ಸ್ವರ ಧಾರಾ ಸಂಗೀತ ಕಾರ್ಯಕ್ರಮ: ಸನ್ಮಾನ

ಹುಬ್ಬಳ್ಳಿ,ಏ6: ಬೆಂಗಳೂರಿನ ಸಪ್ತಕ ಸಂಸ್ಥೆ ಹಾಗೂ ಧಾರವಾಡದ ಸರಸ್ವತಿ ಸಂಗೀತ ವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಸ್ವರ-ಧಾರಾ ಸಂಗೀತ ಕಾರ್ಯಕ್ರಮವು ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಡಾ. ಹರೀಶ ಹೆಗಡೆ ರಾಗ ಗಾವತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ, ಭಜನ್‍ನೊಂದಿಗೆ ತಮ್ಮ ಕಾರ್ಯಕ್ರಮ ನಡೆಸಿಕೊಟ್ಟು ಶ್ರೋತೃಗಳ ಮನ ಸೂರೆಗೊಂಡರು. ಅವರಿಗೆ ಮಲ್ಲೇಶ ಹೂಗಾರ ತಬಲಾ, ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.
ನಂತರ ಗೋವಾದ ಡಾ. ಶಶಾಂಕ ಮಕ್ತೇದಾರ್ ಅವರು ರಾಗ ಕಾಮೇದ್, ಮೂಲಗುಂಜಿ, ನಾಯಕಿ ಕಾನ್ಹಡಾ ರಾಗವನ್ನು ಪ್ರಸ್ತುತಪಡಿಸಿದರು. ಅವರಿಗೆ ಡಾ. ಉದಯ ಕುಲಕರ್ಣಿ ತಬಲಾ, ಪಂ. ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಸಾಥ್ ನೀಡಿ ನೆರೆದ ಜನಸ್ತೋಮವನ್ನು ರಂಜಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕøತ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಇವರನ್ನು ಸನ್ಮಾನಿಸಲಾಯಿತು.
ಸಂಗೀತ ದಿಗ್ಗಜರಾದ ವಸಂತ ಕನಕಾಪುರ, ಜಿ.ಎಸ್. ಹೆಗಡೆ, ಕಾರ್ಯಕ್ರಮದಲ್ಲಿ ಪಂ. ರಘುನಾಥ ನಾಕೋಡ, ವಿದೂಷಿ ರೇಣುಕಾ ನಾಕೋಡ, ಪಂ. ಶಾಂತಲಿಂಗಪ್ಪ ದೇಸಾಯಿ ಕಲ್ಲೂರ, ಉಸ್ತಾದ ಶಫಿಕ್‍ಖಾನ್, ಡಾ. ಪ್ರಕಾಶ ಭಟ್ಟ, ಪಂ. ಮಲ್ಲಿಕಾರ್ಜುನ ತರ್ಲಗಟ್ಟಿ, ಉದಯಕುಮಾರ ದೇಸಾಯಿ, ಡಾ. ನಂದಾ ಪಾಟೀಲ, ಶಂಕರ ಕುಂಬಿ ಉಪಸ್ಥಿತರಿದ್ದರು.
ಸ್ವರ-ಧಾರಾ ಸಂಗೀತ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕøತ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಇವರನ್ನು ಸನ್ಮಾನಿಸಲಾಯಿತು.
ಸರಸ್ವತಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸತೀಶ ಜಾಧವ ಕಾರ್ಯಕ್ರಮ ನಿರೂಪಿಸಿದರು. ವಿದೂಷಿ ರಾಧಾ ದೇಸಾಯಿ ವಂದಿಸಿದರು.