಾಡುತ್ತಿಲ್ಲ ಜಾತಿ-ಧರ್ಮ ನೋಡುತ್ತಿಲ್ಲ ಉತ್ತಮ ಸೇವೆ ಸಲ್ಲಿಸುವುದೇ ನಮ್ಮ ಗುರಿಯಾಗಿದೆ. ಸಾಲಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೂ ಎಟಿಎಂ ಕಾರ್ಡ್ ವಿತರಿಸಿ ಅವರ ಖಾತೆಗೆ ೫೦ಸಾವಿರ ಜಮಾ ಮಾಡಲಾಗಿದೆ ಅವರು ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಹಣ ಮಾತ್ರ ಡ್ರಾ ಮಾಡಿಕೊಂಡು ಖಾತೆಯಲ್ಲೇ ಉಳಿತಾಯ ಮಾಡಿಕೊಳ್ಳಲು ಅವಕಾಶ ಇದೆ ಇದನ್ನು ಉಪಯೋಗಿಸಿಕೊಳ್ಳಬೇಕು ಬೇರೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟರೆ ಪ್ರಯೋಜನವಾಗುವುದಿಲ್ಲ ನಿಮ್ಮ ಡಿಸಿಸಿ ಬ್ಯಾಂಕ್ ಠೇವಣಿ ಇಟ್ಟರೆ ನಿಮ್ಮ ಹೊಲಕ್ಕೆ ಗೊಬ್ಬರ ಹಾಕಿದಂತೆ ಎಂದು ಭಾವಿಸಬೇಕು ಎಂದು ಸಲಹೆ ನೀಡಿದರು.
ಇಲ್ಲಿ ಸಾಲ ಪಡೆದು ಹೆಚ್ಚಿನ ಬಡ್ಡಿ ಆಸೆಗೆ ಬೇರೆಯವರಿಗೆ ಹಣ ನೀಡಿದರೆ ಅಸಲು ಬರುವುದಿಲ್ಲ ಬಡ್ಡಿಯೂ ಬರುವುದಿಲ್ಲ ಕೃಷಿ, ಹೈನುಗಾರಿಕೆ, ವ್ಯಾಪಾರ ಮತ್ತಿತರರ ಚಟುವಟಿಕೆಗಳಿಗೆ ಉಪಯೋಗಿಸಿಕೊಂಡು ಅರ್ಥಿಕವಾಗಿ ಸಬಲರಾಗಿ ಮರುಪಾವತಿಯನ್ನು ಪ್ರಮಾಣಿಕತೆಯಿಂದ ಮಾಡಿ ಮತ್ತೇ ಹೆಚ್ಚಿನ ಸಾಲವನ್ನು ಪಡೆಯಬೇಕೆಂದು ಮಹಿಳೆಯರಿಗೆ ಗೋವಿಂದಗೌಡರು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಮಾತನಾಡಿ ನಷ್ಠಕ್ಕೆ ಒಳಗಾಗಿ ಮುಚ್ಚುವ ಸ್ಥಿತಿಯಲ್ಲಿದ್ದ ಕೋಲಾರ ಡಿಸಿಸಿ ಬ್ಯಾಂಕ್‌ನ್ನು ಬ್ಯಾಲಹಳ್ಳಿ ಗೋವಿಂದಗೌಡರ ಅಧ್ಯಕ್ಷರಾದ ನಂತರ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಅಧಿಕಾರಿಗಳು ಸಿಬ್ಬಂದಿ ಉತ್ತಮ ಕಾರ್ಯಕ್ರಮಗಳ ಮೂಲಕ ಬ್ಯಾಂಕ್‌ಗೆ ಪುನಶ್ಚೇತನ ನೀಡಿ ಈಗ ರಾಷ್ಟ್ರದಲ್ಲೇ ಮಹಿಳೆಯರಿಗೆ ಹೆಚ್ಚು ಸಾಲ ನೀಡಿದ ಹೆಗ್ಗಳಿಕೆಗೆ ಒಳಗಾಗಿದೆ ಮುಂದೆ ಪ್ರತಿ ಮಹಿಳೆಯರಿಗೆ ೧ ಲಕ್ಷ ಸಾಲ ನೀಡುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಕಸಬಾ ವಿ.ಎಸ್.ಎಸ್.ಎನ್ ಅಧ್ಯಕ್ಷ ಪಿ.ಶ್ರೀನಿವಾಸಲು ಮಾತನಾಡಿ ಕಸಬಾ ವಿಎಸ್.ಎಸ್.ಎನ್ ಬ್ಯಾಂಕ್ ೨೭ ಲಕ್ಷ ನಷ್ಠದಲ್ಲಿದ್ದು ಕಳೆದ ವರ್ಷ ೧೭ ಲಕ್ಷ ಲಾಭ ಪಡೆದಿದೆ ಇದಕ್ಕೆ ಪ್ರಮುಖ ಕಾರಣ ಕೃಷಿ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಾಲ ವಿತರಣೆ ಮತ್ತು ಮರುಪಾವತಿ ಕಾರಣವಾಗಿದೆ ಬ್ಯಾಂಕಿನ ನೂತನ ಕಟ್ಟಡ ನಿರ್ಮಾಣಕ್ಕೆ ಡಿಸಿಸಿ ಬ್ಯಾಂಕ್‌ನಿಂದ ೨ ಕೋಟಿ ಹಣ ಶೂನ್ಯ ಬಡ್ಡಿಯಲ್ಲಿ ನೀಡಬೇಕೆಂದು ಮನವಿ ಮಾಡಿದರು. ಕರೋನ ಲಾಕ್‌ಡೌನ್ ಸಮಯದಲ್ಲಿ ಬ್ಯಾಂಕ್ ಸಾಲ ಮನ್ನ ಆಗುತ್ತದೆ ಎಂಬ ವದಂತಿ ಇದ್ದರೂ ಅದನ್ನು ಲೆಕ್ಕಿಸದೆ ೬ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಪ್ರಮಾಣೀಕತೆಯಿಂದ ಸಾಲ ಮರುಪಾವತಿ ಮಾಡಲು ಮಾರ್ಗದರ್ಶನ ನೀಡಿದ ಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಸನ್ಮಾಸಲಾಗುತ್ತದೆ ಮುಂದೆ ಎಲ್ಲಾ ಸಂಘದ ಪ್ರತಿನಿಧಿಗಳು ಈ ರೀತಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಸೋಮೇಶ್ವರಪಾಳ್ಯ ಎಂ.ಶ್ರೀನಿವಾಸ್, ಬ್ಯಾಂಕಿನ ಉಪಾಧ್ಯಕ್ಷ ಎಸ್.ವಿ.ತಿಪ್ಪಣ್ಣ, ನಿರ್ದೇಶಕರಾದ ಟಿ.ವಿ.ವೆಂಕಟರಾಮಯ್ಯ, ಮುನಿವೆಂಕಟಪ್ಪ, ಶ್ರೀನಿವಾಸಯ್ಯ, ಕೆಪಿ ಆನಂದಕುಮಾರ್, ಎಂ.ಕೃಷ್ಣಪ್ಪ, ಮೋಹನ್ ಕುಮಾರ್, ಮುಖಂಡ ಅಣೆಹಳ್ಳಿ ಗೋಪಾಲ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಶಂಕರ್, ಮತ್ತು ಸಿಬ್ಬಂದಿ ಇದ್ದರು.
೨೪ ಎಂ.ಬಿಎಲ್ ಪೋಟೋ.೦೨: ಮುಳಬಾಗಿಲಿನ ಡಿವಿಜಿ ಗಡಿ ಕನ್ನಡ ಭವನದಲ್ಲಿ ಕಸಭಾ ವಿಎಸ್.ಎಸ್.ಎನ್ ಮೂಲಕ ಡಿಸಿಸಿ ಬ್ಯಾಂಕ್‌ನಿಂದ ೬೦ ಸಂಘಗಳ ೬೦೦ ಸದಸ್ಯರಿಗೆ ತಲಾ ೫೦ಸಾವಿರ ರೂನಂತೆ ೩ ಕೋಟಿ ಸಾಲ ವಿತರಣೆ ಕಾರ್ಯಕ್ರಮ ಉದ್ಗಾಟಿಸುತ್ತಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಮತ್ತಿತರರು ಇದ್ದಾರೆ. (ಮಹಿಳಾ ಸಂಘದ ಪ್ರತಿನಿಧಿಗಳನ್ನು ಸನ್ಮಾನಿಸಿ ಎಟಿಎಂ ಕಾರ್ಡ್‌ನ್ನು ವಿತರಿಸುತ್ತಿರುವುದು.)